Wednesday, October 25, 2023

 ಮಡಂತ್ಯಾರು ಗ್ರಾ.ಪಂ.ಗೆ ಗಾಂಧಿ ಗ್ರಾಮ ಪುರಸ್ಕಾರ ಗರಿ

Must read

ಬೆಳ್ತಂಗಡಿ: ಗ್ರಾಮೀಣ ಪ್ರದೇಶ ಅಭಿವೃದ್ಧಿ ದೂರದೃಷ್ಟಿತ್ವದಿಂದ ಭವ್ಯ ರಾಷ್ಟ್ರ ನಿರ್ಮಾಣ ಸಾಧ್ಯ ಎಂಬ ಚಿಂತನೆಯೊಂದಿಗೆ ಬೆಳ್ತಂಗಡಿ ತಾಲೂಕಿನ ಮಡಂತ್ಯಾರು ಗ್ರಾ.ಪಂ.ಹಮ್ಮಿಕೊಂಡ ಕಾರ್ಯಯೋಜನೆಗಳು ತಾಲೂಕಿನ ಇತರೇ ಗ್ರಾ.ಪಂ.ಗಳಿಗೆ ಮಾದರಿಯಾಗಿದೆ.


ಗ್ರಾಮೀಣ ಭಾಗದ ಶ್ರೇಯೋಭಿವೃದ್ಧಿಗೆ ಗ್ರಾ.ಪಂ.ಆಡಳಿತ ಹಾಗೂ ಜನರ ಸಹಕಾರ ಜತೆಗೂಡಿ ರೂಪಿಸಿದ ಮಹತ್ತರ ಯೋಜನೆಗಳಿಂದಾಗಿ ಈ ಬಾರಿಯ ರಾಜ್ಯ ಸರಕಾರದ ಗಾಂಧಿ ಪುರಸ್ಕಾರದಡಿ ಪಂಚಾಯಿತಿಯ ಪ್ರಗತಿಗೆ ಸಂಬಂಧ ಸಿದ ೧೫೦ ಅಂಕಗಳಲ್ಲಿ ೧೩೮ ಅಂಕ ಪಡೆಯುವ ಮುಖೇನ ಮಡಂತ್ಯಾರು ಗ್ರಾ.ಪಂ. ಗಾಂಧಿ ಪುರಸ್ಕಾರಕ್ಕೆ ಕೊರಳೊಡ್ಡಿದೆ.
*ಗ್ರಾ.ಪಂ. ಪರಿಚಯ
ಪಂಚಾಯಿತಿ ವ್ಯಾಪ್ತಿಯಲ್ಲಿ ಪಾರೆಂಕಿ ಮತ್ತು ಕುಕ್ಕಳ ಎರಡು ಗ್ರಾಮಗಳಿದ್ದು ಒಟ್ಟು ೬೪೫೦ ಜನಸಂಖ್ಯೆ ಹೊಂದಿದೆ. ೧೬ ಪಂಚಾಯಿತಿ ಸದಸ್ಯರಿದ್ದು, ೬ ಸಿಬಂದಿಗಳಿದ್ದಾರೆ. ಎಲ್ಲಾ ಮನೆಗಳಲ್ಲೂ ಶೌಚಾಲಯ ಹೊಂದುವ ಮೂಲಕ ಬಯಲು ಶೌಚ ಮುಕ್ತ ಗ್ರಾಮವಾಗಿಸುವ ಗ್ರಾ.ಪಂ. ಕನಸು ಈಡೇರಿದೆ. ಇಷ್ಟು ಮಾತ್ರವಲ್ಲದೆ ಶೇ.೮೬ ತೆರಿಗೆ ಸಂಗ್ರಹಿಸಿ ಆದಾಯದಲ್ಲೂ ಪ್ರಗತಿಯತ್ತ ದಾಪುಗಾಲು ಇರಿಸಿದೆ.

*ಹೊಸತನದ ಕಲ್ಪನೆ ಸಾಕ್ಷಾತ್ಕಾರ
ನವೀನ ಚಿಂತನೆಗಳೊಂದಿಗೆ ಗ್ರಾಮಕ್ಕೆ ಹೊಸ ಆಯಾಮ ತಂದುಕೊಡುವಲ್ಲಿ ಅಧ್ಯಕ್ಷರು ಹಾಗೂ ಸದಸ್ಯರ ಪಾತ್ರ ಗೌರವಯುತ. ಗ್ರಾ.ಪಂ.ವ್ಯಾಪ್ತಿಯಲ್ಲಿ ಮಿಂಚು ಬಂ‘ಕ ಅಳವಡಿಸಿದ ತಾಲೂಕಿನ ಏಕೈಕ ಗ್ರಾ.ಪಂ. ಪಂಚಾಯಿತಿ ಸಭಾಂಗಣದಲ್ಲಿ ಮಳೆ ಕೊಯ್ಲು ಅಳವಡಿಸಿ ಬೃಹತ್ ಟ್ಯಾಂಕ್‌ನಲ್ಲಿ ಸಂಗ್ರಹಿಸಿ, ಶುದ್ಧ ನೀರಿನ ಘಟಕದ ಮೂಲಕ ಕುಡಿಯುವ ನೀರನ್ನು ೫ ಲೀಟರಿಗೆ ೨ರೂ.ನಲ್ಲಿ ನೀಡುವ ವಿನೂತನ ಕಲ್ಪನೆಗೆ ಜನ ಮೆಚ್ಚುಗೆ ಪಡೆದಿದೆ.
ವಿದ್ಯುತ್ ಮತ್ತು ನೀರು ಉಳಿತಾಯ ಮಾಡುವ ನಿಟ್ಟಿನಲ್ಲಿ ಕುಡಿಯುವ ನೀರಿನ ಸ್ಥಾವರಗಳಿಗೆ ಮೊಬಲ್ ಮೂಲಕ ಚಾಲನೆ ನೀಡುವ ವ್ಯವಸ್ಥೆ ವಿನೂತನ. ಪೆಟ್ರೋನೆಟ್‌ಎಂಎಚ್‌ಬಿ ಸಂಸ್ಥೆಯ ಸಿಎಸ್‌ಆರ್ ನಿಧಿಯಿಂದ ವಿಶೇಷ ಪ್ರಯತ್ನದಿಂದ ಬೃಹತ್ ಸಭಾಂಗಣ ಮತ್ತು ೨೦೧೮-೧೯ನೇ ಸಾಲಿನ ತ್ಯಾಜ್ಯ ವಿಲೇವಾರಿಗಾಗಿ ವಾಹನದ ಕೊಡುಗೆ ಪಡೆದಿದೆ.
ಕುಡಿಯುವ ನೀರಿನ ಬಳಕೆ ಶುಲ್ಕ ವಸೂಲಿಗಾಗಿ ಸು‘ರಿತ ತಂತ್ರಾಂಶ ಆಧರಿತ ಸಿಕಂಪ್ಯೂಟರ್ ಬಳಸಿ ಶುಲ್ಕದ ಬಿಲ್ ನೀಡುವುದು ಮತ್ತು ಶುಲ್ಕವನ್ನು ವಸೂಲಿ ಮಾಡುವ ವ್ಯವಸ್ಥೆ ಮಾಡಿದ್ದಾರೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಮಳೆ ನೀರು ಕೊಯ್ಲನ್ನು ಕಡ್ಡಾಯವಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ೧೦೦ ಕುಟುಂಬಗಳಿಗೆ ತಲಾ ೧೦೦೦ ರೂ. ಸಹಾಯ‘ನ ನೀಡಲುಕ್ರಮ ಕೈಗೊಂಡಿರುವುದು ಇತರೆ ಗ್ರಾಮಗಳೂ ಅನುಸರಿಸುವಂತೆ ಮಾಡಿದೆ.
ಗ್ರಾಮೀಣ ಯುವ ಜನತೆಗೆ ಸ್ವ-ಉದ್ಯೋಗಕಲ್ಪಿಸುವ ನಿಟ್ಟಿನಲ್ಲಿ ಗ್ರಾ.ಪಂ. ಸ್ವಂತ ಆದಾಯದ ಕ್ರೀಯಾ ಯೋಜನೆಯಲ್ಲಿ ಅನುದಾನ ಕಾಯ್ದಿರಿಸಿ ೫ ಕುಟುಂಬದ ಯುವತಿಯರಿಗೆ ಟೈಲರಿಂಗ್‌ಯಂತ್ರ ವಿತರಿಸುವ ಮೂಲಕ ಸ್ವಾವಲಂಬಿ ಬದುಕು ಮುನ್ನಡೆಸಲು ಸಹಕಾರ ನೀಡಲಾಗಿದೆ.
ಇ- ವೇಸ್ಟ್ ಮ್ಯಾನೇಜ್‌ಮೆಂಟ್ ಹೊಸ ಪರಿಕಲ್ಪನೆಯಂತೆ ಮಡಂತ್ಯಾರು ಗ್ರಾ.ಪಂ. ವ್ಯಾಪ್ತಿಯಲ್ಲಿ ಇ-ತ್ಯಾಜ್ಯ ಸಂಗ್ರಹಿಸಿ ವಿಲೇವಾರಿ ಮಾಡಿದ ರಾಜ್ಯದ ಏಕೈಕ ಗ್ರಾ.ಪಂ. ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ನರೇಗಾ ಯೋಜನೆಯಡಿ ವರ್ಷಕ್ಕೊಂದು ಸುಸಜ್ಜಿತ ರುದ್ರಭೂಮಿ ನಿರ್ಮಿಸಲಾಗಿದೆ. ಪಾರೆಂಕಿ ಗ್ರಾಮದ ಕುಕ್ಕಳಬೆಟ್ಟು ಬಳಿ ರುದ್ರಭೂಮಿ ನಿರ್ಮಾಣದ ಕಾರ್ಯ ಪೂರ್ಣಗೊಂಡು ಬಳಕೆಗೂ ಯೋಗ್ಯವಾಗಿದೆ. ಕುಕ್ಕಳ ಗ್ರಾಮದ ಮಂಜಲಪಲ್ಕೆ ಬಳಿ ರುದ್ರಭೂಮಿ ನಿರ್ಮಾಣದ ಕಾಮಗಾರಿ ಪ್ರಗತಿಯಲ್ಲಿದೆ.
*ನಿವೇಶನ ವಂಚಿತರಿಗೆ ನಿವೇಶನ
ನಿವೇಶನ ವಂಚಿತರಿಗೆ ಮನೆಗಳ ಹಂಚಿಕೆಯಾಗಿದ್ದು, ೪೧ ಮನೆಗಳು ೨೦೧೭ರಲ್ಲಿ ಹಂಚಿಕೆಯಾಗಿದೆ. ೨೦೧೮-೧೯ರಲ್ಲಿ ೧೦ ಎಕರೆ ೫೬ ಸೆನ್ಸ್‌ಜಾಗದಲ್ಲಿ ೨.೫೦ ಎಕರೆ ಜಾಗವನ್ನು ಸಮತಟ್ಟು ಮಾಡಿ ೫೦ ಫಲಾನು‘ವಗಳಿಗೆ ಭೂಮಿಯನ್ನು ಸಮತಟ್ಟು ಮಾಡಲಾಗುತ್ತಿದೆ.
| ನಾಗೇಶ್ ಎಂ., ಪಿಡಿಒ
ಪಂಚಾಯಿತಿ ಅಭಿವೃದ್ಧಿ ಜತೆಗೆ ವಿಶೇಷ ಸಾ‘ನೆಗೆ ಸಂದ ಅಪರೂಪದ ಪುರಸ್ಕಾರ. ಗ್ರಾಮದ ಜನರ ಸಹಕಾರ, ಎಲ್ಲಾ ಪಕ್ಷದ ಸದಸ್ಯರು ಹಾಗೂ ಸಿಬಂದಿಗಳ ಪ್ರೋತ್ಸಾಹ ಹಾಗೂ ರೋಟರಿಕ್ಲಬ್, ಜೆಸಿಐ, ಎಸ್‌ಕೆಡಿಆರ್‌ಡಿಪಿ ಹಾಗೂ ವರ್ತಕರ ಸಂಘ ನಿರಂತರವಾದ ಸಹಕಾರದಿಂದ ಪಂಚಾಯಿತಿ ವಿನೂತನ ಚಿಂತನೆಗೆ ತಕ್ಕ ಪುರಸ್ಕಾರ ಲಭಿಸಿದೆ.

ಗೋಪಾಲಕೃಷ್ಣ ಕೆ.ಕುಕ್ಕಳ, ಅದ್ಯಕ್ಷರು.
ಗಾಂಧಿ ಪುರಸ್ಕಾರದಿಂದ ಗ್ರಾ.ಪಂ. ಆಡಳಿತದಲ್ಲಿ ಹೊಸತನ ರೂಪಿಸಲು ಸೂರ್ತಿ ತಂದಂತಾಗಿದೆ. ಜನೋಪಯೋಗಿ ಚಿಂತನೆಯಿಂದ ಗ್ರಾಮ ಅಭಿವೃದ್ಧಿ ಸಾಧಿಸಿ ಅವಳಿ ಗ್ರಾಮಗಳ ಅಭ್ಯುದಯದ ಕಡೆಗೆ ಪಣ ನಿರಂತರವಾಗಿದ್ದು, ಗ್ರಾಮಸ್ಥರ ಪ್ರೋತ್ಸಹ, ಸಂಘ ಸಂಸ್ಥೆಗಳ ಸಹಕಾರ, ಸದಸ್ಯರ ಸಹಮತದಿಂದ ಮಡಂತ್ಯಾರಿನ ಗೌರವ ಹೆಚ್ಚಿದೆ.

More articles

Latest article