

ಬಂಟ್ವಾಳ: ಮಾರಟ ಮಾಡುವ ಉದ್ದೇಶದಿಂದ ಕಳ್ಳತನ ಮಾಡಿ ಕಟ್ಟಿಹಾಕಿದ್ದ 11 ಜಾನುವಾರುಗಳನ್ನು ಬಂಟ್ವಾಳ ಗ್ರಾಮಾಂತರ ಠಾಣಾ ಪೋಲೀಸರು ವಶಪಡಿಸಿಕೊಂಡ ಘಟನೆ ಇಂದು ನಡೆದಿದೆ.
ಬಂಟ್ವಾಳ ಗ್ರಾಮಾಂತರ ಠಾಣಾ ಪಿ.ಎಸೈ ಪ್ರಸನ್ನ ಎಂ.ಎಸ್ ರವರು ಖಚಿತ ವರ್ತಮಾನದ ಮೇರೆಗೆ ಫರಂಗಿಪೇಟೆ ಬಳಿಯ ಅಮ್ಮೆಮಾರ್ ಎಂಬಲ್ಲಿಗೆ ದಾಳಿ ನಡೆಸಿ ಎಲ್ಲಿಂದಲೋ ಕಳ್ಳತನ ನಡೆಸಿ ತಂದು ಕಟ್ಟಿ ಹಾಕಿರುವ 4 ಹಾಲು ಕೊಡುವ ದನಗಳು, 5 ದನಗಳು ಹಾಗೂ 2 ಹೋರಿ ಕರು ಒಟ್ಟು 11 ಜಾನುವಾರು ಗಳನ್ನು ಸ್ವಾದೀನ ಪಡಿಸುಕೊಂಡಿದ್ದಾರೆ.
ವಶಪಡಿಸಿಕೊಂಡ ಜಾನುವಾರುಗಳ ಒಟ್ಟು ಮೌಲ್ಯ 1,01,000 ರೂ ಗಳಾಗಿದೆ.
ಕಳ್ಳತನ ಮಾಡಿದ ಆರೋಪಿಗಳು ತಲೆಮರೆಸಿಕೊಂಡಿದ್ದು ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ.
ದಾಳಿಯಲ್ಲಿ ಠಾಣಾ ಸಿಬ್ಬಂದಿಗಳಾದ ಹೆಚ್ ಸಿ ಜನಾರ್ದನ ಪೂಜಾರಿ, ಪಿಸಿ ಪುನೀತ್ ಮುಡಿಪು, ವಿಜಯ್ ಕುಮಾರ್, ಮಂಜುನಾಥ ಹಾಗೂ ಚಾಲಕ ಕಿರಣ್ ಕುಮಾರ್ ರವರು ಪಾಲ್ಗೊಂಡಿರುತ್ತಾರೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿತ್ತಿದ್ದಾರೆ…..








