


ವಿಟ್ಲ:- ಮಹಾತ್ಮ ಗಾಂಧೀಜಿಯವರ ೧೫೦ ನೇ ವರ್ಷದ ಪ್ರಯುಕ್ತ ಅ.೨ ರಂದು ನಡೆಯಲಿರುವ ಕಾಲ್ನಡಿಗೆ ಜಾಥದ ಕುರಿತು ಪೂರ್ವಭಾವಿ ಸಭೆ ಸೋಮವಾರ ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು.
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ ದೇಶಕ್ಕೆ ಗಾಂಧೀಜಿ ಒಬ್ಬರೇ ರಾಷ್ಟ್ರಪಿತ. ಗಾಂಧೀಜಿಯವರ ಹೋರಾಟ ಹಾಗೂ ಆದರ್ಶಗಳು ಇಡೀ ವಿಶ್ವಕ್ಕೆ ಮಾದರಿಯಾಗಿದೆ ಇಂತಹ ಸಂದರ್ಭದಲ್ಲಿ ಇತಿಹಾಸ ತಿರುಚುವ ಪ್ರಯತ್ನ ನಡೆಯುತ್ತಿದೆ ಮತ್ತು ಗಾಂಧೀಜಿ ಅವರನ್ನು ಕೊಂದ ಗೋಡ್ಸೆ ಅವರನ್ನು ದೇಶಪ್ರೇಮಿಯೆಂಬಂತೆ ವೈಭವಿಕರಿಸುವುದರಲ್ಲಿ ಬಿಜೆಪಿ ತಲ್ಲಿನವಾಗಿದೆ ಎಂದರು. ಮುಂಬರುವ ಗಾಂಧಿ ನಡಿಗೆ ಕಾರ್ಯಕ್ರಮದ ಯಶಸ್ವಿಗೆ ಸರ್ವ ಕಾರ್ಯಕರ್ತರು ಕೈಜೋಡಿಸಬೇಕೆಂದರು.
ಕಾರ್ಯಕ್ರಮದಲ್ಲಿ ಜಿ.ಪಂ.ಸದಸ್ಯರಾದ ಎಂ.ಎಸ್ ಮಹಮ್ಮದ್ ಮಾತನಾಡಿ ಮಹಾತ್ಮ ಗಾಂಧೀಜಿಯವರು ದೇಶಕ್ಕೆ ನೀಡಿದ ತ್ಯಾಗ ಅಪಾರ ಅನನ್ಯವಾಗಿದೆ. ಗಾಂಧೀಜಿಯವರ ೧೫೦ ನೇ ಪ್ರಯುಕ್ತ ಜಿಲ್ಲಾ ಕಾಂಗ್ರೆಸ್ ವತಿಯಿಂದ ನಡೆಯುವ ಕಾರ್ಯಕ್ರಮ ಅತ್ಯಂತ ವೈಭವೀಕರಣದ ಅಭೂತ ಕಾರ್ಯಕ್ರಮವಾಗಬೇಕು ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಮಾಣಿ ಜಿ.ಪಂ.ಸದಸ್ಯರಾದ ಮಂಜುಳಾ ಮಾಧವ ಮಾವೆ, ಲತೀಫ್ ಕಂದಕ್ ಮೊದಲಾವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಪ್ರವೀಣ್ ಚಂದ್ರ ಆಳ್ವ , ಕಾಂಗ್ರೆಸ್ ವಕ್ತಾರ ರಮಾನಾಥ್ ವಿಟ್ಲ, ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ದಮಯಂತಿ, ಅಳಿಕೆ ಗ್ರಾ.ಪಂ.ಅಧ್ಯಕ್ಷರಾದ ಪದ್ಮನಾಭ ಪೂಜಾರಿ, ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷರಾದ ಇಕ್ಬಾಲ್ ಹೋನೆಸ್ಟ್, ಶ್ರೀಧರ ಶೆಟ್ಟಿ ಪುಣಚ, ಮಹೇಶ್ ಶೆಟ್ಟಿ ಪುಣಚ, ಎಲ್ಯಣ್ಣ ಪೂಜಾರಿ ಕುಂಡಡ್ಕ, ಲತಾವೇಣಿ, ವಿಕೆಎಂ ಅಶ್ರಫ್, ಶಮೀರ್ ಪಳಿಕೆ, ಹಸೈನಾರ್ ನೆಲ್ಲಿಗುಡ್ಡೆ, ಶಿವರಾಮ ಮಣಿಯಾಣಿ, ಶ್ರೀನಿವಾಸ ಶೆಟ್ಟಿ ಕೊಲ್ಯ, ಅಬ್ದುಲ್ ಕರೀಮ್ ಕುದ್ದುಪದವು, ಸಿರಾಜ್ ಮಣಿಲ, ಜಿ.ಎ ಶಂಸುದ್ದೀನ್ ಅಜ್ಜಿನಡ್ಕ, ರಶೀದ್ ಮಣಿಲ ಮೊದಲಾದವರು ಉಪಸ್ಥಿತರಿದ್ದರು
ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮುರಳೀಧರ ರೈ ಮಠಂತಬೆಟ್ಟು ಸ್ವಾಗತಿಸಿದರು. ವಿಟ್ಲ ಉಪ್ಪಿನಂಗಡಿ ಮಹಿಳಾ ಬ್ಲಾಕ್ ಸಮಿತಿಯ ಅಧ್ಯಕ್ಷರಾದ ಕವಿತಾ ರಮೇಶ್ ವಂದಿಸಿದರು.







