ಬಂಟ್ವಾಳ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಬಂಟ್ವಾಳ, ಗ್ರಾಮ ಪಂಚಾಯತ್ ಬಾಳ್ತಿಲ,ಸ್ತ್ರೀ ಶಕ್ತಿ ಗೊಂಚಲು ಬಾಳ್ತಿಲ , ಬ್ಯಾಂಕ್ ಅಪ್ ಬರೋಡಾ ಇವರ ಜಂಟಿ ಆಶ್ರಯದಲ್ಲಿ ಸದಸ್ಯರ ಸಭೆ, ಮಾಹಿತಿ ಕಾರ್ಯಾಗಾರ, ಪೋಷಣ್ ಅಭಿಯಾನ ಮಾಸಾಚರಣೆ ಮತ್ತು ಕೃಷಿ ಮತ್ತು ಸ್ವಸಹಾಯ ಸಂಘಗಳ ಸಾಲಮೇಳ ಕಾರ್ಯಕ್ರಮ ಬಾಳ್ತಿಲ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ಬಾಳ್ತಿಲ ಗ್ರಾಮ‌ಪಂಚಾಯತ್ ಅಧ್ಯಕ್ಷ ವಿಠಲ ನಾಯ್ಕ ಅವರು ಕಾರ್ಯಕ್ರಮ ವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಅವರು
ಸ್ತ್ರೀ ಶಕ್ತಿ ಎಂಬುದು ಸಂಘಟನೆಗೆ ಮೀಸಲಾಗದೆ ದೇಶದ ಆರ್ಥಿಕ ಬಲವರ್ಧನೆಗೆ ಪೂರಕವಾಗಲಿ ಎಂದು ಅವರು ಹೇಳಿದರು.
ಶಿಕ್ಷಿತರಾಗಿ ಆರ್ಥಿಕ ವಾಗಿ ಸದೃಡವಾಗಲು ಸ್ತ್ರೀ ಶಕ್ತಿ ಸಂಘಟನೆಯ ಪಾತ್ರ ಹಿರಿದಾಗಿದೆ.
ಅಡುಗೆ ಕೊಣೆಯಿಂದ ಸ್ಚಚ್ಚತೆಯಿಂದ ದೇಶದ ಸ್ಚಚ್ಚತೆಯವರೆಗೆ ನಿಮ್ಮ ಸಹಭಾಗಿತ್ವ ಅವಲಂಭನೆ ಪ್ರಮುಖವಾಗಿರಲಿ ಎಂದು ಹೇಳಿದರು.

ಗ್ರಾ.ಪಂ.ಉಪಾಧ್ಯಕ್ಷೆ ಪೂರ್ಣಿಮಾ ಮಾತನಾಡಿ ಸ್ತ್ರೀ ಶಕ್ತಿ ಯ ಮೂಲಕ ಕುಟುಂಬವನ್ನು ಭದ್ರಪಡಿಸೋಣ, ಸ್ತ್ರೀ ಶಕ್ತಿ ಗೊಂಚಲು ಮೂಲಕ ಪಡೆದ ಸಾಲವನ್ನು ಸದುಪಯೋಗ ಪಡಿಸಿಕೊಳ್ಳಲು ತಿಳಿಸಿದರು.
ಗುಂಪಿನ ಮೂಲಕ ಮಾಹಿತಿ ಪಡೆದು ಸಂಘಟಿತರಾಗೋಣ ಎಂದು ಅವರು ಹೇಳಿದರು.

ಕೃಷಿ ಮತ್ತು ಸ್ವಸಹಾಯ ಸಂಘಗಳ ಸಾಲಮೇಳದ ಬಗ್ಗೆ ಬ್ಯಾಂಕ್ ಅಪ್ ಬರೋಡ ಬ್ಯಾಂಕ್ ಡೆಪ್ಯುಟಿ ರೀಜನಲ್ ಮ್ಯಾನೇಜರ್ ಚಿದಾನಂದ ಹೆಗ್ಡೆ ಮಾಹಿತಿಯನ್ನು ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿ.ಡಿ.ಪಿ.ಒ.ಗಾಯತ್ರಿ ಕಂಬಳಿ ಮಾತನಾಡಿ ಜನರಿಗೆ ಸಂದರ್ಭೋಚಿತವಾಗಿ
ಜಾಗೃತಿ ಮೂಡಿಸುವ ಕೆಲಸ ಸ್ತ್ರೀ ಶಕ್ತಿ ಗೊಂಚಲುಗಳ ಮೂಲಕ ನಡೆಯುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಅವರು ಹೇಳಿದರು.
ಸ್ತ್ರೀ ಶಕ್ತಿಯನ್ನು ಬೆಳೆಸುವುದು ಮತ್ತು ಉಳಿಸುವುದು ಸದಸ್ಯರಲ್ಲಿದೆ ಎಂದು ಅವರು ಹೇಳಿದರು.
ವೇದಿಕೆಯಲ್ಲಿ
ಸದಸ್ಯ ರಾದ ವೆಂಕಟರಾಯ ಪ್ರಭು, ಸುಂದರ ಸಾಲಿಯಾನ್, ವೀಣಾ, ರಜನಿ, ರೇಣುಕಾ, ಗುಲಾಬಿ,
ಬ್ಲಾಕ್ ಸೊಸೈಟಿ ಅಧ್ಯಕ್ಷೆ ಗೀತಾ ಜಯತೀರ್ಥ,ಕಾರ್ಯದರ್ಶಿ ಪ್ರಮೀಳಾ, ಅರೋಗ್ಯ ಇಲಾಖಾ ಸಿಬ್ಬಂದಿ ಉಷಾ, ಕಲ್ಲಡ್ಕ ಬರೋಡ ಬ್ಯಾಂಕ್ ಪ್ರಬಂಧಕ ಪ್ರಣಾಮ್ ಭಂಡಾರಿ, ಕಲ್ಲಡ್ಕ ಲಕ್ಷೀ ಗಣೇಶ್ ಮಾಲಕಿ ಪದ್ಮವಾತಿ ಹೊಳ್ಳ, ಬಾಳ್ತಿಲ ವಲಯ ಮೇಲ್ವಿಚಾರಕಿ ಶಾಲಿನಿ, ಬಾಳ್ತಿಲ ಗ್ರಾ.ಪಂ.ಪಿ.ಡಿ.ಒ ಸಂದ್ಯಾ, ಮಹಿಳಾ ಮಂಡಳಿಯ ಅಧ್ಯಕ್ಷೆ ಕವಿತಾ ಅಡ್ಯಂತಾಯ ಶ್ರೀ ನಿಧಿ ಗೊಂಚಲಿನ ಅಧ್ಯಕ್ಷೆ ವೀಣಾ , ಗೌರವಾಧ್ಯಕ್ಷೆ ಪದ್ಮಿನಿ, ಕಾರ್ಯದರ್ಶಿ ಮಲ್ಲಿಕಾ, ಕೋಶಾಧಿಕಾರಿ ಶಾಲಿನಿ, ಜತೆ ಕಾರ್ಯದರ್ಶಿ ನೀತಾ, ದುರ್ಗಾಪರಮೇಶ್ವರಿ ಗೊಂಚಲಿನ ಅಧ್ಯಕ್ಷೆ ಭಾರತಿ, ಗೌರವಾಧ್ಯಕ್ಷೆ ಯಶೋಧ, ಕಾರ್ಯದರ್ಶಿ ರಕ್ಷಿತಾ, ಕೋಶಾಧಿಕಾರಿ ಸುಮಿತ್ರಾ, ಜೊತೆಕಾರ್ಯದರ್ಶಿ ಗೀತಾ,

ಹಾಗೂ ಅಂಗನವಾಡಿ ಕಾರ್ಯಕರ್ತರು, ಆಶಾಕಾರ್ಯಕರ್ತೆಯರು , ಪಂಚಾಯತ್ ಸಿಬ್ಬಂದಿ ಗಳು ಉಪಸ್ಥಿತರಿದ್ದರು.
ಉತ್ತಮ ಚಟುವಟಿಕೆ ಯ ಮೂಲಕ ಸಾಧನೆ ಮಾಡಿದ ವಿವಿಧ ಸ್ತ್ರೀ ಶಕ್ತಿಗಳ ಆಯ್ಕೆ ನಡೆಸಿ ಅಂತಹ ಗುಂಪುಗಳನ್ನು ಗೌರವಿಸಲಾಯಿತು.
ಸ್ವಚ್ಚತೆ ಹಾಗೂ ಬಾಲ್ಯವಿವಾಹ ತಡೆಯ ಪ್ರಾತ್ಯಕ್ಷಿಕೆ ನಡೆಯಿತು.

ಅಂಗನವಾಡಿ ಕಾರ್ಯಕರ್ತೆ ಲಲಿತಾ ಸ್ವಾಗತಿಸಿದರು.ಕಾರ್ಯಕರ್ತೆ ಸುರೇಖಾ ವಂದಿಸಿದರು.

ಮೇಲ್ವಿಚಾರಕಿ ಶಾಲಿನಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here