

ಬಂಟ್ವಾಳ: ಮಂಗಳೂರು ಜಿಲ್ಲಾ ಪೋಲೀಸ್ ಅಧೀಕ್ಷರ ಕಛೇರಿ ಪುತ್ತೂರಿಗೂ , ಬಂಟ್ವಾಳ ಕ್ಕೂ ಅಥವಾ ಮಂಗಳೂರಿನಲ್ಲಿಯೇ ಉಳಿಯುತ್ತೋ ಈಗೊಂದು ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ.
ಎಸ್.ಪಿ. ಕಚೇರಿ ಮಂಗಳೂರಿನಲ್ಲಿ ಕಾರ್ಯಚರಿಸುತ್ತಿದ್ದರೂ ಸುತ್ತಮುತ್ತಲಿನ ಎಲ್ಲಾ ಠಾಣೆಗಳು ಕಮೀಷನರ್ ವ್ಯಾಪ್ತಿಯಗೆ ಬರುತ್ತದೆ.
ಈ ಹಿನ್ನೆಲೆಯಲ್ಲಿ ಮಂಗಳೂರು ಎಸ್.ಪಿ.ಕಚೇರಿ ಪುತ್ತೂರು ವ್ಯಾಪ್ತಿಗೆ ಸ್ಥಳಾಂತರ ಮಾಡುವ ಬಗ್ಗೆ ಮಾತುಕತೆಗಳು ನಡೆಯುತ್ತಿವೆ.
ಅದರೆ ಪುತ್ತೂರು ಎಸ್. ಪಿ.ಕಚೇರಿ ಗೆ ಸೂಕ್ತವಾಗಿದೆ ಯೇ ಎಂಬ ಪ್ರಶ್ನೆಗಳು ಉದ್ಬವವಾಗಿವೆ, ಜೊತೆಗೆ ಪರ ವಿರೋಧ ಗಳು ವ್ಯಕ್ತವಾಗುತ್ತಿದೆ.
ಒಂದು ವೇಳೆ ಪುತ್ತೂರಿಗೆ ಎಸ್.ಪಿ.ಕಚೇರಿ ಸ್ಥಳಾಂತರವಾದರೆ ಅತೀ ಸೂಕ್ಷ್ಮ ಪ್ರದೇಶವಾದ ಬಂಟ್ವಾಳ ತಾಲೂಕನ್ನು ಮಂಗಳೂರು ಕಮೀಷನರ್ ವ್ಯಾಪ್ತಿಗೆ ಸೇರಿಸಬೇಕು ಎಂಬ ಮಾತುಗಳು ಕೇಳಿ ಬರುತ್ತಿದೆ.
ಕೇವಲ 20 .ಕಿ.ಮೀ. ದೂರದಲ್ಲಿ ಬರುವ ಬಂಟ್ವಾಳ ತಾಲೂಕಿನ ಬಂಟ್ವಾಳ ನಗರ ಠಾಣೆ, ವಿಟ್ಲ,ಹಾಗೂ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯನ್ನು ಕಮೀಷನರ್ ವ್ಯಾಪ್ತಿಯ ಲ್ಲಿ ಒಳಪಡಿಸಿ ಎಂಬುದು ಸಾರ್ವಜನಿಕ ರ ಆಗ್ರಹ.
ಮಂಗಳೂರಿನಿಂದ 43 ಕಿ.ಮೀ.ದೂರದಲ್ಲಿರುವ ಮೂಡಬಿದ್ರೆಯನ್ನು ಕಮೀಷನರ್ ವ್ಯಾಪ್ತಿಗೆ ಸೇರಿಸಿದ್ದರಿಂದ 20 ಕಿ.ಮೀ ದೂರದಲ್ಲಿರುವ ಬಂಟ್ವಾಳ ವನ್ನು ಸೇರಿಸುವಂತೆ ಇಲ್ಲಿನ ಜನರ ಅಗ್ರಹವಾಗಿದೆ.
ಮಾಣಿವರೆಗೆ ವ್ಯಾಪ್ತಿಯ ನ್ನು ಸೇರಿಸಬೇಕು ಎಂಬ ಒತ್ತಾಯಗಳು ಕೇಳಿಬರುತ್ತಿದೆ.
ಬಂಟ್ವಾಳ ನಗರ ಠಾಣೆಯನ್ನು ಮೇಲ್ದರ್ಜೆಗೆ ಏರಿಸಲು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ವಿಶೇಷ ಮುತುವರ್ಜಿವಹಸಿ ಈಗಾಗಲೇ ಸಿ.ಎಂ.ಗೆ ಮನವಿ ಕೂಡಾ ಮಾಡಿದ್ದಾರೆ. ಹಾಗಾಗಿ ಸಿ.ಎಂ. ಗೃಹಮಂತ್ರಿ , ಸಂಸದ ಮತ್ತು ಶಾಸಕರು ಹೆಚ್ಚಿನ ಮುತುವರ್ಜಿವಹಿಸಬೇಕು ಎಂದು ಮನವಿ ಮಾಡುತ್ತಿದ್ದಾರೆ.
1992 ರ ಮೊದಲು ಮಂಗಳೂರಿನಿಂದ ಶಿರೂರುವರಗೆ ಎಸ್.ಪಿ.ವ್ಯಾಪ್ತಿಯಲ್ಲಿ ಇತ್ತು.
ಬಳಿಕ 2010 ರಲ್ಲಿ ಕಮಿಷನರೇಟ್ ಅಗಿ
ವಿಂಗಡಣೆ ಅದಾಗ ಕೋಣಾಜೆ, ಮೂಲ್ಕಿ ಮತ್ತು ಮೂಡಬಿದ್ರೆ ನಗರ ವ್ಯಾಪ್ತಿಯ ಲ್ಲಿ ಬರದಿದ್ದರೂ ಕೂಡಾ ಕಮೀಷನರ್ ವ್ಯಾಪ್ತಿಗೆ ಸೇರಿಸಲಾಗಿದೆ.
ಹಾಗಾಗಿ ಸೂಕ್ಮ ಪ್ರದೇಶವಾದ ಬಂಟ್ವಾಳ ವನ್ನು ಕಮೀಷನರ್ ವ್ಯಾಪ್ತಿಗೆ ಒಳಪಡಿಸುವಂತೆ ಒತ್ತಾಯಗಳು ಕೇಳಿಬರುತ್ತಿದೆ.
ಜಿಲ್ಲಾ ವ್ಯಾಪ್ತಿಯಲ್ಲಿ ಜಿಲ್ಲಾ ಪಂಚಾಯತ್, ಜಿಲ್ಲಾಧಿಕಾರಿ ಕಚೇರಿ, ವಿಮಾನ ನಿಲ್ದಾಣ, ರೈಲ್ವೇ ನಿಲ್ದಾಣ, ಜಾರಿನಿರ್ದೇಶನ ಎಸ್.ಪಿ.ಕಚೇರಿ, ಪೋಲೀಸ್ ಗುಪ್ತಚರ ಅಧೀಕ್ಷಕರ ಕಚೇರಿ ಹಾಗೂ ಜಿಲ್ಲಾ ಮಟ್ಟದ ವಿವಿಧ ಕಚೇರಿಗಳು ಬರುವುದರಿಂದ ಮಂಗಳೂರು ಸೂಕ್ತವಾಗಿದೆ ಎಂಬುದು ತಜ್ಞರ ಅಭಿಪ್ರಾಯ.
ಕೇವಲ ಎಸ್.ಪಿ.ಕಚೇರಿ ಮಾತ್ರ ಸ್ಥಳಾಂತರ ಸಮಂಜಸ ವಲ್ಲ, ಎಲ್ಲಾ ಜಿಲ್ಲಾ ಮಟ್ಟದ ಕಚೇರಿಗಳನ್ನು ಪುತ್ತೂರಿಗೆ ಸ್ಥಳಾಂತರ ಮಾಡಿದರೆ ಮಾತ್ರ ಅದು ಸೂಕ್ತವಾಗಬಹುದು.
ಒಂದು ವೇಳೆ ಪುತ್ತೂರು ತಾಲೂಕು ಜಿಲ್ಲೆಯಾಗಿ ಮಾರ್ಪಾಡು ಮಾಡಿದರೆ ಎಸ್.ಪಿ.ಕಚೇರಿ ಪುತ್ತೂರಿಗೆ ಸ್ಥಳಾಂತರ ಸೂಕ್ತ .
ಪ್ರಸ್ತುತ ವೇಣೂರು, ಬೆಳ್ತಂಗಡಿ ಹಾಗೂ ಇನ್ನಿತರ ಕಡೆಗಳಿಂದ ಗ್ರಾಮೀಣ ಪ್ರದೇಶವಾದ ಪುತ್ತೂರಿಗೆ ಹೋಗಲು ತುಂಬಾ ಕಷ್ಟ ವಾಗಬಹುದು .
ಈ ಹಿನ್ನೆಲೆಯಲ್ಲಿ ಮಂಗಳೂರಿನಿಂದ ಪುತ್ತೂರಿಗೆ ಎಸ್.ಪಿ.ಕಚೇರಿ ಸ್ಥಳಾಂತರ ಅಗುವುದಾದರೆ ಬಂಟ್ವಾಳ ವನ್ನು ಕಮೀಷನರ್ ವ್ಯಾಪ್ತಿಗೆ ಒಳಪಡಿಸಿ ಎಂಬುದು ಸಾರ್ವಜನಿಕ ಅಭಿಪ್ರಾಯ







