


ಬಿ.ಸಿ.ರೋಡು: ಕುಮಾರಿ ವೈಷ್ಣವಿ ಜಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸಿದ 2019ನೇ ಸಾಲಿನ ಕರ್ನಾಟಕ ಶಾಸ್ತ್ರೀಯ ಸಂಗೀತ ವಿಭಾಗದ ಜೂನಿಯರ್ ಗ್ರೇಡ್ ಪರೀಕ್ಷೆಯಲ್ಲಿ 87.25% ಶೇ ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಇವರು ಬಿ.ಸಿ.ರೋಡಿನ ನಿವಾಸಿಗಳಾದ ಗಂಗಾಧರ್ ಮತ್ತು ಮಲ್ಲಿಕಾ ಇವರ ಸುಪುತ್ರಿ. ವಿಧೂಷಿ ಸುಚಿತ್ರಾ ಹೊಳ್ಳಾ ಅವರ ಶಿಷ್ಯೆ. ಈಕೆ ಬಂಟ್ವಾಳ ಎಸ್.ವಿ.ಎಸ್ ದೇವಳ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.






