ಬಂಟ್ವಾಳ : ಇಲ್ಲಿನ ವಿಧಾನ ಸಭಾ ಕ್ಷೇತ್ರದ  ಕರ್ಪೆ ಗ್ರಾಮದ 1 ಮತ್ತು 2  ಬೂತ್ ಸಮಿತಿ ಯನ್ನು ಪುನರ್ರರಚಿಸಲಾಯಿತು. ಕರ್ಪೆ ಗ್ರಾಮದ ಪಾರ್ಲ  ಕೃಷ್ಣ ಪ್ರಭುರವರ ಮನೆಯಲ್ಲಿ ನಡೆದ ಸಭೆಯಲ್ಲಿ ಬಿಜೆಪಿ ಸಂಗಬೆಟ್ಟು ಮಹಾಶಕ್ತಿ ಕೇಂದ್ರದ ಅದ್ಯಕ್ಷ .ಕೆ. ರತ್ನಕುಮಾರ್ ಚೌಟ ಚುನಾವಣಾ ಪ್ರಕ್ರಿಯೆ  ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಸದಸ್ಯ ಪ್ರಭಾಕರ ಪ್ರಭು , ಬೂತ್ ಅದ್ಯಕ್ಷ ಕೆ.ರಾಮಕೃಷ್ಣ ನಾಯಕ್.ಪ್ರಮುಖರಾದ ಚಂದ್ರಶೇಖರ ಪೂವಳ, ರಾಜೇಂದ್ರ ಪೂಜಾರಿ ನೆಕ್ಲಾಜೆ , ಸಂಜೀವ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಕರ್ಪೆ ಬೂತ್ ಸಂಖ್ಯ 1 ರ ನೂತನ ಅದ್ಯಕ್ಷರಾಗಿ ತೇಜಸ್  ಕರ್ಪೆ, ಪ್ರದಾನ ಕಾರ್ಯದರ್ಶಿ ಯಾಗಿ ರಂಜಿತ್ ಮಡಿವಾಳ ಪೂವಳ ಕರ್ಪೆ, ಕಾರ್ಯದರ್ಶಿಗಳಾಗಿ ಹರೀಶ್ ಪೂಜಾರಿ ಪಾದೆಕರ್ಪೆ,ಭಾಸ್ಕರ ಪ್ರಭು ಬಾಳಿಕೆ, ಅಯ್ಕೆಗೊಂಡರು. ಹಾಗೂ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. ಹಾಗೆಯೇ ಕರ್ಪೆಗ್ರಾಮದ ಬೂತ್ ಸಮಿತಿ ಸಂಖ್ಯೆ 2 ರ‍ ನೂತನ ಅಧ್ಯಕ್ಷರಾಗಿ ನವೀನ್  ಪೂಜಾರಿ ಹೊಸ ಒಕ್ಲು ಆಯ್ಕೆಯಾದರು.
ಕಾರ್ಯದರ್ಶಿಗಳಾಗಿ ದಾಮೋದರ ನಾಯ್ಕ್ ಗುಳಿಗುಳಿ, ಹರೀಶ್ ಪೂಜಾರಿ ಶೆಟ್ಟಿಬೆಟ್ಟು ಇವರು ಆಯ್ಕೆಯಾದರು.ಹಾಗೆಯೇ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆರಿಸಲಾಯಿತು. ಕೆ. ರಾಮಕೃಷ್ಣ ನಾಯಕ್ ಸ್ವಾಗತಿಸಿದರು.ನವೀನ ವಂದಿಸಿದರು

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here