


ವಿಟ್ಲ: ವಿಟ್ಲ ಸಮೀಪದ ಕುದ್ದುಪದವು ಪೆಟ್ರೋಲ್ ಬಂಕ್ ನಲ್ಲಿ ಲಕ್ಷಾಂತರ ರೂ ಕಳ್ಳತನ ನಡೆದ ಘಟನೆ ಬುಧವಾರ ಮುಂಜಾನೆ ವೇಳೆ ನಡೆದಿದೆ. ಪೆಟ್ರೋಲ್ ಬಂಕ್ ನಲ್ಲಿರುವ
ಲಾಕರನ್ನೇ ಎತ್ತಿಕೊಂಡು ಹೋಗಿ ಸುಮಾರು ಮೂರು ಲಕ್ಷ ನಗದು ದೋಚಲಾಗಿದೆ ಎಂದು ಹೇಳಲಾಗಿದೆ.
ವಿಟ್ಲ ಸಮೀಪದ ಕಾಶಿಮಠ ಎಂಬಲ್ಲಿಂದ ಆಪೆ ಸರಕು ಸಾಗಾಟ ರಿಕ್ಷಾವನ್ನು ಎಗರಿಸಿ ಸಾಗಾಟ ಮಾಡಿರುವ ಶಂಕೆ ವ್ಯಕ್ತವಾಗಿದೆ.
ವಿಟ್ಲ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.







