ಮುಂಬಯಿ (ಮಂಗಳೂರು),ಸೆ.೨೫: ಭವಿಷ್ ಆರ್.ಕೆ ಕ್ರಿಯೇಶನ್ಸ್ ಲಾಂಛನದಲ್ಲಿ ತಯಾರಾದ ‘ಆಟಿಡೊಂಜಿ ದಿನ’ ತುಳು ಸಿನೆಮಾದ ಪೋಸ್ಟರ್ ಬಿಡುಗಡೆ ಸಮಾರಂಭ ನಗರದ ಮಲ್ಲಿಕಟ್ಟೆ ಲಯನ್ಸ್ ಸಭಾಂಗಣದಲ್ಲಿ ಶನಿವಾರ ನಡೆಯಿತು. ಸಿನಿಮಾ ಪೋಸ್ಟರನ್ನು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಜಗನ್ನಾಥ್ ಶೆಟ್ಟಿ ಬಾಳ ಬಿಡುಗಡೆ ಗೊಳಿಸಿ ಶುಭಾರೈಸಿದರು.

ಈ ಸಂದರ್ಭ ಚಿತ್ರದ ನಿರ್ಮಾಪಕ ರಾಧಾಕೃಷ್ಣ ನಾಗರಾಜು ಮಾತನಾಡಿ ಆಟಿಡೊಂಜಿ ದಿನ ಸಿನೆಮಾವನ್ನು ಆರಂಭದಲ್ಲಿ ಹ್ಯಾರಿಸ್ ಕೊಣಾಜೆಕಲ್ಲು ನಿರ್ದೇಶಿಸಿದ್ದರು. ಆದರೆ ಅವರು ಅಪಘಾತದಲ್ಲಿ ಮೃತಪಟ್ಟ ಕಾರಣ ಪ್ರಸ್ತುತ ಎ.ಎಸ್ ವೈಭವ್ ಪ್ರಶಾಂತ್ ನಿರ್ದೇಶನ ಜವಾಬ್ದಾರಿ ವಹಿಸಿಕೊಂಡು ಸಿನೆಮಾ ಚಿತ್ರೀಕರಣ ಪೂರ್ಣಗೊಂಡು ಸೆನ್ಸಾರ್‌ಗೆ ಕಳುಹಿಸಲಾಗಿದೆ ಎಂದರು.

ಗೌರವ ನಿರ್ದೇಶಕ ಎ.ಎಸ್ ವೈಭವ್ ಪ್ರಶಾಂತ್ ಮಾತನಾಡಿ, ಆಟಿಯಲ್ಲಿ ಒಂದು ದಿನ ನಡೆಯುವ ಕಥೆಯನ್ನು ಆಧರಿಸಿ ಈ ಸಿನೆಮಾ ತಯಾರಿಸಲಾಗಿದೆ. ಆ ಮೂಲಕ ಸಿನೆಮಾ ಮಾಡಬೇಕು ಎಂದು ಹ್ಯಾರಿಸ್ ಕೊಣಾಜೆಕಲ್ಲು ಅವರ ಕನಸನ್ನು ನನಸು ಮಾಡಲಾಗುತ್ತಿದೆ. ಪೃಥ್ವಿ ಅಂಬರ್ ನಾಯಕ ನಟನಾಗಿ, ನಿರೀಕ್ಷಾ ಶೆಟ್ಟಿ ನಾಯಕಿ ಆಗಿ ನಟಿಸಿದ್ದಾರೆ.ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ನವೀನ್ ಡಿ.ಪಡೀಲ್, ವಾಸು ಮಲ್ಪೆ, ಶ್ರದ್ಧಾ ಸಾಲಿಯಾನ್, ದೀಪಕ್ ರೈ ಪಾಣಾಜೆ, ಅನೀಲ್ ರಾಜ್, ವಿಶ್ವನಾಥ್ ಮೂಡಬಿದ್ರೆ, ಸೂರಜ್ ಸಾಲ್ಯಾನ್, ಸುರೇಂದ್ರ ಕುಮಾರ್ ಹೆಗ್ಡೆ, ಶೈಲಶ್ರೀ, ಅವರು ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ಒಂದು ಹಾಡನ್ನು ಖ್ಯಾತ ಯಕ್ಷಗಾನ ಭಾಗವತ ಪಟ್ನ ಸತೀಶ್ ಶೆಟ್ಟಿ ಹಾಡಿದ್ದಾರೆ. ಅಕ್ಟೋಬರ್‌ನಲ್ಲಿ ಚಿತ್ರ ಬಿಡುಗಡೆ ಗೊಳಿಸುವ ಯೋಚನೆಯಿದೆ ಎಂದರು.

ತಂತ್ರಜ್ಞರು: ಛಾಯಾಗ್ರಹಣ: ನರೇಂದ್ರ ಗೌಡ, ಕಥೆ ಚಿತ್ರಕಥೆ: ಹ್ಯಾರಿಸ್ ಕೊಣಜೆಕಲ್, ಆಕಾಶ್ ಹಾಸನ, ಸಹ ನಿರ್ದೇಶನ ಮತ್ತು ಕಾರ್ಯಕಾರಿ ನಿರ್ಮಾಪಕರು: ಆಕಾಶ್ ಹಾಸನ, ಸಂಕಲನ: ಶ್ರೀನಿವಾಸ್ ಪಿ ಬಾಬು ಮತ್ತು ಮೆವಿನ್ ಜೋಯಲ್ ಪಿಂಟೋ, ಸಾಹಿತ್ಯ ಸಂಗೀತ: ರಾಜೇಶ್ ಭಟ್ ಮೂಡಬಿದಿರೆ, ಹಿನ್ನಲೆ ಸಂಗೀತ: ಎಸ್.ಪಿ ಚಂದ್ರಕಾಂತ್, ನಿರ್ಮಾಣ ನಿರ್ವಹಣೆ: ಸತೀಶ್ ಬ್ರಹ್ಮಾವರ್, ಕಲಾ ನಿರ್ದೇಶನ: ಹರೀಶ್ ಆಚಾರ್ಯ, ವಸ್ತ್ರಲಂಕಾರ: ವಲ್ಲಿ ,ವರ್ಣಾಲಂಕಾರ: ಜಗದೀಶ್, ನಿರ್ದೇಶನ ಸಹಾಯ: ಕೆ. ಜಗದೀಶ್ ರೆಡ್ಡಿ, ಸಂದೀಪ್ ಬಾರಾಡಿ, ನವೀನ್ ನೆರೋಳ್ತಾಡಿ, ಸಹ ನಿರ್ದೇಶಕ ಮತ್ತು ಕಾರ್ಯಕಾರಿ ನಿರ್ಮಾಪಕ ಆಕಾಶ್ ಹಾಸನ್, ನಟ ಪೃಥ್ವಿ ಅಂಬರ್, ನಟಿ ನಿರೀಕ್ಷಾ ಶೆಟ್ಟಿ, ಸಂಗೀತ ಒದಗಿಸಿರುವ ರಾಜೇಶ್ ಭಟ್ ಮೂಡುಬಿದಿರೆ, ಹಿನ್ನೆಲೆ ಸಂಗೀತ ನೀಡಿರುವ ಎಸ್.ಪಿ ಚಂದ್ರಕಾಂತ್, ನವೀನ್ ನೆರೊಳ್ತಾಡಿ ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here