ಬಂಟ್ವಾಳ: ನಮ್ಮ ಬಂಟ್ವಾಳ ಡಾಟ್ ಕಾಮ್ ವೆಬ್ ನ್ಯೂಸ್ ಸಂಸ್ಥೆಯು ಗಣೇಶ ಚತುರ್ಥಿ ಯ ಅಂಗವಾಗಿ ಏರ್ಪಡಿಸಿದ್ದ “ನಮ್ಮ ಗಣಪ” ಎಂಬ ಶೀರ್ಷಿಕೆಯ ಗಣೇಶನ ಚಿತ್ರ ಬಿಡಿಸುವ ಸ್ಪರ್ಧಾ ಫಲಿತಾಂಶ ಪ್ರಕಟಗೊಂಡಿದೆ. ಮೂರು ವಿಭಾಗಗಳಲ್ಲಿ ನಡೆದ ಸ್ಪರ್ಧೆಯಲ್ಲಿ ಎಲ್.ಕೆ.ಜಿ.ಯಿಂದ 4ನೇ ವರೆಗಿನ ಮಕ್ಕಳ ವಿಭಾಗದಲ್ಲಿ ಹೋಳಿ ರೆಡೀಮರ್‍ ಇಂಗ್ಲೀಷ್ ಮೀಡಿಯಂ ಸ್ಕೂಲ್ ಬೆಳ್ತಂಗಡಿಯ 2ನೇ ತರಗತಿ ಯ ವಿದ್ಯಾರ್ಥಿನಿ ಸ್ಮೃತಿ ಮಂದಾರ ಪ್ರಥಮ ಹಾಗೂ ಬಂಟ್ವಾಳ ಎಸ್ ವಿ ಎಸ್ ಶಾಲೆಯ 3ನೇ ತರಗತಿ ಯ ವಿದ್ಯಾರ್ಥಿನಿ ಸ್ಪಂದನ ದ್ವಿತೀಯ ಹಾಗೂ ಸೆಕ್ರೆಡ್ ಹಾರ್ಟ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ಮಡಂತ್ಯಾರ್‍  4ನೇ ತರಗತಿ ಯ ವಿದ್ಯಾರ್ಥಿ ಜೀವಿತ್  ತೃತೀಯ ಬಹುಮಾನ ಗಳಿಸಿದ್ದಾರೆ.

 

 

5 ರಿಂದ 7 ನೇ ತರಗತಿ ವರೆಗಿನ ಮಕ್ಕಳ ವಿಭಾಗದಲ್ಲಿ ಚಿನ್ಮಯಿ ಪ್ರಥಮ:ಹೆಗ್ಗನಗುಳಿ ಮನೆ, ಕಕ್ಕೆಪದವು ಉಳಿ ನಿವಾಸಿ ಶ್ರವಣ್ ದ್ವಿತೀಯ: ಹಾಗೂ ವಿಕಾಸ್ ತೃತೀಯ ಸ್ಥಾನ ಪಡೆದಿದ್ದಾರೆ.

ಪ್ರೌಢಶಾಲಾ ಮಕ್ಕಳ ವಿಭಾಗದ ಗೌರಿಗಣೇಶ ನ ಚಿತ್ರ ಸ್ಪರ್ಧೆಯಲ್ಲಿ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕೊರಂಜ ಗೇರುಕಟ್ಟೆ 8ನೇ ತರಗತಿ ಯ ವಿದ್ಯಾರ್ಥಿ  ರಕ್ಷಿತ್ ಪ್ರಥಮ: ಹಾಗೂ ಇಂದ್ರಪ್ರಸ್ಥ ವಿದ್ಯಾಲಯ ಉಪ್ಪಿನಂಗಡಿಯ 8ನೇ ತರಗತಿಯ ವಿದ್ಯಾರ್ಥಿ ವಿನೀಶ್ ದ್ವಿತೀಯ:ಬಹುಮಾನ ಗಳಿಸಿದ್ದಾರೆ.
ಸ್ಪರ್ಧಾ ವಿಜೇತರಿಗೆ ಅಕ್ಟೋಬರ್‌ 2ರ ಬುಧವಾರ ಸಂಜೆ 4 ಕ್ಕೆ ಬಿ.ಸಿ.ರೋಡು ಗಾಣದಪಡ್ಪು ವಿನಲ್ಲಿರುವ ನಮ್ಮ ಬಂಟ್ವಾಳ ಕಛೇರಿಯಲ್ಲಿ ಬಹುಮಾನ ವಿತರಿಸಲಾಗುವುದು ಎಂದು ನಮ್ಮ ಬಂಟ್ವಾಳ ವೆಬ್ ನ್ಯೂಸ್ ಸಂಪಾದಕ ಪ್ರಶಾಂತ್ ಪೂಂಜಾಲಕಟ್ಟೆ ತಿಳಿಸಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here