ಬೋಳಂತೂರು: ಇಲ್ಲಿನ ತುಳಸೀವನ ಶ್ರೀವಿನಾಯಕ ಮಿತ್ರ ಮಂಡಳಿಯ ನೂತನ ಅಧ್ಯಕ್ಷರಾಗಿ ಉಮೇಶ್ ಕೊಕ್ಕಪುಣಿ, ಕಾರ್ಯಾದರ್ಶಿಯಾಗಿ ರಾಜೇಂದ್ರ ಕೊಕ್ಕಪುಣಿ ಹಾಗೂ ಖಜಾಂಜಿಯಾಗಿ ಶ್ರೀನಿವಾಸ್ ನೆಕ್ಕರಾಜೆ ಆಯ್ಕೆಯಾಗಿದ್ದಾರೆ. ನಿಕಟ ಪೂರ್ವ ಅಧ್ಯಕ್ಷರು ವೆಂಕಟರಮಣ ನೆಕ್ಕರಾಜೆ ಇವರಿಂದ ಹಸ್ತಾಂತರಿಸಲಾಯಿತು.
ಪುಂಜಾಲಕಟ್ಟೆ: ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಽಕಾರಿಗಳ ಕಛೇರಿ ಬೆಳ್ತಂಗಡಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಬೆಳ್ತಂಗಡಿ ಮತ್ತು ಕರ್ನಾಟಕ ಪಬ್ಲಿಕ್ ಸ್ಕೂಲ್ ಪುಂಜಾಲಕಟ್ಟೆ ಇವರ ಸಂಯುಕ್ತ ಆಶ್ರಯದಲ್ಲಿ ಬೆಳ್ತಂಗಡಿ ತಾಲೂಕು ಮಟ್ಟದ ಪ್ರತಿಭಾ...