ಬಂಟ್ವಾಳ: ಪ್ರತಿಯೊಬ್ಬರು ಸ್ವಾರ್ಥವನ್ನು ಬಿಟ್ಟು ಗ್ರಾಮದ ಸಮುದಾಯವೇ ಮಳೆ ನೀರನ್ನು ಭೂಮಿಗೆ ಇಂಗಿಸುವ ಪುಣ್ಯ ಕಾರ್ಯದಲ್ಲಿ ಕೈ ಜೋಡಿಸಿ ಜಲ ಕ್ರಾಂತಿಗೆ ನಾಂದಿ ಹಾಡಲು ಮುಂದಾಗಬೇಕು ಎಂದು ಪ್ರಗತಿಪರ ಕೃಷಿಕರಾದ  ಚಂದಪ್ಪ ಮೂಲ್ಯ ಕೊಲ ಕರೆ ನೀಡಿದರು. ಅವರು ಕರ್ಪೆ ಸಮಾಜ ಮಂದಿರದಲ್ಲಿ ನಡೆದ ನೀರಿಂಗಿಸೋಣ ಬನ್ನಿ ಜನ ಜಾಗೃತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತಿದ್ದರು.


ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕರ್ಪೆ ಘಟಕ, ಫಲ್ಗುಣಿ ತೆಂಗು ಉತ್ಪಾದಕರ ಸೊಸೈಟಿ (ರಿ) ಕರ್ಪೆ, ದಿಶಾ ಟ್ರಸ್ಟ್ (ರಿ) ಕೈಕಂಬ , ಕುಂಭಕಂಠಿಣಿ ಕೃಷಿಕರ ಅಭಿವೃದ್ಧಿ ಸಂಘ ಕರ್ಪೆ, ಪೇರಳಬೆಟ್ಟು ಫ್ರೆಂಡ್ಸ್ ಕರ್ಪೆ ಇವರ ಜಂಟಿ ಆಶ್ರಯದಲ್ಲಿ ನಡೆದ ಜನಜಾಗೃತಿ ಕಾರ್ಯಕ್ರಮವನ್ನು ಕಿನ್ನಾಜೆ ಕರ್ಪೆ ಪ್ರಗತಿಪರ ಕೃಷಿಕರಾದ ವಸಂತ್ ಭಟ್ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಅಂರ್ತಜಲ ವೃದ್ಧಿಗಾಗಿ ಭೂಮಿಗೆ ನೀರಿಂಗಿಸುವ ಕೆಲಸ ದೇವರ ಪೂಜೆಗಿಂತ ಶ್ರೇಷ್ಟವಾದ ಕಾರ್ಯ ಎಂದರು.
ಫಲ್ಗುಣಿ ತೆಂಗು ಉತ್ಪಾದಕರ ಸೊಸೈಟಿಯ ಅಧ್ಯಕ್ಷರಾದ ಪ್ರಭಾಕರ ಪ್ರಭು ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿದ್ದರು. ದಿಶಾ ಸಂಸ್ಥೆಯ ಸಂಯೋಜಕರಾದ  ಹೆನ್ರಿ ವಾಲ್ಡರ್ ಮಣ್ಣು ನೀರು ಸಂರಕ್ಷಣೆಯ ವಿವಿಧ ಕ್ರಮಗಳ ಕುರಿತು ಮಾಹಿತಿ ನೀಡಿದರು.
ದಿಶಾ ಸಂಸ್ಥೆಯ ನಿರ್ದೇಶಕರಾದ ಸಿಲ್ವೆಸ್ಟರ್ ಡಿ ಸೋಜ ಸಂಗಬೆಟ್ಟು ಗ್ರಾಮ ಪಂಚಾಯತ್ ಸದಸ್ಯರಾದ  ದೇವಪ್ಪ ಕರ್ಕೇರ, ಶೇಖರ್ ನಾಯ್ಕ್ , ರೈತ ಸಂಘ ಕರ್ಪೆ ಘಟಕದ ಅಧ್ಯಕ್ರಾದ  ಹರ್ಪಿತ್ ಮಾದಾಯಿ, ಕುಂಭಕಂಠಿಣಿ ಕೃಷಿಕರ ಸಂಘದ ಅಧ್ಯಕ್ಷರಾದ ವೆಂಕಟೇಶ್ ನಾಯಕ್ , ದಿಶಾ ಸಂಸ್ಥೆಯ ಕ್ಷೇತ್ರ ಸಂಯೋಜಕ ರುದೇಶ್, ಕ್ಷೇತ್ರ ಮೇಲ್ವಿಚಾರಕರಾದ ರಂಜಿನಿ, ಕುಮಾರಿ ಮೋಹಿನಿ ಉಪಸ್ಥಿತರಿದ್ದರು.
ಕುಂಭಕಂಠಿಣಿ ಕೃಷಿಕರ ಸಂಘದ ಉಪಾಧ್ಯಕ್ಷರಾದ  ರಾಮಕೃಷ್ಣ ನಾಯಕ್ ಕಿನ್ನಾಜೆ ಕಾರ್ಯಕ್ರಮ ನಿರೂಪಿಸಿ ಫಲ್ಗುಣಿ ತೆಂಗು ಉತ್ಪಾದಕರ ಸೊಸೈಟಿಯ ಕಾರ್ಯದರ್ಶಿ ಗುಣಪಾಲ ಶೆಟ್ಟಿ ಪ್ರಾಸ್ತವಿಕವಾಗಿ ಮಾತನಾಡಿದರು. ರೈತ ಸಂಘದ ಉಪಾಧ್ಯಕ್ಷರಾದ ರಮೇಶ್ ಶೆಣೈ ಸ್ವಾಗತಿಸಿದರು. ಕುಂಭಕಂಠಿಣಿ ಕೃಷಿಕರ ಸಂಘದ ಸದಸ್ಯರಾದ ಶೋಭ ವಂದಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here