

ಅಡ್ಯನಡ್ಕ: ಯಂಗ್ ಸ್ಟಾರ್ ಅಡ್ಯನಡ್ಕ ಇವರ ಸಹಕಾರದಲ್ಲಿ ಜನತಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಿರ್ಮಿಸಲಾಗುವ ನೂತನ
ಶೌಚಾಲಯ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಅಡ್ಯನಡ್ಕ ಜನತಾ ವಿದ್ಯಾಸಂಸ್ಥೆಗಳ ಸಂಚಾಲಕರಾದ ಡಾ. ಅಶ್ವಿನಿ ಕೃಷ್ಣಮೂರ್ತಿ, ಅಡ್ಯನಡ್ಕ ಎಜುಕೇಶನಲ್
ಸೊಸೈಟಿಯ ಆಡಳಿತಾಧಿಕಾರಿ ರಮೇಶ ಎಂ. ಬಾಯಾರು, ಆಡಳಿತ ಮಂಡಳಿ ಸದಸ್ಯ ಹಾಗೂ ಕೇಪು ಗ್ರಾಮ ಪಂಚಾಯತ್ ಸದಸ್ಯ
ಅಬ್ದುಲ್ ಕರೀಂ ಕುದ್ದುಪದವು, ಯಂಗ್ ಸ್ಟಾರ್ ಅಡ್ಯನಡ್ಕ ಬಳಗದ ಪ್ರಮುಖರಾದ ಝಕಾರಿಯಾ ಮಂಜನಡ್ಕ, ಕಲಂದರ್ ಶಹಾ,
ಹುಸೈನ್, ಜನತಾ ಆಂಗ್ಲಮಾಧ್ಯಮ ಶಾಲೆಯ ಸಂಯೋಜನಾಧಿಕಾರಿ ಗಣೇಶಮೂರ್ತಿ ಎಂ., ಜನತಾ ಆಂಗ್ಲಮಾಧ್ಯಮ ಶಾಲೆಯ
ಮುಖ್ಯೋಪಾಧ್ಯಾಯಿನಿ ರಮ್ಯಶ್ರೀ, ಜನತಾ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಮಾಧವ ನಾಯ್ಕ್, ಜನತಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಿ. ಶ್ರೀನಿವಾಸ್ ಮತ್ತಿತರರು ಪಾಲ್ಗೊಂಡಿದ್ದರು.








