

ಬಂಟ್ವಾಳಃ ಕಾರು ರಿಕ್ಷಾ ನಡುವೆ ಅಪಘಾತದಲ್ಲಿ ರಿಕ್ಷಾ ಚಾಲಕ ಸಾವನ್ನಪ್ಪಿದ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಮೆಲ್ಕಾರ್ ಸಮೀಪದ ನರಹರಿ ನಗರ ನಿವಾಸಿ ರಾಘವೇಂದ್ರ ರಾವ್(40) ಮೃತ ವ್ಯಕ್ತಿ.
ಬಂಟ್ವಾಳ ಬಂಡಾರಿಬೆಟ್ಟು ಎಂಬಲ್ಲಿ ಅ.9 ರಂದು ಈ ಅಪಘಾತ ನಡೆದಿತ್ತು. ಮೂಡಬಿದ್ರೆ ಕಡೆಗೆ ಹೋಗುತ್ತಿದ್ದ ತವೆರಾ ಕಾರಿಗೆ ಹಿಂಬದಿಯಿಂದ ರಿಕ್ಷಾ ಚಾಲಕನ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಚಾಲಕ ರಾಘವೇಂದ್ರ ರಾವ್ ಅವರಿಗೆ ಗಾಯಗಳಾಗಿತ್ತು.
ಗಾಯಗೊಂಡ ರಿಕ್ಷಾ ಚಾಲಕ ಮಂಗಳೂರು ವೆನ್ಲಾಕ್ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಮುಂಜಾನೆ ಚಿಕಿತ್ಸೆ ಫಲಕಾರಿಯಾಗದೆ ಅವತು ಮೃತ ಪಟ್ಟಿದ್ದಾರೆ ಎಂದು ಬಂಟ್ವಾಳ ಟ್ರಾಫಿಕ್ ಪೋಲೀಸರು ತಿಳಿಸಿದ್ದಾರೆ.








