

ಬಂಟ್ವಾಳ : ಬಿ.ಸಿ.ರೋಡಿನ ರಾಷ್ಟ್ರೀಯ ಹೆದ್ದಾರಿ 75ರ ನೇತ್ರಾವತಿ ಸೇತುವೆಯಿಂದ ಒಂದೇ ಕುಟುಂಬದ ಮೂವರು ನದಿಗೆ ಹಾರಿದ್ದು, ಅವರ ಪೈಕಿ ಓರ್ವ ಮಹಿಳೆಯ ಮೃತ ದೇಹ ದೊರೆತಿದ್ದು ಇನ್ನಿಬ್ಬರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಕವಿತಾ ಮಂದಾಣ್ಣ ಅವರ ಮೃತದೇಹ ಪತ್ತೆಯಾಗಿದ್ದು ಉಳಿದಂತೆ ಇವರ ಮಗ ಕೌಶಿಕ್ ಮಂದಣ್ಣ (22), ಮಗಳು ಕಲ್ಪಿತಾ ಮಂದಣ್ಣ (20)ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಹಾರಿದವರು ಮೈಸೂರು ನಗರದ ಪಿ.ಎಸ್.ನಗರದವರು.
ಇವರು ಮೂಲತಃ ಕೊಡಗು ಜಿಲ್ಲೆಯ ವಿರಾಜಪೇಟೆ ಕಡಂಗಳ ಬಳ್ಳಚಂಡ ಕುಟುಂಬದವರು.
ಕವಿತಾ ಮಂದಣ್ಣ ಅವರ ಗಂಡ ಕಿಶನ್ ಮಂದಾಣ್ಣ ಒರ್ವ ಕೃಷಿಕ.
ಅವರು ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದರು.
ತೀವ್ರ ವಾದ ಹುಡುಕಾಟ ದ ಬಳಿಕ
ನಿನ್ನೆ ಮಧ್ಯಾಹ್ನ ದ ವೇಳೆ ಇವರ ಮೃತ ದೇಹ ಪತ್ತೆಯಾಗಿತ್ತು.
ಇವರ ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಲು ಆಸ್ಪತ್ರೆ ಗೆ ಕೊಂಡುಹೋದ ವೇಳೆ
ಕಿಶನ್ ಅವರ ಸಾವಿನಿಂದ ಶಾಕ್ ಅದ ಈ ಕುಟುಂಬ ಪತ್ರವನ್ನು ಬರೆದಿಟ್ಟು ಮಂಗಳೂರು ಕಡೆಗೆ ಅಗಮಿಸಿತ್ತು.
ರಾತ್ರಿ ಸುಮಾರು 10.30 ರ ವೇಳೆ ಈ ಕುಟುಂಬ ಬಂಟ್ವಾಳಕ್ಕೆ ಬಂದು ನೇತ್ರಾವತಿ ನದಿಯ ಸಮೀಪವಿರುವ ಹೋಟೇಲೊಂದರ ಪಕ್ಕ ತಮ್ಮ ಇಕೋ ಕಾರು ನಿಲ್ಲಿಸಿ ನದಿಯ ಕಡೆಗೆ ನಡೆದುಕೊಂಡು ಬರುತ್ತಿದ್ದರು, ಜೊತೆಗೆ ಅವರ ಪ್ರೀತಿಯ ನಾಯಿಯ ಜೊತೆಯಲ್ಲಿ.
ಸಾಯಲೆಂದೆ ನಿರ್ಣಯ ಮಾಡಿ ಬಂದ ಈ ಕುಟುಂಬ ತಾಯಿ ಜೊತೆ ಇಬ್ಬರು ಮಕ್ಕಳು ನದಿಗೆ ಹಾರಿದ್ದಾರೆ.
ಕವಿತಾ ಅವರು ತನ್ನ ಪ್ರೀತಿಯ ನಾಯಿಯನ್ನು ಹಿಡಿದುಕೊಂಡು ಜೊತೆಯಾಗಿ ಹಾರಿದ್ದರು.
ಇವರು ಹಾರಿದಾಗ ಸ್ಥಳೀಯ ರಿಕ್ಷಾ ಚಾಲಕರೋರ್ವರು ನೋಡಿ ಸ್ಥಳೀಯ ಈಜುಗಾರರಲ್ಲಿ ತಿಳಿಸಿದ್ದಾರೆ.
ಕೂಡಲೇ ರಕ್ಷಣೆಗೆ ಮುಂದಾದರಾದರೂ ರಾತ್ರಿ ವೇಳೆ ಯಾದ್ದರಿಂದ ಅವರ ರಕ್ಷಣೆ ಕಷ್ಟಸಾಧ್ಯವಾಯಿತು.
ನಾಯಿ ಜೊತೆಯಲ್ಲಿ ಹಾರಿದ ಮಹಿಳೆ ಜೀವನ್ಮರಣ ಸ್ಥಿತಿಯಲ್ಲಿ ಮುಳುಗೇಳುತ್ತಿದ್ದ ಸಂದರ್ಭದಲ್ಲಿ ನೋಡಿದ ಸ್ಥಳೀಯ ಮುಳುಗುತಜ್ಞರು
ಕಾರ್ಯಪ್ರವೃತ್ತರಾಗಿದ್ದು, ಗೂಡಿನಬಳಿ ಹಳೇ ಸೇತುವೆ ಬಳಿ ಮಹಿಳೆಯನ್ನು ರಕ್ಷಿಸಿದ್ದಾರೆ. ಜೊತೆಗೆ ನಾಯಿಯನ್ನೂ ಸ್ಥಳೀಯರು ರಕ್ಷಿಸಿದ್ದಾರೆ. ಮಹಿಳೆ ಪ್ರಜ್ಞಾಹೀನ ಸ್ಥಿತಿಯಲ್ಲಿ ತುಂಬೆ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದರು.
ಆದರೆ ತುಂಬೆ ಆಸ್ಪತ್ರೆಯಲ್ಲಿ ಮಹಿಳೆ ರಾತ್ರಿ ಸುಮಾರು 11.45ಕ್ಕೆ ಕೊನೆಯುಸಿರೆಳೆದಿದ್ದಾರೆ.
ಇನ್ನಿಬರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಬಂಟ್ವಾಳ ವೃತ್ತ ನಿರೀಕ್ಷಕ ಟಿ. ಡಿ.ನಾಗರಾಜ್, ಬಂಟ್ವಾಳ ನಗರ ಠಾಣಾ ಎಸ್. ಐ.ಚಂದ್ರಶೇಖರ್ ಸ್ಥಳಕ್ಕೆ ಬೇಟಿ ನೀಡಿದ್ದಾರೆ.








