ಬಿ.ಸಿ.ರೋಡ್ : ವಿದ್ಯಾರ್ಥಿಗಳು ತಮ್ಮನ್ನು ತಾವು ಕಲಿಕೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಾಗಿ ಪರೀಕ್ಷಾ ಸಮಯದಲ್ಲಿ ಮಾನಸಿಕ ಒತ್ತಡ ಉಂಟಾಗುವುದಿಲ್ಲ. ಆದರೆ ತಾವು ತರಗತಿಯಲ್ಲಿ ಇರುವಾಗ ಪರಿಪೂರ್ಣವಾಗಿ ಪಾಠದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ನರೇಂದ್ರ ಪದವಿಪೂರ್ವಕಾಲೇಜಿನ ವಿಶ್ರಾಂತ ಪ್ರಾಂಶುಪಾಲರಾದ ವಿಶ್ವೇಶ್ವರ ಭಟ್ ಹೇಳಿದರು. ಅವರು ಸೋಮವಾರ ಸರಕಾರಿ ಪ್ರೌಢಶಾಲೆ ವಗ್ಗದಲ್ಲಿ ನಡೆಯುತ್ತಿರುವ ಶ್ರೀ ವೆಂಕಟರಮಣ ಸ್ವಾಮಿ ಪದವಿಪೂರ್ವ ಕಾಲೇಜಿನ 2019-20ನೇ ಸಾಲಿನ ರಾಷ್ಟ್ರೀಯ ಸೇವಾಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳಿಗೆ ಸಂವಹನ ಕೌಶಲ್ಯಗಳ ಕುರಿತಾಗಿ ಚಟುವಟಿಕೆಗಳ ಮೂಲಕ ಮಾಹಿತಿ ನೀಡಿ, ಪ್ರತಿಯೊಬ್ಬ ವಿದ್ಯಾರ್ಥಿಯೂತಮ್ಮ ಸಂವಹನವನ್ನು ಉತ್ತಮ ಪಡಿಸಿಕೊಳ್ಳಬೇಕು. ಆಗ ಸಂಬಂಧ ವೃದ್ಧಿಯಾಗುತ್ತದೆ ಎಂದರು.
ಬಂಟ್ವಾಳ ತಾಲೂಕು ವಕೀಲ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಜೈನ್, ಕಾವಳಪಡೂರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಶಿವಪ್ಪ ಗೌಡ ನಿನ್ನಿಕಲ್ಲು, ಶಿಬಿರಾಧಿಕಾರಿ ಕವಿತಾಯಾದವ್, ಸಹಶಿಬಿರಾಧಿಕಾರಿಗಳಾದ ಶಾಲಿನಿ ಬಿ., ತೇಜಸ್ವಿ, ಸುದರ್ಶನ್ ಬಿ., ಉಪನ್ಯಾಸಕಿ ಸಂಧ್ಯಾ, ಘಟಕ ನಾಯಕಿ ಶ್ರೀಜಾ ಉಪಸ್ಥಿತರಿದ್ದರು. ಶಿಬಿರಾರ್ಥಿಗಳಾದ ವಿದ್ಯಾಶ್ರೀ, ಶ್ರಾವ್ಯ, ದೀಕ್ಷಿತಾ ಪ್ರಾರ್ಥಿಸಿದರು. ಶಿಬಿರಾರ್ಥಿ ಜಿತೇಶ್ ಸ್ವಾಗತಿಸಿ, ಜನ್ಯಶ್ರೀ ಧನ್ಯವಾದ ಸಮರ್ಪಿಸಿದರು. ಅಕ್ಷಯ್‌ಅತಿರ್ಥಿ ಪರಿಚಯ ಮಾಡಿದರು. ಘಟಕ ನಾಯಕ ವೈಶಾಖ್ ನಿರೂಪಿಸಿದರು. ವೈಷ್ಣವಿ ಭಟ್, ಅನ್ವಿತ್, ಹರ್ಷಿತ್‌ಜೆ. ಸಹಕರಿಸಿದರು.
ಶ್ರಮಾದಾನಕ್ಕೆ ಚಾಲನೆ:
ಬಿ.ಸಿ.ರೋಡ್ : ಸರಕಾರಿ ಪ್ರೌಢಶಾಲೆ ವಗ್ಗದಲ್ಲಿ ಶ್ರೀ ವೆಂಕಟರಮಣ ಸ್ವಾಮಿ ಪದವಿಪೂರ್ವಕಾಲೇಜಿನರಾಷ್ಟ್ರೀಯ ಸೇವಾಯೋಜನೆಯ 2019-20ನೇ ಸಾಲಿನ  ವಾರ್ಷಿಕ ವಿಶೇಷ ಶಿಬಿರದ ಶ್ರಮದಾನಕ್ಕೆಯುನೈಟೆಡ್ ಕ್ರಿಶ್ಚಿಯನ್ ಅಸೋಸಿಯೇಶನ್ ನೀರ್ಖಾನ ಇದರ ಅಧ್ಯಕ್ಷರಾದ ಬೆನೆಡಿಕ್ಟ್ ಡಿಸೋಜ ಸಾಂಕೇತಿಕವಾಗಿ ಚಾಲನೆ ನೀಡಿದರು.
ಸರಕಾರಿ ಪ್ರೌಢ ಶಾಲೆ ವಗ್ಗದಲ್ಲಿ ದ್ವಜಾರೋಹಣ:
ಬಿ.ಸಿ.ರೋಡ್ : ಸರಕಾರಿ ಪ್ರೌಢಶಾಲೆ ವಗ್ಗದಲ್ಲಿ ಶ್ರೀ ವೆಂಕಟರಮಣ ಸ್ವಾಮಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾಯೋಜನೆ 2019-20ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರದ ಎರಡನೆಯ ದಿನದ ಧ್ವಜಾರೋಹಣವನ್ನು ಮಂಗಳವಾರ ಎಸ್.ವಿ.ಎಸ್ ಕಾಲೇಜಿನ ಕನ್ನಡ ಉಪನ್ಯಾಸಕ ಮನೋಹರ್ ಶಾಂತಪ್ಪ ದೊಡ್ಡಮನಿ ನೆರವೇರಿಸಿದರು. ಧನುಷ್ ಸ್ವಾಗತಿಸಿ, ನಿಶಾಂಕ್ ಶೆಟ್ಟಿಧನ್ಯವಾದ ಸಮರ್ಪಿಸಿದರು. ಪೂಜಾರಿ ನೇಹಾ ಕೃಷ್ಣ ನಿರೂಪಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here