

ಬಂಟ್ವಾಳ: ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ದೇವಾಲಯದ ಶಾರದ ಮಹೋತ್ಸವ ವಿಸರ್ಜನಾ ಶೋಭಾಯಾತ್ರೆಯ ಸಂದರ್ಭದಲ್ಲಿ ಬಂಟ್ವಾಳ ವಲಯ ಭಜರಂಗದಳದ ವತಿಯಿಂದ 9 ನೇ ವರ್ಷದ ಟ್ಯಾಬ್ಲೋಗೆ ಬಂಟ್ವಾಳದ ಭಜರಂಗಿ ಹುಲಿಗಳು ಪ್ರಥಮವಾಗಿ ಬಣ್ಣ ಹಚ್ಚಿವೆ.
ಮಂಡಾಡಿ ದುರ್ಗಾಂಭ ಮಂದಿರದಲ್ಲಿ ಹುಲಿ ವೇಷಧಾರಿಗಳು ಮುಖಕ್ಕೆ ಬಣ್ಣ ಹಚ್ಚುವ ವಿಧಿವಿಧಾನಗಳು ನಡೆದವು. ಯುವಕರು
ಹುಲಿ ವೇಷದ ಬಣ್ಣ ಹಾಕುವ ಮುನ್ನ ದುರ್ಗಾಂಭ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಸಂಪ್ರದಾಯದಂತೆ ದೇವರ ಎದುರು ಹುಲಿ ನಲಿಕೆಯ ಪ್ರದರ್ಶನ ನೀಡಿದರು.
ಇಂದು ರಾತ್ರಿ ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ದೇವಾಲಯದ ಶಾರದೆಯ ವಿಸರ್ಜನಾ ಶೋಭಾಯಾತ್ರೆಯಲ್ಲಿ ಬಂಟ್ವಾಳ ವಲಯ ಭಜರಂಗದಳವು ಹುಲಿ ವೇಷ ಪ್ರದರ್ಶನ ನೀಡಲಿದೆ.
ಬಾಳ್ತಿಲ ಮಾಜಿ ಗ್ರಾ.ಪಂ.ಅಧ್ಯಕ್ಷ ಬಿ.ಕೆ ಅಣ್ಣು ಪೂಜಾರಿ ಕಲ್ಲಡ್ಕ ಹಾಗೂ ಬಂಟ್ವಾಳ ಭಜರಂಗದಳದ ಪ್ರಮುಖರು ಹಾಜರಿದ್ದರು.








