

ಬಂಟ್ವಾಳ: ಸಜೀಪ ಜನಸೇವಾ ಚಾರಿಟೇಬಲ್ ಟ್ರಸ್ಟ್ ರಿಜಿಸ್ಟರ್ಡ್ ಇದರ ನೂತನ ಕಾರ್ಯಾಲಯದ ಶಿಲಾನ್ಯಾಸ ಕಾರ್ಯಕ್ರಮ ವನ್ನು ಪುತ್ತೂರು ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾಕ್ಟರ್ ಪ್ರಭಾಕರ್ ಭಟ್ ಕಲ್ಲಡ್ಕ ನೆರವೇರಿಸಿದರು. ಶಂಕುಸ್ಥಾಪನೆಯ ಭೂಮಿಪೂಜೆಯನ್ನು ಸುಬ್ರಹ್ಮಣ್ಯ ಬಟ್ ಮಂಜಿನಡ್ಕ ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿಸಿದರು. ಸಮಾರಂಭದಲ್ಲಿ ಟ್ರಸ್ಟ್ ಅಧ್ಯಕ್ಷ ಯಶವಂತ ಡಿ ದೇರಾಜೆ ಗುತ್, ಮುಳ್ಳು ಞ್ಜ ವೆಂಕಟೇಶ್ವರ ಬಟ್, ಎಸ್ ಶ್ರೀಕಾಂತ್ ಶೆಟ್ಟಿ, ರಮೇಶ್ ಕುಲಾಲ್, ಪ್ರಶಾಂತ್, ನವೀನ್ ಸುವರ್ಣ, ಸುನಿತಾ ಶೆಟ್ಟಿ, ನಿತಿನ್ ಅರಸ, ದೀಪಕ್, ಪ್ರಶಾಂತ್, ಮಹಾಬಲ ರೈ, ಬಿ. ಸುರೇಶ್ ಕುಲಾಲ್ ಮೊದಲಾದವರು ಉಪಸ್ಥಿತರಿದ್ದರು.








