ಬಂಟ್ವಾಳ:  ತಾಲೂಕಿನ ರಾಯಿ ಸಮೀಪದ ಬಲ್ಲಾಳ್ ಬೆಟ್ಟು ನಿವಾಸಿ ಮೋನಪ್ಪ ಬಂಗೇರ ಎಂಬವರ ಮನೆ ಅಂಗಳದಲ್ಲಿದ್ದ ಎರಡು ಸಾಕು ನಾಯಿಗಳನ್ನು ಹಿಡಿಯಲು ಬಂದಿದ್ದ ಚಿರತೆಯೊಂದು ಮನೆಯ ಬಾವಿಗೆ ಬಿದ್ದ ಘಟನೆ ಸೋಮವಾರ ಮುಂಜಾನೆ ನಡೆದಿದೆ.

 

ಅರಣ್ಯ ಇಲಾಖೆ ಅಧಿಕಾರಿಗಳು ಬಂದು ಚಿರತೆ ಮೇಲುತ್ತುವ ಕಾಯಾ೯ಚರಣೆ ವೀಕ್ಷಿಸಲು ಸ್ಥಳೀಯ ಅಪಾರ ಮಂದಿ ಕುತೂಹಲದಿಂದ ಜಮಾಯಿಸಿದ್ದಾರೆ. ಇಲ್ಲಿನ ದೈಲ, ಅಮ್ಯಾಲು, ಕೈತ್ರೋಡಿ, ಬದನಡಿ ಮತ್ತಿತರ ಪ್ರದೇಶಗಳಲ್ಲಿ ಕಳೆದ ಐದಾರು ವಷ೯ಗಳಲ್ಲಿ ಹಲವಾರು ನಾಯಿ ಮತ್ತು ಜಾನುವಾರುಗಳನ್ನು ಚಿರತೆ ಕೊಂಡೊಯ್ದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here