

ವಿಟ್ಲ: ಪಳ್ಳದಕೋಡಿ-ಬೇತ ಮುಗುಳಿ ರಸ್ತೆಗೆ ೧ ಕೋಟಿ ರೂ.ಅನುದಾನ ಮಂಜೂರಾಗಲಿದೆ. ಪಳ್ಳದಕೋಡಿ-ಪದ್ಯಾಣ ಅಟಲ್ ರಸ್ತೆ ಮರುಡಾಮರು ಕಾಮಗಾರಿಗೆ ೨೫ ಲಕ್ಷ ರೂ., ಗುಬ್ಯ ಬೇಂಗದಪಡ್ಪು ರಸ್ತೆಗೆ ೨೫ ಲಕ್ಷ ರೂ. ಪ್ರಸ್ತಾವನೆ ಸಲ್ಲಿಸಲಾಗಿದ್ದು, ಮಂಜೂರಾತಿಯ ಹಂತದಲ್ಲಿದೆ. ೧೫ ಲಕ್ಷ ರೂ. ವೆಚ್ಚದ ಚೆಲ್ಲಂಗಾರು ಪರಿಶಿಷ್ಟ ಜಾತಿ ಕಾಲೊನಿ ರಸ್ತೆ ಕಾಂಕ್ರಿಟೀಕರಣ ಕಾಮಗಾರಿ ಉದ್ಘಾಟಿಸಲಾಯಿತು. ಪಾಲಿಗೆ ನಲಿಕೆ ಪ.ಜಾ. ಕಾಲೊನಿ ರಸ್ತೆ ಕಾಂಕ್ರಿಟೀಕರಣಕ್ಕೆ ೧೦ ಲಕ್ಷ ರೂ. ಅನುದಾನ ಟೆಂಡರ್ ಹಂತದಲ್ಲಿದೆ. ಒಟ್ಟಿನಲ್ಲಿ ಶಾಸಕನಾಗಿ ಆಯ್ಕೆಯಾದ ಬಳಿಕ ಕರೋಪಾಡಿ ಗ್ರಾಮಕ್ಕೆ ಅಭಿವೃದ್ಧಿಗಾಗಿ ೨.೫ ಕೋಟಿ ರೂ.ಗಳ ಅನುದಾನ ನಿಗದಿಪಡಿಸಲಾಗಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು ಹೇಳಿದರು.
ಅವರು ಬುಧವಾರ ಕರೋಪಾಡಿ ಗ್ರಾಮದ ಸಭಾಭವನದಲ್ಲಿ ಬಂಟ್ವಾಳ ಶಾಸಕರ ಗ್ರಾಮ ಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿದರು. ಗ್ರಾಮಸ್ಥರ ಸಮಸ್ಯೆಯನ್ನು ಪರಿಹರಿಸುವ ಉದ್ದೇಶದಿಂದ ಸರಕಾರವೇ ಜನರ ಬಳಿಗೆ ಬಂದಿದೆ. ಜಿಲ್ಲೆಗೆ ಮಳೆಹಾನಿಯನ್ನು ಪರಿಹರಿಸುವುದಕ್ಕಾಗಿ ೧೫ ಕೋಟಿ ರೂ. ಬರಲಿದೆ. ತುರ್ತು ಪರಿಹಾರ ನಿಧಿಯನ್ನು ಒದಗಿಸಲಾಗಿದೆ. ಮನೆ ಸಂಪೂರ್ಣ ನಾಶವಾದವರಿಗೆ ೫ ಲಕ್ಷ ರೂ., ಭಾಗಶಃ ನಾಶವಾದವರಿಗೆ ಒಂದು ಲಕ್ಷ ರೂ. ಅನುದಾನ ಒದಗಿಸಲಾಗುವುದು ಎಂದು ಅವರು ಹೇಳಿದರು.
ಪುರಂದರಮೂಲೆ-ದೇವಸ್ಯ-ತಾಳಿಪಡ್ಪು-ಪಟ್ಲ ರಸ್ತೆ ಕಾಂಕ್ರಿಟೀಕರಣಕ್ಕೆ ೫ ಲಕ್ಷ, ವಗೆನಾಡು-ಪಂಬತ್ತಜೆ-ಸೇರಾಜೆ ರಸ್ತೆಗೆ ೧೦ ಲಕ್ಷ, ಕರೋಪಾಡಿ ಅಂಗನವಾಡಿಗೆ ೨೫ ಸಾವಿರ, ಒಡಿಯೂರು, ಕುಡ್ಪಲ್ತಡ್ಕ, ಬೇಂಗದಪಡ್ಪುವಿನಲ್ಲಿ ಹೈಮಾಸ್ಟ್ ದೀಪಕ್ಕೆ ತಲಾ ೧.೨೫ ಲಕ್ಷ ರೂ., ಮಿತ್ತನಡ್ಕದಲ್ಲಿ ಚರಂಡಿ ರಚನೆಗೆ ೫ ಲಕ್ಷ ರೂ., ಅಲ್ಪಸಂಖ್ಯಾತ ಪ್ರಸ್ತಾವನೆಯ ಮೂಲಕ ವಗೆನಾಡು-ಪಂಬತ್ತಾಜೆ-ಸೇರಾಜೆ ರಸ್ತೆಗೆ ೧೫ ಲಕ್ಷ ರೂ. ಅನುದಾನ ಒದಗಿಸಲು ಪ್ರಯತ್ನಿಸಲಾಗುವುದು ಎಂದು ಅವರು ಭರವಸೆ ನೀಡಿದರು.
ಕರೋಪಾಡಿ ಗ್ರಾ.ಪಂ.ಅಧ್ಯಕ್ಷೆ ಬೇಬಿ ಆರ್.ಶೆಟ್ಟಿ, ತಾ.ಪಂ.ಕಾರ್ಯನಿವರ್ಹಣಾಧಿಕಾರಿ ರಾಜಣ್ಣ, ಗ್ರಾ.ಪಂ.ಸದಸ್ಯರಾದ ಅಶ್ವತ್ಥ್ ಶೆಟ್ಟಿ ಅನೆಯಾಲಮಂಟಮೆ, ಸುನಿಲ್ ಪದ್ಯಾಣ, ಪ್ರೇಮಾ ಜನಾರ್ದನ ಆಚಾರ್ಯ ಕುಡ್ಪಲ್ತಡ್ಕ, ದೇವಕಿ ಬೇತ, ಕುಸುಮಾವತಿ ಪದ್ಯಾಣ, ಪಿಡಿಒ ಸುಜಾತಾ, ಕರೋಪಾಡಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ವಿಘ್ನೇಶ್ವರ ಭಟ್ ಅನೆಯಾಲಕೋಡಿ, ಉಪಾಧ್ಯಕ್ಷ ರಘುನಾಥ ಶೆಟ್ಟಿ ಪಟ್ಲಗುತ್ತು, ವಿಟ್ಲ ಆರ್ಐ ದಿವಾಕರ್, ಪಶುಸಂಗೋಪನೆ ಇಲಾಖೆಯ ಜಾನುವಾರು ಅಬಕಾರಿ ಕಾಶಿಮಠ ಈಶ್ವರ ಭಟ್, ಬಂಟ್ವಾಳ ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷ ದೇವದಾಸ ಶೆಟ್ಟಿ, ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಅನೆಯಾಲಗುತ್ತು, ರಾಮಣ್ಣ ಶೆಟ್ಟಿ ಪಾಲಿಗೆ, ವಿನೋದ್ ಶೆಟ್ಟಿ ಪಟ್ಲ, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಬಾಲಕೃಷ್ಣ ಸೆರ್ಕಳ, ಪ್ರಧಾನ ಕಾರ್ಯದರ್ಶಿ ಹರೀಶ ಬೇಡಗುಡ್ಡೆ, ಶಾಸಕರ ಆಪ್ತಸಹಾಯಕ ದಿನೇಶ್, ಮುಗುಳಿ ತಿರುಮಲೇಶ್ವರ ಭಟ್, ರಮೇಶ್ ಶೆಟ್ಟಿ ಅನೆಯಾಲಗುತ್ತು ಮತ್ತಿತರರು ಉಪಸ್ಥಿತರಿದ್ದರು. ಜಗದೀಶ ಸ್ವಾಗತಿಸಿದರು.








