ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ವತಿಯಿಂದ ಪಿತಾಮಹ ಗಾಂಧೀಜಿಯವರ ೧೫೦ ನೇ ಜನ್ಮದಿನಾಚರಣೆಯ ಪ್ರಯುಕ್ತ ಮಂಗಳೂರುನಲ್ಲಿ ನಡೆಯುವ ಕಾಲ್ನಾಡಿಗೆ ಜಾಥಾದ ಪ್ರಯುಕ್ತ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಪೂರ್ವಭಾವಿ ಸಭೆಯು ಮಾಜಿ ಸಚಿವರಾದ ಶ್ರೀ.ಬಿ.ರಮಾನಾಥ ರೈ ಅವರ ನೇತ್ರತ್ವದಲ್ಲಿ ನಡೆಯಿತು. ಪಕ್ಷದ ಕಾರ್ಯಕರ್ತರು ಬಿಳಿ ಸಮವಸ್ತ್ರ ಧರಿಸಿ ಮದ್ಯಾಹ್ನ ೨ ಗಂಟೆಗೆ ಮಂಗಳೂರಿನ ಮಂಗಳ ಸ್ಟೇಡಿಯಂನಿಂದ ಹೊರಡುವ ಈ ಜಾಥವು ಮಂಗಳೂರು ಮಹಾನಗರ ಪಾಲಿಕೆ ಪಿ.ವಿ.ಎಸ್ ವೃತ್ತ, ಬಂಟ್ಸ್ ಹಾಸ್ಟೆಲ್, ಜ್ಯೋತಿ ವೃತ್ತದಿಂದ ಹಂಪನ್‌ಕಟ್ಟೆಯಾಗಿ ಪುರಭವನದ ಹೊರಾಂಗಣದಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ ಎಂದು ತಿಳಿಸಿದರು. ಜಿಲ್ಲಾ ಅಧ್ಯಕ್ಷರಾಧ ಹರೀಶ್ ಕುಮಾರ್ ಮುಖಂಡರಾದ ವೆಂಕಪ್ಪ ಗೌಡ ಸುಳ್ಯ, ಪೃಥ್ವಿರಾಜ್ ಗುರುಪುರ, ರಮಾನಾಥ ವಿಟ, ಜಿಲ್ಲಾ ಪಂಚಾಯತ್ ಸದ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಎಮ್.ಎಸ್ ಮಹಮ್ಮದ್, ಮಂಜುಳ ಮಾವೆ, ಜಿಲ್ಲಾ ಕಾಂಗ್ರೆಸ್ ಸದಸ್ಯರು, ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಅಬ್ಬಾಸ್ ಅಲಿ, ಪ್ರಚಾರ ಸಮಿತಿ ಅಧ್ಯಕ್ಷರಾದ ಸಂಜೀವ ಪೂಜಾರಿ, ಮಾಜಿ ಬೂಡಾ ಅಧ್ಯಕ್ಷರಾದ ಸದಾಶಿವ ಬಂಗೇರ, ಎ.ಪಿ.ಎಮ್.ಸಿ ಅಧ್ಯಕ್ಷರಾದ ಪದ್ಮನಾಭ ರೈ, ಇದಿನಬ್ಬ ಕಲ್ಲಡ್ಕ, ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಜಯಂತಿ ವಿ ಪೂಜಾರಿ, ಮಲ್ಲಿಕಾ ವಿ ಶೆಟ್ಟಿ ತಾಲೂಕು ಪಂಚಾಯತ್ ಸದಸ್ಯರು, ಪುರಸಭಾ ಸದಸ್ಯರು, ವಲಯ ಅಧ್ಯಕ್ಷರು ಬೂತ್ ಸಮಿತಿ ಅಧ್ಯಕ್ಷರು, ಮುಂಚೂಣಿ ಘಟಕದ ಅಧ್ಯಕ್ಷರುಗಳು, ಯುವ ಕಾಂಗ್ರೆಸ್ ಎನ್.ಎಸ್.ಯು.ಐ ಪಕ್ಷದ ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುದೀಪ್ ಕುಮಾರ್ ಶೆಟ್ಟಿ ಅವರು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಜಾಥವನ್ನು ಯಶಸ್ವಿಗೊಳಿಸುವಂತೆ ವಿನಂತಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here