Tuesday, October 17, 2023

ಮೋಟರ್ ಕಾಯ್ದೆ ಉಲ್ಲಂಘನೆಗೆ ದಂಡದ ಮೊತ್ತವನ್ನು ಇಳಿಕೆ

Must read

ಬೆಂಗಳೂರು, ಸೆ.11: ಕೇಂದ್ರ ಸರಕಾರದ ನೂತನ ಮೋಟರ್ ಕಾಯ್ದೆ ಉಲ್ಲಂಘನೆಗೆ ಸಂಬಂಧಿಸಿದಂತೆ ಭಾರಿ ಪ್ರಮಾಣದ ದಂಡ ವಿಧಿಸುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದ್ದ ಹಿನ್ನೆಲೆ, ದಂಡದ ಮೊತ್ತವನ್ನು ಇಳಿಸಿ ರಾಜ್ಯ ಸರ್ಕಾರವು ಗೆಜೆಟ್ ನೋಟಿಫಿಕೇಶನ್ ಹೊರಡಿಸಿದೆ.

ಕೇಂದ್ರ ಸರ್ಕಾರದ ಈ ಹೊಸ ವಾಹನ ಕಾಯ್ದೆ ಸವಾರರಿಗೆ ಹೊರೆಯಾದ ಹಿನ್ನಲೆಯಲ್ಲಿ ದಂಡ ಮೊತ್ತ ಕಡಿಮೆ ಮಾಡಲು ಕರ್ನಾಟಕ ಸರ್ಕಾರವು ನಿರ್ಧರಿಸಿತ್ತು. ಈ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ, ದಂಡದ ಮೊತ್ತವನ್ನು ಇಳಿಸುವ ಕೂಡಲೇ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದ್ದರು. ಅದರಂತೆ ಇಂದು ಸಂಚಾರ ನಿಯಮ ಉಲ್ಲಂಘನೆಯ ದಂಡದ ಮೊತ್ತವನ್ನು ಇಳಿಸಿ ರಾಜ್ಯ ಸರ್ಕಾರವು ಆದೇಶಿಸಿದೆ.

ಹೊಸದಾಗಿ ಬಂದಿದ್ದ ಮೋಟಾರು ವಾಹನ ಕಾಯ್ದೆಯು ದೇಶದೆಲ್ಲೆಡೆ ಭಾರೀ ಸಂಚಲನ ಮೂಡಿಸಿದ್ದಲ್ಲದೇ, ವಾಹನ ಸವಾರರಿಗೆ ತಲೆನೋವಾಗಿ ಪರಿಣಮಿಸಿತ್ತು. ದುಬಾರಿ ದಂಡ ತೆರಬೇಕಾದ ಹಿನ್ನೆಲೆ ವಾಹನ ಸವಾರದಿಂದ ಭಾರೀ ಆಕ್ರೋಶ ವ್ಯಕ್ತವಾಗಿತ್ತು.

ಪರಿಷ್ಕೃತ ದಂಡದ ಮೊತ್ತದ ವಿವರ ಇಲ್ಲಿದೆ.

ಕೇಂದ್ರ ಸರ್ಕಾರ ಮೋಟಾರು ವಾಹನಗಳ ಕಾಯ್ದೆ ಅನ್ವಯ ಸಂಚಾರ ನಿಯಮ ಉಲ್ಲಂಘನೆಗೆ ವಿಧಿಸುತ್ತಿದ್ದ ದಂಡವನ್ನು ಹೆಚ್ಚಿಸಿ ದೇಶ ವ್ಯಾಪಿ ಸೆ.1ರಿಂದ ಜಾರಿಗೆ ತಂದಿತ್ತು. ರಾಜ್ಯದಲ್ಲಿ ಸರ್ಕಾರಿ ರಜೆ ಇದ್ದ ಕಾರಣ ಸಾರಿಗೆ ಇಲಾಖೆ ಸೆ.3 ರಂದು ಅಧಿಸೂಚನೆ ಹೊರಡಿಸಿತ್ತು.

ಇದೀಗ ಸಂಚಾರಿ ನಿಯಮ ಉಲ್ಲಂಘನೆಯ ದಂಡದ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಗುಜರಾತ್‌ ಮಾದರಿಯಲ್ಲಿ ದಂಡ ಶುಲ್ಕವನ್ನು ಇಳಿಕೆ ಮಾಡಲಾಗಿದೆ. ಯಾವುದಕ್ಕೆ ಎಷ್ಟು ಎನ್ನುವ ಪರಿಷ್ಕೃತ ದಂಡದ ವಿವರ ಈ ಕೆಳಗಿನಂತಿದೆ.

ಹಳೆ ದಂಡ ಮತ್ತು ಹೊಸ ದಂಡದ ವಿವರ
ಹೆಲ್ಮೆಟ್ ಹಾಕದಿದ್ದರೆ 1000ದಿಂದ 500 ರೂ.ಗೆ ಇಳಿಕೆ.
ಸೀಟ್ ಬೆಲ್ಟ್ 1000ದಿಂದ 500ರೂ.ಗೆ ಇಳಿಕೆ.
ಲೈಸೆನ್ಸ್ ಇಲ್ಲದಿದ್ದರೆ 5000ದಿಂದ 1000ರೂ.ಗೆ ಇಳಿಕೆ
ಮೊಬೈಲ್ ಬಳಕೆ 10000ದಿಂದ 500ರೂ.ಗೆ ಇಳಿಕೆ
ಡ್ರೀಂಕ್ & ಡ್ರೈವ್  10000 ಇದನ್ನು ಇಳಿಕೆ ಮಾಡಿಲ್ಲ.
ಅಂಬ್ಯುಲೆನ್ಸ್ ದಾರಿ ಬಿಡದಿದ್ದರೆ  10000ದಿಂದ 1000ರೂ.ಗೆ ಇಳಿಕೆ
ಅತಿವೇಗ 5000 ರೂ. ದಂಡ ಇಳಿಕೆ ಇಲ್ಲ

More articles

Latest article