ಸಿದ್ಧಕಟ್ಟೆ :  ದೇಶದ ನಾನಾ ಭಾಗದಲ್ಲಿ  ನವರಾತ್ರಿ ಸಂದರ್ಭ ವಿಶೇಷವಾಗಿ ಆಚರಣೆಗಳಿವೆ. ಧಾರ್ಮಿಕ ಆಚರಣೆಗಳು ಎಲ್ಲರನ್ನೂ ಒಗ್ಗೂಡಿಸುತ್ತದೆ ಎಂದು ಸಾಮಾಜಿಕ ಚಿಂತಕಿ ಸವಿತಾ ರಮೇಶ್ ಹೇಳಿದರು.
 ಬಂಟ್ವಾಳ ತಾಲೂಕಿನ  ಸಿದ್ಧಕಟ್ಟೆ ಯ ಕೇಂದ್ರ ಮೈದಾನದಲ್ಲಿ  ಸಾರ್ವಜನಿಕ ಶ್ರೀ ಶಾರದೋತ್ಸವ ಆಚರಣಾ ಸಮಿತಿ ಇದರ ಪ್ರಥಮ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ ಪ್ರಯುಕ್ತ ನಡೆದ ಮಾತೆಯರ ಸಭಾ ಕಾರ್ಯಕ್ರಮದಲ್ಲಿ  ಅವರು ಶನಿವಾರ ದಿಕ್ಸೂಚಿ ಭಾಷಣ ಮಾಡಿದರು.
ಸಂಗಬೆಟ್ಟು ಗ್ರಾ.ಪಂ. ಅಧ್ಯಕ್ಷೆ ಗುಲಾಬಿ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ  ಪುಂಜಾಲಕಟ್ಟೆ ಪೊಲೀಸ್ ಠಾಣೆ ಪೊಲೀಸ್ ಉಪನಿರೀಕ್ಷಕರಾದ ಸೌಮ್ಯ ಜೆ., ನಿವೃತ್ತ ಶಿಕ್ಷಕಿ ರತ್ನಾವತಿ ಜೆ. ಬೈಕಾಡಿ, ಶ್ರೀ. ಧ.ಗ್ರಾ. ಯೋಜನೆ ಸಿದ್ಧಕಟ್ಟೆ ವಲಯ ಮೇಲ್ವಿಚಾರಕರಾದ ಹರಿಣಾಕ್ಷಿ ರೈ, ಸಿದ್ಧಕಟ್ಟೆ ಅನಂತಪದ್ಮಾ ಹೆಲ್ತ್ ಸೆಂಟರ್ ವೈದ್ಯೆ ಡಾ. ಸೀಮಾ ಸುದೀಪ್, ನ್ಯಾಯವಾದಿ ಶೈಲಜಾ ರಾಜೇಶ್, ಕೊಯಿಲ ಸಿದ್ದಿಶ್ರೀ ಭಜನಾ ಮಂಡಳಿ ಅಧ್ಯಕ್ಷೆ ಸುಮಿತ್ರಾ ಆರ್. ಶೆಟ್ಟಿಗಾರ್ ಅಣ್ಣಳಿಕೆ ವೇದಿಕೆಯಲ್ಲಿದ್ದರು.
ಸಮಿತಿ ಗೌರವಾಧ್ಯಕ್ಷ ಬಿ. ರಮಾನಾಥ ರೈ, ಅಧ್ಯಕ್ಷ  ಲೋಕೇಶ ಶೆಟ್ಟಿ ಮೊಯಿಲೊಟ್ಟು, ಪ್ರಧಾನ ಕಾರ್ಯದರ್ಶಿ ರಮೇಶ್ ಎಮ್. ಮಂಜಿಲ, ಕೋಶಾಧಿಕಾರಿ ಉಮೇಶ ಹಿಂಗಾಣಿ,  ಸಂಘಟನಾ ಕಾರ್ಯದರ್ಶಿ ದಿನೇಶ ಸುಂದರ ಶಾಂತಿ, ಪ್ರಧಾನ ಸಂಚಾಲಕ  ಜಗದೀಶ ಕೊಯಿಲ ಹಾಗೂ ನಾನಾ ಸಮಿತಿ ಸದಸ್ಯರು ಇದ್ದರು. ಸ್ವಾಗತ ಸಮಿತಿಯ ಸಹ ಸಂಚಾಲಕಿ ಅರುಣಾ ವಿಶ್ವನಾಥ ಪೂಜಾರಿ ದೋಟ ಸ್ವಾಗತಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here