

ಬಂಟ್ವಾಳ: ಕಲ್ಲಡ್ಕ ಶಾರದಾ ಪೂಜಾ ಉತ್ಸವ ಸಮಿತಿಯ ಅಧ್ಯಕ್ಷರಾಗಿ ಚಿದಾನಂದ ಆಚಾರ್ಯ ಕಲ್ಲಡ್ಕ ಪುನರಾಯ್ಕೆಯಾಗಿದ್ದಾರೆ.
ಇತ್ತೀಚೆಗೆ ನಡೆದ 42ನೇ ವರ್ಷದ ಶ್ರೀ ಶಾರದಾ ಪೂಜಾ ಉತ್ಸವ ಸಮಿತಿಯ ಮಹಾಸಭೆಯಲ್ಲಿ ಈ ಆಯ್ಕೆ ನಡೆಸಲಾಗಿದ್ದು, ಉಪಾಧ್ಯಕ್ಷ ರಾಗಿ ಗೋಪಾಲ ಕಲ್ಲಡ್ಕ ಹಾಗೂ ಚಂದ್ರಾವತಿ ರಾಮನಗರ, ಪ್ರಧಾನಕಾರ್ಯದರ್ಶಿಯಾಗಿ ಸತೀಶ್ ರಾಮನಗರ ಆಯ್ಕೆಯಾದರು. ಜತೆಕಾರ್ಯದರ್ಶಿಯಾಗಿ ಶಶಿಕಿರಣ್ ರಾಮನಗರ, ರಾಜೇಶ್ ಕಲ್ಲಡ್ಕ ಮತ್ತು ಕೋಶಾಧಿಕಾರಿ ಯಾಗಿ ಗಣೇಶ್ ಶೆಟ್ಟಿ ಕುಕ್ಕಮಜಲು,ಜತೆ ಕೋಶಾಧಿಕಾರಿ ಯಾಗಿ ಯೋಗೀಶ್ ಕಲ್ಲಡ್ಕ, ಕ್ರೀಡಾಕಾರ್ಯದರ್ಶಿಯಾಗಿ ಮೋಹನ ಹನುಮಾನ್ ನಗರ, ರವಿ ರೈ ಕುಕ್ಕಮಜಲು, ವಿಕ್ರಂ ಪ್ರಭು ರಾಮನಗರ, ಸಂಘಟನಾ ಕಾರ್ಯದರ್ಶಿಯಾಗಿ ಶಿವರಾಮ ಕುಕ್ಕಮಜಲು ಹಾಗೂ ಶ್ರೀಮತಿ ವಿದ್ಯಾ ಗುಣಕರ ಕೊಟ್ಟಾರಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಯತೀಶ್ ಕೊಳಕೀರು, ಶಂಕರ ಕುಕ್ಕಮಜಲು, ವಿಜಯಕುಮಾರ್ ರಾಮನಗರ ಆಯ್ಕೆಯಾದರು.
ಶ್ರೀ ಶಾರದಾ ಸೇವಾ ಪ್ರತಿಷ್ಠಾನದ ಅಧ್ಯಕ್ಷರಾದ ನರಸಿಂಹ ಮಡಿವಾಳರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ವಜ್ರನಾಥ ಮಡ್ಲಮಜಲು ಸ್ವಾಗತಿಸಿದರು, ಯತೀನ್ ವಂದಿಸಿದರು.








