ಬಂಟ್ವಾಳ: ಕಥೊಲಿಕ್ ಸಭಾ(ರಿ) ಲೋರೆಟ್ಟೊ ಘಟಕ ಹಾಗೂ ಲೋರೆಟ್ಟೊ ಫ್ರೆಂಡ್ಸ್ ಕ್ಲಬ್(ರಿ)  ಲೋರೆಟ್ಟೊ ಇವರ ಜಂಟಿ ಆಶ್ರಯದಲ್ಲಿ  ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆ, ಕಂಕನಾಡಿ ಮತ್ತು ಫಾದರ್ ಮುಲ್ಲರ್ ಆಸ್ಪತ್ರೆ ,ತುಂಬೆ ಇವರ ಸಹಯೋಗದಲ್ಲಿ “ಉಚಿತ ಬ್ರಹತ್ ಆರೋಗ್ಯ ಹಾಗೂ ಕಣ್ಣಿನ ತಪಾಸಣಾ” ಶಿಬಿರವನ್ನು ಲೋರೆಟ್ಟೋ ಚರ್ಚ್ ವಠಾರದಲ್ಲಿ ಯಶಸ್ವಿಯಾಗಿ ನಡೆಯಿತು. ಆರೋಗ್ಯ ಶಿಬಿರ ವನ್ನು ದೀಪ ಬೆಳಗಿಸಿ ಉದ್ಘಾಟಿಸಿ, ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಲೋರೆಟ್ಟೋ ಚರ್ಚ್ ಧರ್ಮಗುರುಗಳಾದ ವಂ.ಎಲಿಯಸ್ ಡಿಸೋಜಾ ರವರು  ಆರೋಗ್ಯವನ್ನು  ಕಾಪಾಡುವುದು  ನಮ್ಮ ಕೈಯಲ್ಲಿ ಇದೆ, ಆರೋಗ್ಯವಂತ ವ್ಯಕ್ತಿ ಏನು ಬೇಕಾದರೂ ಸದಿಸಬಲ್ಲರು, ಆರೋಗ್ಯ  ಸ್ತತಃ ಸೊತ್ತು ಅದು ಬೇರೆಯವರ ಸೊತ್ತಲ್ಲ. ಇದೊಂದು ಉತ್ತಮ ಕಾರ್ಯಕ್ರಮ , ನಮ್ಮ ಪರಿಸರದ ನಾಗರಿಕರು ಉತ್ತಮ ಆರೋಗ್ಯ ಕಾಪಾಡುವ ಹಿತದ್ರಷ್ಟಿಯಿಂದ ಅಯೋಜಕರಿಗೆ ಕೃತಜ್ಞತೆ ಅರ್ಪಿಸಿದರು.
 ಮುಖ್ಯ ಅತಿಥಿಗಳಾಗಿ ಆಗಮಿಸಿ  ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಫಾದರ್ ಮುಲ್ಲರ್ ಆಸ್ಪತ್ರೆಯ ಅಡಳಿತಾಧಿಕಾರಿಯಾದ ವಂ.ವಿನ್ಸೆಂಟ್ ಸಿಲ್ವೇಸ್ಟರ್ ಲೋಬೊ ಮಾತನಾಡಿ ಶಿಬಿರದ ಮಹತ್ವದ ಬಗ್ಗೆ ವಿವರಣೆ ನೀಡಿದರು. ಲೋರೆಟ್ಟೊ ಪರಿಸರದಲ್ಲಿ ಆರೋಗ್ಯ ಶಿಬಿರಕ್ಕೆ  ಉತ್ತಮ ಪ್ರತಿಕ್ರಿಯೆ ಲಭಿಸಿದೆ.ವೇದಿಕೆಯಲ್ಲಿ ಕಥೊಲಿಕ್ ಸಭಾ ಬಂಟ್ವಾಳ ವಲಯದ ನಿಕಟಪೂರ್ವ ಅಧ್ಯಕ್ಷ ರಾದ ಸ್ಟಾನಿ ಲೋಬೊ,ಲೋರೆಟ್ಟೋ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ರಿಚರ್ಡ್ ಮಿನೇಜಸ್,ಪಾಲನಾ ಮಂಡಳಿಯ ಕಾರ್ಯದರ್ಶಿ ಸಿಪ್ರಿಯನ್ ಡಿಸೋಜಾ, ಕಥೊಲಿಕ್ ಸಭಾ ಲೋರೆಟ್ಟೊ ಘಟಕದ ಅಧ್ಯಕ್ಷರಾದ ಮಾರ್ಕ್ ಲೋಬೊ,ಲೋರೆಟ್ಟೊ ಫ್ರೆಂಡ್ಸ್ ಕ್ಲಬ್  ಅಧ್ಯಕ್ಷರಾದ ಪ್ರವೀಣ್ ಪಿಂಟೊ ಉಪಸ್ಥಿತರಿದ್ದರು. ಸುಮಾರು 300ಕ್ಕೂ ಅಧಿಕ ಮಂದಿ ಶಿಬಿರದ ಪ್ರಯೋಜನ ಪಡೆದರು, ಸಿಪ್ರಿಯನ್ ಡಿಸೋಜಾ ಸ್ವಾಗತಿಸಿದರು, ಪ್ರವೀಣ್ ಪಿಂಟೊ ವಂದಿಸಿದರು. ಅಲ್ವಿನ್ ಪಿಂಟೊ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here