ಬಂಟ್ವಾಳ : ಸಾಮಾಜಿಕ ಮೌಲ್ಯಗಳಾದ ಕುಟುಂಬ ಪ್ರೀತಿ, ಆತ್ಮಗೌರವ, ಪ್ರಾಮಾಣಿಕತೆಯನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು. ಇದರಿಂದಾಗಿ ಸಮಾಜದಲ್ಲಿ ನಮ್ಮ ಗೌರವ ಹೆಚ್ಚಾಗುತ್ತದೆ. ನಾವು ಸಮಾಜಕ್ಕೆ ಪೂರಕವಾಗಿ ಬೆಳೆಯಲು ಸಾಧ್ಯ ಎಂದು ನಿವೃತ್ತ ಅಧ್ಯಾಪಕ ಮಹಮ್ಮದ್ ತುಂಬೆ ಹೇಳಿದರು.
ಅವರು ವಗ್ಗ ಸರಕಾರಿ ಪ್ರೌಢ ಶಾಲೆಯಲ್ಲಿ ನಡೆದ ಶ್ರೀ ವೆಂಕಟರಮಣ ಸ್ವಾಮಿ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾಯೋಜನೆಯ ವತಿಯಿಂದ ನಡೆದ ವಾರ್ಷಿಕ ವಿಶೇಷ ಶಿಬಿರ ಮಂಗಳವಾರ ನಡೆದ ವಿದ್ಯಾರ್ಥಿಗಳು ಮತ್ತು ಸಾಮಾಜಿಕ ಮೌಲ್ಯಗಳು ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ ಇಂದು ಮೌಲ್ಯಗಳು ಕಡಿಮೆಯಾಗಿರುವ ಕಾರಣ ಸಮಾಜದಲ್ಲಿ ನಾನಾ ರೀತಿಯ ಸಮಸ್ಯೆಗಳು ಉಂಟಾಘುತ್ತದೆ. ಇದನ್ನು ಮೀರಿ ವಿದ್ಯಾರ್ಥಿಗಳು ಉತ್ತಮ ಸಂಸ್ಕಾರವನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಶಿಬಿರಾಧಿಕಾರಿ ಕವಿತಾಯಾದವ್, ಸಹಶಿಬಿರಾಧಿಕಾರಿ ಶಾಲಿನಿ ಬಿ, ತೇಜಸ್ವಿ, ಸುದರ್ಶನ್ ಬಿ. ಮನೋಹರ ಶಾಂತಪ್ಪ ದೊಡ್ಡಮನಿ, ಮಹಿಮ ಸಿ ಉಪನ್ಯಾಸಕರಾದ ಸಂದ್ಯಾ ಮತ್ತು ಕಾವ್ಯಶ್ರೀ ಉಪಸ್ಥಿತರಿದ್ದರು. ಶಿಬಿರಾರ್ಥಿ ವಿನ್ಯಾಸ್ ಸ್ವಾಗತಿಸಿ, ವಿದ್ಯಾಶ್ರೀ ವಂದಿಸಿದರು. ಅನುಷಾ ನಿರೂಪಿಸಿದರು. ಶಿಬಿರಾರ್ಥಿಗಳಾಧ ಪೂಜಾರಿ ನೇಹಾ ಕೃಷ್ಣ, ಉಜ್ವಲ್, ಶಶಾಂಕ್ ಶೆಟ್ಟಿ, ಧನುಷ್ ಸಹಕರಿಸಿದರು.
ಎಸ್ವಿಎಸ್ ಎನ್‌ಎಸ್‌ಎಸ್ ವಿದ್ಯಾರ್ಥಿಗಳಿಂದ ಸ್ವಚ್ಛತಾ ಅಭಿಯಾನ:
ಬಂಟ್ವಾಳ : ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ೨೦೧೯-೨೯ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರದ ಪ್ರಯುಕ್ತ ಸರಕಾರಿ ಪ್ರೌಢ ಶಾಲೆ ವಗ್ಗದಿಂದ ಶ್ರೀ ಕಾರಿಂಜೇಶ್ವರ ದೇವಸ್ಥಾನದ ವರೆಗೆ ಸ್ವಚ್ಛತಾ ಜಾಥಾ ನಡೆಯಿತು. ಸರಕಾರಿ ಪ್ರೌಢ ಶಾಲೆ ವಗ್ಗದ ಮುಖ್ಯೋಪಾಧ್ಯಾಯ ಶೇಖ್ ಆದಂ ಶಾಹೇಬ್ ಜಾಥಾಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.
೨ವೈಎ ಸ್ವಚ್ಚತೆ

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here