


ವಿಟ್ಲ : ಕನ್ಯಾನ ಶ್ರೀ ಭ್ರಾಮರಿ ಜನಸೇವಾ ಚಾರಿಟೇಬಲ್ ಟ್ರಸ್ಟ್ ಮತ್ತು ಬಾಯಾರು ಸನಾತನ ಧರ್ಮ ಸೇವಾ ಟ್ರಸ್ಟ್ ಆಶ್ರಯದಲ್ಲಿ ಶ್ರೀ ಭ್ರಾಮರಿ ಜನಸೇವಾ ಚಾರಿಟೇಬಲ್ ಟ್ರಸ್ಟ್ ದ್ವಿತೀಯ ವಾರ್ಷಿಕೋತ್ಸವ, ಲೋಕಕಲ್ಯಾಣಾರ್ಥವಾಗಿ ಚಂಡಿಕಾಯಾಗ, ಸೇವಾ ಯೋಜನೆ ವಿತರಣೆ, ಧಾರ್ಮಿಕ ಸಭೆ, ಶ್ರೀ ಭ್ರಾಮರಿ ಸೇವಾ ಪುರಸ್ಕಾರ-೨೦೧೯ ಕಾರ್ಯಕ್ರಮವು ಕನ್ಯಾನ ಶ್ರೀ ಸರಸ್ವತಿ ವಿದ್ಯಾಲಯದಲ್ಲಿ ಶುಕ್ರವಾರ ನಡೆಯಿತು.
ಧಾರ್ಮಿಕ ಸಭೆಯನ್ನು ಶಂಕರನಾರಾಯಣ ಭಟ್ ತಾಳ್ತಜೆ ಅವರು ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬಾಯಾರು ಪಂಚಲಿಂಗೇಶ್ವರ ದೇವಸ್ಥಾನದ ಮೊಕ್ತೇಸರ ಕೆ.ಮೋನಪ್ಪ ಶೆಟ್ಟಿ, ಗೌರವ ಮಾರ್ಗದರ್ಶಕ ವೆಂಕಟರಮಣ ಕಾರಂತ ಮೀಯಪದವು, ಚಂದ್ರಶೇಖರ ಉಚ್ಚಿಲ, ದ.ಕ.ಜಿಲ್ಲಾ ಶಾಮಿಯಾನ ಮಾಲಕರ ಸಂಘದ ಅಧ್ಯಕ್ಷ ಬಾಬು ಕೆ.ವಿ., ವಿಟ್ಲ ವಲಯ ಗ್ಯಾರೇಜ್ ಮಾಲಕರ ಸಂಘದ ಅಧ್ಯಕ್ಷ ಲಕ್ಷ್ಮಣ ಪೂಜಾರಿ ಆರ್.ಎಸ್., ಜಯಾನಂದ, ಸಂದೇಶ್ ಶೆಟ್ಟಿ, ಮಂಜುನಾಥ ಶೆಟ್ಟಿ ಮತ್ತಿತರರು ಭಾಗವಹಿಸಿದ್ದರು.
ಕನ್ಯಾನ ಭಾರತ ಸೇವಾಶ್ರಮದ ಕಾರ್ಯದರ್ಶಿ ಎಸ್.ಈಶ್ವರ ಭಟ್, ನಾಟಿವೈದ್ಯ ಚನಿಯ ಇಚ್ಛೆ ಗುರಿಮಾರ್ಗ, ನಿವೃತ್ತ ಸೈನಿಕ ಜನಾರ್ದನ ಕರ್ಕೇರ, ಕೃಷಿಕ ಈಶ್ವರ ನಾಯ್ಕ ಅಶ್ವತ್ಥಡಿ ಅವರಿಗೆ ಶ್ರೀ ಭ್ರಾಮರಿ ಸೇವಾ ಪುರಸ್ಕಾರ ನೀಡಿ ಗೌರವಿಸಲಾಯಿತು. ವಿದ್ಯಾಭ್ಯಾಸ, ಮದುವೆ, ಇನ್ನಿತರ ವಿಭಾಗಗಳಿಗೆ ಸೇವಾ ಯೋಜನೆ ವಿತರಣೆ ಮಾಡಲಾಯಿತು.
ಕನ್ಯಾನ ಗುರು ಎಜುಕೇಶನ್ ಟ್ರಸ್ಟಿನ ಸಂಚಾಲಕ ಈಶ್ವರಪ್ರಸಾದ್ ಪ್ರಸ್ತಾವಿಸಿದರು. ಶ್ರೀ ಭ್ರಾಮರಿ ಜನಸೇವಾ ಚಾರಿಟೇಬಲ್ ಟ್ರಸ್ಟಿನ ಮನೋಜ್ ಕುಮಾರ್ ಬನಾರಿ ಸ್ವಾಗತಿಸಿದರು. ರೇಣುಕಾ ಫಜೀರು ನಿರೂಪಿಸಿದರು. ಬಿಂದ್ಯಾ ಕುಲಾಲ್ ನರಿಂಗಾಣ ವಂದಿಸಿದರು.







