

ಬಂಟ್ವಾಳ: ಯಕ್ಷಗಾನ ಪ್ರಸಿದ್ಧ ಹಿಮ್ಮೇಳ ವಾದಕ ಕಡಬ ದಿ| ನಾರಾಯಣ ಆಚಾರ್ಯ ಅವರ ಮಗ ಪ್ರಸ್ತುತ ವಾಮದಪದವು ನಿವಾಸಿ ವಿನಯ್ ಅವರ ಚಿಕಿತ್ಸೆ ಗೆ ನೆರವು ಬೇಕಾಗಿದೆ.
ಯಕ್ಷಗಾನದ ಮದ್ದಲೆ ವಾದಕರಾದ ಕಡಬ ವಿನಯ ಆಚಾರ್ಯ, ಕಳೆದ ಕೆಲವು ತಿಂಗಳುಗಳಿಂದ ಅನಾರೋಗ್ಯದಿಂದಿದ್ದಾನೆ. ಹಲವಾರು ಆಸ್ಪತ್ರೆಗಳಿಗೆ ದಾಖಲಾಗಿ , ಇದೀಗ ಗಂಭೀರ ಸ್ಥಿತಿಯಲ್ಲಿರುವ ಕಾರಣ ಮಂಗಳೂರಿನ ಎ.ಜೆ .ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ICU) ದಾಖಲಾಗಿರುತ್ತಾನೆ . ಚಿಕಿತ್ಸೆಗಾಗಿ ಈಗಾಗಲೇ ಕುಟುಂಬದವರು ಲಕ್ಷಾಂತರ ಹಣವನ್ನು ವ್ಯಯಿಸಿದ್ದಾರೆ.
ಯಕ್ಷಧ್ರುವ ಪ್ರತಿಷ್ಠಾನ ( ರಿ ) ಮಂಗಳೂರು ಇವರು ಈಗಾಗಲೇ ರೂ 25,000.00 ದ ನೆರವು ನೀಡಿ ಸಹಕರಿಸಿದ್ದಾರೆ .
ಆಸ್ಪತ್ರೆಯ ಬಿಲ್ ಈಗಾಗಲೇ ದೊಡ್ಡ ಮೊತ್ತಕ್ಕೆ ಬಂದು ಮುಟ್ಟಿದೆ.
ಆದರೂ , ಬಿಲ್ ಪಾವತಿಸಲು ಅವರ ಕುಟುಂಬದಲ್ಲಿ ಯಾವುದೇ ಸಂಪನ್ಮೂಲಗಳಿಲ್ಲ . ಈಗಲೂ ಗಂಭೀರ ಸ್ಥಿತಿಯಲ್ಲಿರುವ ಯಕ್ಷಗಾನ ಕಲಾವಿದ ವಿನಯ ಅವರ ಚಿಕಿತ್ಸೆಗಾಗಿ ತುಂಬಾ ಹಣದ ಅಗತ್ಯವಿದೆ. ಈ ಕುಟುಂಬ ಇಷ್ಟರ ತನಕ ಯಾರಲ್ಲೂ ನೆರವು ಕೇಳಿರಲಿಲ್ಲ . ಆದರೆ , ಈಗಿನ ಸ್ಥಿತಿಯು ಕೈ ಮೀರಿ ಹೋಗಿದೆ.
ಯಕ್ಷಗಾನ ಪ್ರೇಮಿಗಳು ಹಾಗೂ ಸಹೃದಯ ಬಂಧುಗಳು ಚಿಕಿತ್ಸೆಗೆ ನೆರವಾಗಬೇಕಾಗಿ ಕಳಕಳಿಯಿಂದ ವಿನಂತಿಯನ್ನು ಮಾಡಿದ್ದಾರೆ. ಸಣ್ಣ ಪ್ರಾಯದ ನನ್ನ ತಮ್ಮ ಕಡಬ ವಿನಯ ಆಚಾರ್ಯ ಮರಳಿ ಯಕ್ಷರಂಗದಲ್ಲಿ ದುಡಿಯುವಂತಾಗಬೇಕಾದರೆ , ದಾನಿಗಳು ನೆರವಾಗಬೇಕು ಎಂದು ವಿನಯ ಆಚಾರ್ಯ ಅವರ ಅಣ್ಣ ಕಡಬ ವಿಶ್ವನಾಥ ಆಚಾರ್ಯ ವಿನಂತಿಕೊಂಡಿಸಿದ್ದಾರೆ.
ನನ್ನ ಬ್ಯಾಂಕ್ ವಿವರ ಈ ಕೆಳಗಿನಂತಿದೆ:
Vishwanath Acharya ,
Canara Bank ,
Vamadapadau ,
IFSC: CNRB0001549
A/c no – 1549101058461
MOB NO: +918310760447








