ಕೈಕಂಬ: ಇತಿಹಾಸ ಪ್ರಸಿದ್ದ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಸೆ.29ರಿಂದ ಅ.6ರವರೆಗೆ ದೇವಿ ಸನ್ನಿಧಿಯಲ್ಲಿ ನವರಾತ್ರಿ ಮಹೊತ್ಸವ ನಡೆಯಲಿದೆ.
ನವರಾತ್ರಿ ಪೂಜೆಯು ಪ್ರತಿನಿತ್ಯ ರಾತ್ರಿ 8.30 ಗಂಟೆಗೆ ನಡೆಯಲಿದೆ. ಪ್ರತಿದಿನ ಮಧ್ಯಾಹ್ನ ಭಕ್ತಾಧಿಗಳಿಂದ ಹರಕೆಯ ಚಂಡಿಕಾ ಹೋಮವು ಹಾಗೂ ಅ.6 ರಂದು ಮಹಾನವಮಿಯ ಪ್ರಯುಕ್ತ ದೇವಳದ ವತಿಯಿಂದ ಚಂಡಿಕಾ ಹೋಮ ನಡೆಯಲಿದೆ. ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸೆ. 29ರಂದು ಭಾನುವಾರ ಸಂಜೆ 6.15ರಿಂದ 7.45ರತನಕ ಗಿಟಾರ್‌ವಾದನ, 7.45 ರಿಂದ 9.45ರ ತನಕ ಶ್ರೀ ಸುಬ್ರ್ಮಣ್ಯೇಶ್ವರ ಯಕ್ಷ ನಾಟ್ಯ ಕಲಾಕೇಂದ್ರ ತಕಧಿಮಿ ತಂಡದ ವಿದ್ಯಾರ್ಥಿಗಳಿಂದ ಯಕ್ಷಗಾನ ಬಯಲಾಟ “ಹನುಮೋದ್ಭವ”

ಸೆ.30 ರಂದು ಸೋಮವಾರ ಸಂಜೆ 6.15ರಿಂದ 7.45 ರವರೆಗೆ ನೃತ್ಯಾರ್ಪಣ ಭರತನಾಟ್ಯ ವಿದೂಷಿ  ಪ್ರಣತಿ ಚೈತನ್ಯ ಪದ್ಯಾಣ ಇವರಿಂದ ರಾತ್ರಿ 7.45 ರಿಂದ “ಗೀತಾ ಸಾಹಿತ್ಯ ಸಂಭ್ರಮ” ವಿಠಲ ನಾಯಕ್ ಬಳಗ ಕಲ್ಲಡ್ಕ ಇವರಿಂದ.
ಅ.1ರಂದು ಮಂಗಳವಾರ ಸಂಜೆ 6.15ರಿಂದ ಶರವು ಕಲಾವಿದರು ಮಂಗಳೂರು ಇವರಿಂದ ತುಳು ಪೌರಾಣಿಕ ನಾಟಕ ಕಾರಣಿಕದ ಶನೀಶ್ವರೆ. ಕಥೆ ನವನೀತ್ ಶೆಟ್ಟಿ ಕದ್ರಿ ನಿರ್ದೇಶನ ನಿರ್ವಹಣೆ ರಂಗರತ್ನೆ ರಾಘವೇಂದ್ರ ರಾವ್ ಕುಡುಪು.
ಅ.2 ರಂದು ಬುಧವಾರ ಸಂಜೆ 6.15ರಿಂದ ಸುಗಮ ಸಂಗೀತ ಭಕ್ತಿ ಸಂಗೀತ ಡಾ. ಸುಶೀಲ ಪತ್ತೂರು ಇವರಿಂದ.
ಅ.3ರಂದು ಗುರುವಾರ ಸಂಜೆ 6.15ರಿಂದ ಒಡಿಸ್ಸಿ ನೃತ್ಯ ಅಪೂರ್ವ ಅಭಯ್ ಮುಂಬೈ ಇವರಿಂದ ಸಂಜೆ 7.45ರಿಂದ ಭರತ ನಾಟ್ಯ ವಿದೂಷಿ ಸೌಮ್ಯ ಸುಧೀಂದ್ರ ರಾವ್ ನೃತ್ಯ ಸುಧಾ ಮಂಗಳೂರು ಇವರಿಂದ. ಅ.4 ರಂದು ಶುಕ್ರವಾರ 6.15 ರಿಂದ ಯಕ್ಷಗಾನ ತಾಳಮದ್ದಳೆ ಗಾಗೇಯ.

ಅ.5ರಂದು ಸಂಜೆ 6.15ರಿಂದ ಪೊಳಲಿ ಯಕ್ಷೆತ್ಸವ- 2019 ಜಿಲ್ಲೆಯ ಪ್ರಸಿದ್ದ ಕಲಾವದರ ಕೂಡುವಿಕೆಯಿಂದ “ಯಕ್ಷ- ಗಾನ- ವೈಭವ”
“ಯಕ್ಷಗಾನ ಬಯಲಾಟ”.

ಅ.6 ರಂದು ಸಂಜೆ 4 ರಿಂದ 6 ರ ತನಕ ಯಶಸ್ವಿನಿ ಉಳ್ಳಾಲ್ ಸ್ವರ ಮಾಧುರ್ಯ ಸಂಗೀತ ವಿದ್ಯಾಲಯ ಇವರಿಂದ “ಸುಗಮ ಸಂಗೀತ” ದಾಸ ಸಂಕೀರ್ತನೆ ಭಕ್ತಿಗಾಯನ, ದೇವರ ನಾಮಗಳು” ಸಂಜೆ 6ರಿಂದ “ನವರಾತ್ರಿ ವೇಷಗಳ ಸಂಭ್ರಮ”

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here