ಮಾಣಿ : ಯಕ್ಷಗಾನ ಸಮಿತಿ ಮಾಣಿ ಇದರ ಆಶ್ರಯದಲ್ಲಿ ಜರಗುವ 36ನೇ ವರ್ಷದ ತಾಳಮದ್ದಳೆ ಕೂಟ “ಶ್ರೀ ಸುಧನ್ವ ಮೋಕ್ಷ” ಎಂಬ ಪ್ರಸಂಗ ಅ.13ನೇ ಆದಿತ್ಯವಾರ ಮದ್ಯಾಹ್ನ 2 ಗಂಟೆಗೆ ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಲಿದೆ. ಈ ತಾಳಮದ್ದಳೆಯ ಹಿಮ್ಮೇಳದಲ್ಲಿ ಸತ್ಯನಾರಾಯಣ ಪುಣಿಚಿತ್ತಾಯ, ಗುರುಪ್ರಸಾದ್ ಬೊಳಿಂಜಡ್ಕ, ಜಗನ್ನಿವಾಸ ರಾವ್ ಪುತ್ತೂರು. ಮುಮ್ಮೇಳದಲ್ಲಿ ಅರ್ಜುನ: ಶಂಭು ಶರ್ಮ ವಿಟ್ಲ, ಸುಧನ್ವ: ಉಜಿರೆ ಅಶೋಕ್ ಭಟ್, ಪ್ರಭಾವತಿ: ಎಂ.ಕೆ.ರಮೇಶ್ ಆಚಾರ್ಯ, ಶ್ರೀ ಕೃಷ್ಣ: ಹಿರಣ್ಯ ವೆಂಕಟೇಶ್ವರ ಭಟ್ ತಾಳಮದ್ದಳೆಯನ್ನು ನಡೆಸಿಕೊಡಲಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here