ಬಂಟ್ವಾಳ: ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರ ದಲ್ಲಿ ವಿದ್ಯಾರ್ಥಿ ಗಳಿಗೆ ನೀಡುವ ಶಿಕ್ಷಣ ಇಡೀ ದೇಶದಲ್ಲಿಯೇ ವೈಶಿಷ್ಟ್ಯ ಪೂರ್ಣ ವಾಗಿದೆ ಎಂದು ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಇಲಾಖಾ ಸಚಿವ ಪ್ರಹ್ಲಾದ್ ಜೋಷಿ ಅವರು ಹೇಳಿದರು.
ಅವರು ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಕಾರ್ಯ ಕ್ರಮ ಮುಗಿಸಿ ವಾಪಾಸು ಹೋಗುವ ವೇಳೆ ಕಲ್ಲಡ್ಕ ಶ್ರೀ ರಾಮ ವಿದ್ಯಾ ಕೇಂದ್ರಕ್ಕೆ ಬೇಟಿ ನೀಡಿ ಅಲ್ಲಿನ ವಿದ್ಯಾರ್ಥಿಗಳ ಕ್ರೀಡೋತ್ಸವ ಮಾದರಿ ಪ್ರದರ್ಶನ ವೀಕ್ಷಿಸಿದ ಬಳಿಕ ಮಾದ್ಯಮ ವರ ಜೊತೆಯಲ್ಲಿ ಮಾತನಾಡಿದರು.ಈ ವಿದ್ಯಾಕೇಂದ್ರದಲ್ಲಿ ಶಿಕ್ಷಣದ ಜೊತೆಯಲ್ಲಿ ದೇಶದ ಇತಿಹಾಸ, ಸಂಸ್ರ್ಕತಿಗೆ, ಪರಂಪರೆಗೆ ಸಂಬಂಧಿಸಿದ ಎಲ್ಲಾ ತರಹದ ಶಿಕ್ಷಣ ನೀಡುವ ಸಂಸ್ಥೆ ಬಹುಶಃ ಇತರರಿಗೆ ಮಾದರಿ.

ದೈಹಿಕ ಆರೋಗ್ಯ, ಮಾನಸಿಕ ಆರೋಗ್ಯ ಕ್ಕೆ ಒಂದಿಷ್ಟು ವ್ಯವಸ್ಥೆಯ ಜೊತೆ ಈ ಒಟ್ಟಾರೆ ಶಿಕ್ಷಣ ಪದ್ದತಿಗೆ ಜೊತೆ ತಂದಿರುವುದು ಪ್ರತಿ ಮಗುವಿನ ಸಮಗ್ರ ವಿಕಸನಕ್ಕೆ ದಾರಿ ಮಾಡುವಂತಹ ಶಿಕ್ಷಣ ಪದ್ದತಿ ಯಾಗಿದೆ ಎಂದು ಅವರು ಹೇಳಿದರು.
ಇಲ್ಲಿನ ಶಿಕ್ಷಣ ಸಂಸ್ಥೆ ,ವ್ಯವಸ್ಥೆ ನನಗೆ ಬಹಳ ಸಂತೋಷ ವಾಗಿದೆ ಇಂಗ್ಲೀಷ್ ನಲ್ಲಿ ಹೇಳುವುದಾದರೆ ಐಯಾಮ್ ವೆರಿಮಚ್ ಇಂಪ್ರೆಸ್ ಎಂದರು.
ಈ ಸಂದರ್ಭದಲ್ಲಿ ಕಲ್ಲಡ್ಕ ಶ್ರೀ ರಾಮ ವಿದ್ಯಾ ಕೇಂದ್ರದ ಸಂಚಾಲಕ ಡಾ! ಪ್ರಭಾಕರ್ ಭಟ್, ಬಿಜೆಪಿ ಪ್ರಮುಖರಾದ ಗೋಪಾಲಕೃಷ್ಣ ಹೇರಳೆ, ಸುಲೋಚನ ಜಿ.ಕೆ.ಭಟ್, ವಿದ್ಯಾಕೇಂದ್ರದ ಶಿಕ್ಷಕರು ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here