

ವಿಟ್ಲ: ಕೇಪು ಗ್ರಾಮದಲ್ಲಿ ಯುವತಿಯೊಬ್ಬಳು ಮನೆಯಲ್ಲಿ ಯಾರಲ್ಲಿಯೂ ಹೇಳದೇ ಚಿನ್ನಾಭರಣಗಳೊಂದಿಗೆ ತೆರಳಿದವಳು ಹಿಂತಿರುಗಿ ಬಾರದೇ ನಾಪತ್ತೆಯಾದ ಬಗ್ಗೆ ಪ್ರಕರಣ ದಾಖಲಾಗಿದೆ.
ಕೇಪು ಗ್ರಾಮದ ಕಟ್ಟೆ ಹೊಸಮನೆ ನಿವಾಸಿ ದಿವ್ಯಾ (೨೮) ನಾಪತ್ತೆಯಾದವಳು. ಈಕೆ ಸೆ.೩೦ ರಂದು ಬೆಳಗ್ಗೆ ಮನೆಯಲ್ಲಿದ್ದ ಕೆಲವು ಚಿನ್ನಾಭರಣವನ್ನು ತೆಗೆದುಕೊಂಡು ಹೋದವಳು ಇದುವರೆಗೂ ಹಿಂತಿರುಗಿ ಬಂದಿಲ್ಲ. ಪೋನ್ ಕರೆ ಮಾಡಿದರೆ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಈ ಬಗ್ಗೆ ಆಕೆಯ ಸಹೋದರ ಜಯಪ್ರಕಾಶ್ ಅವರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.







