ಬಂಟ್ವಾಳ : ಶಂಭೂರು ಎ.ಎಂ.ಆರ್.ಡ್ಯಾಂ .ನಲ್ಲಿ ಅಪರಿಚಿತ ಗಂಡಸಿನ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.
ಎ.ಎಂ.ಆರ್.ಡ್ಯಾಂನಲ್ಲಿ ಶವ ಸಿಕ್ಕಿಹಾಕಿಕೊಂಡಿದ್ದು , ಡ್ಯಾಂನ ಮುಖ್ಯಸ್ಥರು ಗ್ರಾಮಾಂತರ ಪೋಲೀಸರಿಗೆ ವಿಷಯ ತಿಳಿಸಿದ್ದಾರೆ.
ಸುಮಾರು ಮೂರು ದಿನಗಳ ಹಿಂದೆ ಸಾವನ್ನಪ್ಪಿರಬಹುದು ಎಂಬ ಶಂಕೆ ಯನ್ನು ಗ್ರಾಮಾಂತರ ಎಸ್.ಐ.ಪ್ರಸನ್ನ ವ್ಯಕ್ತಪಡಿಸಿದ್ದಾರೆ.

ಬಂಟ್ವಾಳ ತಾಲೂಕು ಶಂಬೂರಿನಲ್ಲಿರುವ ಎ.ಎ.ಆರ್ ಡ್ಯಾಂ ನಲ್ಲಿ ಅಪರಿಚಿತ ಗಂಡಸಿನ ಮೃತ ದೇಹ ಪತ್ತೆಯಾಗಿದ್ದು ಅಂದಾಜು ವಯುಸ್ಸು 35-40 ವಯಸ್ಸು ಆಗಿರಬಹುದು ಎಂದು ಪೋಲೀಸರು ಅಂದಾಜಿಸಿದ್ದಾರೆ.
ಬಿಳಿ ಮಿಶ್ರಿತ ಕಪ್ಪು ಕೂದಲು ಸಾಧಾರಣ ಮೈಕಟ್ಟು ಎತ್ತರ 5.4 ಇಂಚು ಹೊಡಿದ್ದು ಮೃತನ ಸೊಂಟದಲ್ಲಿ ಕಪ್ಪು ಬಣ್ಣದ ಉಡುದಾರ ಇರುತ್ತದೆ. ಮೃತದೇಹವನ್ನು ಮಂಗಳೂರು ವೆನ್ ಲಾಕ್ ಶವಗಾರದಲ್ಲಿ ಇರಿಸಲಾಗಿದ್ದು, ಅಪರಿಚಿತ ಮೃತ ದೇಹದ ಗುರುತು ಪತ್ತೆಗೆ ಸಹಕರಿಸುವಂತೆ ಬಂಟ್ವಾಳ ಗ್ರಾಮಾಂತರ ಠಾಣಾ ಎಸ್.ಐ. ‌ಪ್ರಸನ್ನ ವಿನಂತಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ಸಂಪರ್ಕಿಸುವಂತೆಯೂ ತಿಳಿಸಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here