ಬಂಟ್ವಾಳ : ಪಂಡಿತ್ ದೀನ್‌ದಯಾಳ್ ಉಪಾಧ್ಯಾಯರ ಚಿಂತನೆ, ಸಮಾಜದ ಕಳಕಳಿಯು ಅಗಾಧವಾದುದು. ಸ್ವದೇಶಿ ಸಪ್ತಾಹ ದಿನವನ್ನು ನೆನಪಿಡುವುದಕ್ಕಿಂತ ಸಪ್ತಾಹಗಳನ್ನು ಏರ್ಪಡಿಸಿ ಪ್ರತೀ ದಿನ ತಮ್ಮ ವಿಭಿನ್ನ ಕಾರ್ಯಗಳ ಮೂಲಕ ಸ್ವದೇಶದ ಮೂಲ ಕಲ್ಪನೆಯನ್ನು ಭಾರತೀಯರ ಮನಸ್ಸುಗಳಲ್ಲಿ ಮೂಡಿಸುವಂತಾಗಬೇಕು ಎಂದರು.


ಶ್ರೀರಾಮ ಪ್ರಥಮದರ್ಜೆ ಕಾಲೇಜು ಕಲ್ಲಡ್ಕ ಇದರ ಪ್ರಭಾಸ ಮಾನವಿಕ ಸಂಘದಿಂದ ಪಂಡಿತ್ ದೀನ್‌ದಯಾಳ್ ಉಪಾಧ್ಯಾಯರ ಜನ್ಮದಿನ ಸೆಪ್ಟೆಂಬರ್ 25ರಿಂದ ಆರಂಭವಾಗಿ ಮಹಾತ್ಮ ಗಾಂಧೀಜಿಯವರ ಜನ್ಮದಿನ ಅಕ್ಟೋಬರ್ 2ರವರೆಗೆ ನಡೆಯುವ ಸ್ವದೇಶಿ ಸಪ್ತಾಹದ ಉದ್ಘಾಟನಾ ಕಾರ್ಯಕ್ರಮದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಇವರು ಮಾತನಾಡುತ್ತಾ ವ್ಯಕ್ತಿ, ಸಮಾಜ, ರಾಷ್ಟ್ರ, ಜಗತ್ತು ಇವು ಸುರುಳಿಯಂತೆ ಒಂದಕ್ಕೊಂದು ಸುತ್ತಿಕೊಂಡಿರುವುದು. ಜಗತ್ತಿನಲ್ಲಿ ನಮಗಿಂತ ಕೆಳಸ್ತರದಲ್ಲಿರುವ ವ್ಯಕ್ತಿತ್ವವನ್ನು ಮೇಲೆತ್ತಿದಾಗ ಮಾತ್ರ ಪ್ರತಿಯೊಬ್ಬರೂ ಸಮಾನ ಮನಸ್ಥಿತಿಯಲ್ಲಿ ಬೆಳೆಯಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ರಸಾದ ಕಾಯರ್‌ಕಟ್ಟೆ ಇವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸೆಪ್ಟೆಂಬರ್ ೨೫ರಿಂದ ಅಕ್ಟೋಬರ್ ೨ರವರೆಗೆ ಸ್ವದೇಶಿ ವಿಷಯಕ್ಕೆ ಸಂಬಂಧಪಟ್ಟಂತೆ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಂದ ದೇಶೀಯ ಕಂಪೆನಿಗಳ ಪರಿಚಯ, ದೇಶೀಯ ಕ್ರೀಡೆ, ಕಾನೂನು ಮಾಹಿತಿ, ವೃಕ್ಷಾರೋಪಣ, ಅಂಬೇಡ್ಕರ್-ಸ್ವದೇಶಾಭಿಮಾನ, ದೇಶಿಯ ಗೋತಳಿಗಳ ಪರಿಚಯವು ವಿವಿಧ ಸಂಘದ ವತಿಯಿಂದ ನಡೆಯಲಿದೆ.
ಕಾರ್ಯಕ್ರಮವನ್ನು ಜಗದೀಶ್ ದ್ವಿತೀಯ ಬಿ.ಕಾಂ ಸ್ವಾಗತಿಸಿ, ಮಧುಶ್ರೀ ಅಂತಿಮ ಬಿ.ಎ ವಂದಿಸಿ, ವರ್ಷಿಣಿ ತೃತೀಯ ಬಿ.ಎ ನಿರೂಪಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here