ಬುರೂಜ್ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್ ರಝಾನಗರ ಇಲ್ಲಿ ಗಾಂಧಿ ಜಯಂತಿ ಆಚರಿಸಲಾಯಿತು. ಶಾಲಾ ಸಂಚಾಲಕರಾದ ಶೇಕ್ ರಹ್ಮತ್ತುಲ್ಲಾ ಮತ್ತು ದಿನೇಶ್ ಶೆಟ್ಟಿ ಮಾಜಿ ಶಿಕ್ಷಕರ – ರಕ್ಷಕ ಸಂಘದ ಅಧ್ಯಕ್ಷರು ಗಾಂಧೀಜಿ ಭಾವಚಿತ್ರಕ್ಕೆ
ಪುಷ್ಪಾರ್ಚನೆಗೈದರು.

ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರು ಮತ್ತು ಸಹ ಶಿಕ್ಷಕರು ಉಪಸ್ಥಿತರಿದ್ದರು. ಸ್ಕೌಟ್ ಮತ್ತು ಗೈಡ್ ವಿದ್ಯಾರ್ಥಿಗಳು ಸರ್ವಧರ್ಮ ಪ್ರಾರ್ಥನೆ ನಡೆಸಿಕೊಟ್ಟರು. ವಿದ್ಯಾರ್ಥಿಗಳಿಂದ ಗಾಂಧೀಜಿಯವರ ಕುರಿತು ಭಾಷಣ ಮತ್ತು ಹಾಡು ಪ್ರದರ್ಶಿಸಲ್ಪಟ್ಟವು. ಶಾಲಾ ಸುತ್ತಮುತ್ತ ಮತ್ತು ಕಲಾಬಾಗಿಲು ಬಸ್ ನಿಲ್ದಾಣವನ್ನು ವಿದ್ಯಾರ್ಥಿಗಳು ಶುಚಿಗೊಳಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here