ಬಂಟ್ವಾಳ: ಯುವಕನೊಬ್ಬ ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ವಂಚನೆ ಮಾಡಿದ್ದು, ಇದೀಗ ಮನನೊಂದ ಯುವತಿ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.

ದೂರಿನ ಹಿನ್ನೆಲೆಯಲ್ಲಿ ಬಂಟ್ವಾಳ ನಗರ ಠಾಣಾ ಎಸ್. ಐ. ಚಂದ್ರಶೇಖರ್ ನೇತ್ರತ್ವದಲ್ಲಿ ಆರೋಪಿಯನ್ನು ಬಂಧಿಸಿ ನ್ಯಾಯಲಯಕ್ಕೆ ಹಾಜರುಪಡಿಸಲಾಗಿದ್ದು, ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಮಲ್ಲೂರಿನ ಉಳಾಯಿಬೆಟ್ಟು ಸಮೀಪದ ಅಝರುದ್ದೀನ್ (30) ಯುವತಿಗೆ ವಂಚಿಸದ ಆರೋಪಿ. ಯಂಗ್ ಫ್ರೆಂಡ್ಸ್ ಉರ್ವ ಕ್ರಿಕೆಟ್ ಟೀಂನಲ್ಲಿ ಆರೋಪಿ ಅಝರುದ್ದೀನ್ ಗುರುತಿಸಿಕೊಂಡಿದ್ದನು.

ಆರೋಪಿ ಅಝರುದ್ದೀನ್ ಬಂಟ್ವಾಳ ತಾಲೂಕಿನ ಪುರಸಭಾ ವ್ಯಾಪ್ತಿಯ ಕೆಳಗಿನಪೇಟೆಯ ಯುವತಿಯನ್ನು ಕಳೆದ 4 ವರ್ಷಗಳಿಂದ ಪ್ರೀತಿಸುತ್ತಿದ್ದನು. ಮಾತ್ರವಲ್ಲ, ಮದುವೆಯಾಗುವುದಾಗಿ ಯುವತಿಯನ್ನು ನಂಬಿಸಿದ್ದನು. ಈ ನಡುವೆ ಆರೋಪಿ ಅಝರುದ್ದೀನ್ ಯುವತಿಯನ್ನು ದೈಹಿಕವಾಗಿ ಬಳಸಿಕೊಳ್ಳಲು ಯತ್ನ ನಡೆಸಿದ್ದನು. ಈ ವೇಳೆ ಯುವತಿ ಮನೆಯವರಿಗೆ ವಿಚಾರ ತಿಳಿಸಿದ್ದು, ಯುವತಿಯ ಮನೆಯವರು ಮದುವೆ ಪ್ರಸ್ತಾಪವನ್ನು ಅಝರುದ್ದೀನ್ ಮತ್ತು ಆತನ ಮನೆಯವರ ಮುಂದಿಟ್ಟಿದ್ದರು. ಆದರೆ ಅಝರುದ್ದೀನ್ ಯುವತಿಯನ್ನು ಮದುವೆಯಾಗಲು ನಿರಾಕರಿಸಿದ್ದಾನೆ.

ಈ ಹಿನ್ನೆಲೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಯುವತಿ ದೂರು ನೀಡಿದ್ದಾರೆ. ಇದೀಗ ಯುವಕನನ್ನು ಕುಳೂರಿನಲ್ಲಿ ಬಂಧಿಸಲಾಗಿದ್ದು, ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here