

ಬಂಟ್ವಾಳ: ಬಂಟ್ವಾಳ ಮೂಲದ ವಿದ್ಯಾರ್ಥಿ ಮಂಗಳೂರಿನ ಮಾಲ್ ಒಂದರಲ್ಲಿ ನೈತಿಕಪೋಲೀಸ್ ಗಿರಿ ನಡೆಸಿದ ಘಟನೆಯನ್ನು ವಿಶ್ವಹಿಂದೂ ಪರಿಷತ್ ಭಜರಂಗದಳ ಬಂಟ್ವಾಳ ಘಟಕ ಖಂಡಿಸಿದೆ.
ಬಂಟ್ವಾಳ ಪೇಟೆ ನಿವಾಸಿ ನಾಗರಾಜ್ ಅವರ ಪುತ್ರ ಮಂಜುನಾಥ್ ಅವರಿಗೆ ನಿನ್ನೆ ಮಂಗಳೂರು ಮಾಲ್ ಒಂದರಲ್ಲಿ ತಂಡದಿಂದ ಹಿಗ್ಗಾಮುಗ್ಗ ಥಳಿಸಿದ್ದರು.
ಕ್ಷುಲ್ಲಕ ಕಾರಣಗಳಿಗಾಗಿ ವಿದ್ಯಾರ್ಥಿಯ ಮೇಲೆ ನೈತಿಕಪೋಲೀಸ್ ಗಿರಿ ನಡೆಸಲಾಗಿದೆ ಎಂದು ಬಂಟ್ವಾಳ ಹಿಂದೂ ಸಂಘಟನೆಗಳು ಸ್ವರ ಎಬ್ಬಿಸಿ ಘಟನೆಯನ್ನು ಖಂಡಿಸಿದೆ








