ವಿಟ್ಲ: ವಿಟ್ಲ ಭಾಗದಲ್ಲಿ ಮತ್ತೆ ಸರಣಿ ಕಳ್ಳತನ ಪ್ರಕರಣ ನಡೆದಿದೆ. ಒಕ್ಕೆತ್ತೂರು ವ್ಯಾಪ್ತಿಯ ಹಾಗೂ ಅಳಕೆಮಜಲು ಎಂಬಲ್ಲಿ ಅಂಗಡಿಗಳಿಗೆ ನುಗ್ಗಿದ ಕಳ್ಳರು ನಗದು ದೋಚಿ ಪರಾರಿಯಾಗಿದ್ದಾರೆ.
ಒಕ್ಕೆತ್ತೂರು ಎಂಬಲ್ಲಿರುವ ಮಹಮ್ಮದ್ ಅವರಿಗೆ ಸೇರಿದ ಗೂಡಾಂಗಡಿಯ ಬೀಗ ಮುರಿದು ಸಿಗರೇಟ್ ಹಾಗೂ ಚಿಲ್ಲರೆ ಹಣ ಕಳವುಗೈಯ್ಯಲಾಗಿದೆ. ಅದರ ಪಕ್ಕದಲ್ಲಿರುವ ಬಶೀರ್ ಅಂಗಡಿಗೂ ನುಗ್ಗಿದ ಕಳ್ಳರು ಅಲ್ಲಿಂದಲೂ ನಗದು ದೋಚಿದ್ದಾರೆ. ಇನ್ನೂ ಅಳಕೆಮಜಲು ಎಂಬಲ್ಲಿಯ ಅಂಗಡಿಯಿಂದ ಕಳವುಗೈಯ್ಯಲಾಗಿದೆ.
ವಿಟ್ಲ ಮಂಗಳಪದವು ಮುಡಿಬಾರ್‌ನಲ್ಲಿ ಬಾಡಿಗೆ ಮನೆಯಲ್ಲಿ ವಾಸ ಇರುವ ಸಲೀಂ ಸೇರಾಜೆ ಅವರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಒಳನುಗ್ಗಿದ ಕಳ್ಳರು ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ್ದಾರೆ. ಮನೆಯಲ್ಲಿ ಏನೂ ಸಿಗದ ಹಿನ್ನೆಲೆಯಲ್ಲಿ ಬರಿಗೈಯಲ್ಲಿ ಹಿಂತಿರುಗಿದ್ದಾರೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರೂ ಅವರು ಸ್ಥಳಕ್ಕೆ ಬಂದಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here