

ಕಲ್ಲಡ್ಕ ರೈತರ ಸೇವಾ ಸಹಕಾರ ಸಂಘವು ೨೦೧೮-೧೯ ನೇ ಸಾಲಿನಲ್ಲಿ ಸಾಧಿಸಿದ ಪ್ರಗತಿಯನ್ನು ಪರಿಗಣಿಸಿ ದ.ಕ.ಜಿಲ್ಲಾಕೇಂದ್ರ ಸಹಕಾರಿ ಬೇಂಕು ಲಿ, ಮಂಗಳೂರು ಇದರ ೨೦೧೮-೧೯ ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಸಂಘದಉತ್ತಮ ಸಾಧನೆಗಾಗಿ ಪ್ರಶಸ್ತಿಯನ್ನು ಪಡೆದಿರುತ್ತದೆ. ಈ ಪ್ರಶಸ್ತಿಯನ್ನು ಸಂಘದಅಧ್ಯಕ್ಷರಾದ .ಕೆ.ಪದ್ಮನಾಭ ಕೊಟ್ಟಾರಿ ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿಯಾದ ಸುರೇಶ.ಕೆರವರು ದ.ಕ.ಜಿಲ್ಲಾಕೇಂದ್ರ ಸಹಕಾರ ಬೇಂಕಿನ ಅಧ್ಯಕ್ಷರಾದ ಡಾ| ಎಂ.ಎನ್.ರಾಜೇಂದ್ರಕುಮಾರ್ ಮತ್ತು ನಿರ್ದೇಶಕರಾದ ರಾಜಾರಾಮ ಭಟ್ಟಿ.ಜಿ. ಇವರಿಂದ ಸ್ವೀಕರಿಸಿದರು.. ಕಲ್ಲಡ್ಕ ರೈತರ ಸೇವಾ ಸಹಕಾರಿ ಸಂಘವು ೨೦೧೮-೧೯ ನೇ ಸಾಲಿನಲ್ಲಿರೂ ೨೧೮ ಕೋಟಿ ವ್ಯವಹಾರ ನಡೆಸಿ, ರೂ ೧.೨೫ ಕೋಟಿ ಲಾಭಗಳಿಸಿ, ಆಡಿಟ್ ವರ್ಗೀಕರಣದಲ್ಲಿ ’ಎ’ ತರಗತಿ ಹೊಂದಿರುತ್ತದೆ. ಸಂಘವು ರೂ ೩೬.೫೦ ಕೋಟಿ ಠೇವಣಿ ಸಂಗ್ರಹಿಸಿ, ತನ್ನ ಸದಸ್ಯರಿಗೆರೂ ೩೫.೮೦ ಕೋಟಿ ಸಾಲ ವಿತರಿಸಿರುತ್ತದೆ.
ಸಂಘದಉತ್ತಮ ಪ್ರಗತಿ ಹಾಗೂ ಸಾಧನೆಗಾಗಿ ದ.ಕ.ಜಿಲ್ಲಾಕೇಂದ್ರ ಸಹಕಾರಿ ಬೇಂಕು ಕಳೆದ ೪ ವರ್ಷಗಳಿಂದ ಉತ್ತಮ ಪ್ರಗತಿ ಹಾಗೂ ಅಭಿವೃದ್ಧಿ ಹೊಂದುತ್ತಿರುವ ಸಹಕಾರ ಸಂಘವೆಂದು ಗುರುತಿಸಿ ಸನ್ಮಾನ ಪ್ರಶಸ್ತಿ ಪತ್ರ ಹಾಗೂ ಫಲಕ ನೀಡಿ ಗೌರವಿಸಿದೆ.







