ಬಂಟ್ವಾಳ: ದ.ಕ.ಜಿಲ್ಲಾ ಪಂಚಾಯತ್, ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ , ತಾಲೂಕು ಪಂಚಾಯತ್ ಬಂಟ್ವಾಳ ಮತ್ತು ರೋಟರಿ ಕ್ಲಬ್ ಬಂಟ್ವಾಳ ಇವರ ಸಂಯುಕ್ತ ಆಶ್ರಯ ದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ 2019 ವಿವಾಹ ಮತ್ತು ಕುಟುಂಬ ಕಲ್ಯಾಣ ಯೋಜನೆಯಲ್ಲಿ ಕೈಜೋಡಿಸಿದ ಭಾರತ ಕಾರ್ಯಕ್ರಮ ರೋಟರಿ ಕ್ಲಬ್ ಬಿಸಿರೋಡು ಇಲ್ಲಿ ನಡೆಯಿತು.
ಕಾರ್ಯಕ್ರಮ ವನ್ನು ಉದ್ಘಾಟಿಸಿದ ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಅವರು ದೇಶದ ಜನಸಂಖ್ಯೆಯ ಸ್ಥಿರತೆ ರಾಷ್ಟ್ರದ ಅಭಿವೃದಿಗೆ ಪೂರಕವಾಗಬಹುದು.
ಜನಸಂಖ್ಯೆಯ ಏರಿಕೆ ಸದೃಡವಾದ ದೇಶಕ್ಕೆ ಮಾರಕವಾಗಬಹುದು.
2024 ರ ಅವಧಿಯಲ್ಲಿ ಇತರ ದೇಶದೊಂದಿಗೆ ಜನಸಂಖ್ಯೆ ಯಲ್ಲಿ ಸ್ಪರ್ಧಾತ್ಮಕವಾಗಿ ಬೆಳೆಯಬಹುದೇ ಹೊರತು ಉದ್ಯಮ, ಉದ್ಯೋಗ, ತಾಂತ್ರಿಕವಾಗಿ ಭಾರತ ಹಿಂದೆ ಉಳಿಯಬಹುದು.
ಜನಸಂಖ್ಯೆಯ ಜೊತೆ ಸಂಖ್ಯೆಯ ಹೇರಿಕೆಯಿಂದ ಅಗುವ ದುಷ್ಪರಿಣಾಮ ಗಳ ಬಗ್ಗೆ ಮಾಹಿತಿ ನೀಡುವ ಮೂಲಕ ಜನಸಂಖ್ಯೆ ನಿಯಂತ್ರಣ ಅಗಬೇಕಾಗಿದೆ.
ಪ್ರಸ್ತುತ ಜನರನ್ನು ದೇಶಕ್ಕೆ ಆಸ್ತಿ ಯಾಗಿ ಬೆಳೆಸುವ ಅನಿವಾರ್ಯತೆ ಇದೆ.
ಒತ್ತಾಯಪೂರ್ವಕ ಕಾರ್ಯಕ್ರಮ ಯಾವುದೇ ಪ್ರಯೋಜನ ಅಸಾಧ್ಯ. ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಸ್ವಯಂಪ್ರೇರಿತ ವಾಗಿ ಅಗಬೇಕಾಗಿದೆ.
ವೇದಿಕೆಯಲ್ಲಿ ಜಿ.ಪಂ.ಸದಸ್ಯ ಎಂ.ಎಸ್.ಮಹಮ್ಮದ್, ತಾಲೂಕು ಪಂಚಾಯತ್ ಉಪಾಧ್ಯಕ್ಷ ಅಬ್ಬಾಸ್ ಆಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಮೀ ಸಿ. ಬಂಗೇರ, ಅಡ್ಯನಡ್ಕ ಪ್ರಾಥಮಿಕ ಆರೋಗ್ಯ ಕೇಂದ್ರ ದ ವೈದ್ಯಾಧಿಕಾರಿ ಡಾ| ವಿಶ್ವೇಶ್ವರ್ ಭಟ್, ರೋಟರಿ ಕ್ಲಬ್ ನ ಆನ್ಸ್ ಅಧ್ಯಕ್ಷೆ ಡಾ| ಪ್ರತಿಭಾ ರೈ ಮತ್ತಿತರರು ಉಪಸ್ಥಿತರಿದ್ದರು.
ಪ್ರಸ್ತಾವಿಕವಾಗಿ ಡಾ| ದೀಪಾ ಪ್ರಭು ಮಾತನಾಡಿದರು. ಕುಟುಂಬ ಕಲ್ಯಾಣ ಇಲಾಖೆಯ ಮೂಲಕ ಪ್ರಗತಿಸಾಧಿಸಿದ ಆರೋಗ್ಯ ಇಲಾಖಾ ಮಹಿಳಾ ಸಹಾಯಕಿ ಹಾಗೂ ಆಶಾ ಕಾರ್ಯಕರ್ತೆ ಯರನ್ನು ಸನ್ಮಾನಿಸಲಾಯಿತು.
ಡಾ|ದೀಪಾ ಪ್ರಭು ಸ್ವಾಗತಿಸಿದರು.ಆರೋಗ್ಯ ಇಲಾಖಾ ಸಿಬ್ಬಂದಿ ಕುಸುಮ ವಂದಿಸಿದರು.ಜಯರಾಮ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here