

ಬಂಟ್ವಾಳ: ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ರವರು ನವರಾತ್ರಿಯ ಶುಭ ಸಂಧರ್ಭದಲ್ಲಿ ಶ್ರೀ ಕ್ಷೇತ್ರ ಪೊಳಲಿಗೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು.
ಆ ಬಳಿಕ ದಡ್ಡಲಕಾಡು ಸಾಲೆಗೆ ಭೇಟಿ ನೀಡಿದ ಅವರು ವಿದ್ಯಾರ್ಥಿಗಳಿಗೆ ಸರಕಾರದ ಉಚಿತ ಸೈಕಲ್ ವಿತರಿಸಿದರು. ಈ ಸಂದರ್ಭದಲ್ಲಿ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಕ್ಷೇತ್ರ ಆಡಳಿತ ಮೊಕ್ತೆಸರಾದ ತಾರಾನಾಥ ಆಳ್ವ ಉಳಿಪ್ಪಾಡಿಗುತ್ತು, ವೆಂಕಟೇಶ್ ನಾವಡ, ತಾ.ಪ ಸದಸ್ಯ ಯಶವಂತ ಪೊಳಲಿ, ಪಂ.ಸದಸ್ಯ ಲೋಕೇಶ್ ಭರಣಿ, ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್, ಸುಕೇಶ್ ಚೌಟ ಬಡಕಬೈಲು, ಚಂದ್ರಹಾಸ ಶೆಟ್ಟಿ ನರಳ, ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ, ವಿದ್ಯಾವಿಲಾಸ ಹಿ.ಪ್ರಾ ಶಾಲೆ ಮುಖ್ಯೋಪಾಧ್ಯಾಯರು ಸುಬ್ರಾಯ ಕಾರಂತ, ವಿಟ್ಲ ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷ ಅರುಣ್ ವಿಟ್ಲ ಉಪಸ್ಥಿತರಿದ್ದರು.








