ಬಂಟ್ವಾಳ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನದ ಸೇವ ಸಪ್ತಾಹದ ಅಂಗವಾಗಿ ಎ‌.ಜೆ ಆಸ್ಪತ್ರೆಯ ಸಹಯೋಗದೊಂದಿಗೆ ರಕ್ತದಾನ ಶಿಬಿರ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಅಭಿನಂದನಾ ಕಾರ್ಯಕ್ರಮ ಬಿ.ಸಿ.ರೋಡಿನ ರಂಗೋಲಿ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು.
ಸನ್ಮಾನ ಸ್ವೀಕರಿಸಿ ‌ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲು ಅವರು ಮುಂದಿನ ಚುನಾವಣೆಯಲ್ಲಿ ಬಿಜೆಪಿ 150ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸಲಿದೆ. ಇದಕ್ಕೆ ಪೂರ್ವಸಿದ್ದತೆಗಳು ಬಂಟ್ವಾಳದಿಂದಲೇ ಕಾರ್ಯಪ್ರಾರಂಭವಾಗಲಿ ಎಂದರು.

63 ಪಕ್ಷಗಳು ಜಾತಿ‌ ಅಥವಾ ವಂಶಾಧಾರಿತವಾದ ಪಕ್ಷಗಳಾಗಿವೆ. ಆದರೆ, ಸಂಘಟನಾ ಪಕ್ಷವೊಂದಿದ್ದರೆ ಅದು ಬಜೆಪಿ‌ ಮಾತ್ರ.
ಸರಕಾರ ಯಾವ ಪಕ್ಷದವರು ನಡೆಸಬಹುದು ಆದರೆ ಜಗದ್ಗುರು ಭಾರತ ಅದು ಬಿಜೆಪಿ ಪಕ್ಷದಿಂದ ಮಾತ್ರ ಸಾಧ್ಯ ಎಂದರು.
೬೦ ವರ್ಷಗಳ ಬಳಿಕ ಕಾಶ್ಮೀರಕ್ಕೆ ಸ್ವಾತಂತ್ರ್ಯ ನೀಡಲಾಯಿತು. ಸಮಾನ ನಾಗರಿಕ ಸಂಹಿತೆ ಮೋದಿಯಿಂದ ಮಾತ್ರ ಸಾಧ್ಯ ಎಂದರು.

ಶಾಸಕ ರಾಜೇಶ್ ನಾಯ್ಕ್, ಪುತ್ತೂರು ಶಾಸಕ ಸಂಜೀವ ಮಠಂದೂರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ಬಿಜೆಪಿ ಬಂಟ್ವಾಳ ಕ್ಷೇತ್ರಾಧ್ಯಕ್ಷ ದೇವದಾಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ರುಕ್ಮಯ ಪೂಜಾರಿ, ಬಿಜೆಪಿ ಜಿಲ್ಲಾ ವಕ್ತಾರ ಹರಿಕೃಷ್ಣ ಬಂಟ್ವಾಳ, ಜಿ.ಆನಂದ, ಉದಯಕುಮಾರ್ ಶೆಟ್ಟಿ, ಸುಲೋಚನಾ ಭಟ್, ಗೋಪಾಲಕೃಷ್ಣ ಹೇರಳೆ, ಜಿಪಂ ಸದಸ್ಯ ತುಂಗಪ್ಪ ಬಂಗೇರ, ಪದ್ಮನಾಭ ಕೊಟ್ಟಾರಿ,ಕಿಶೋರ್ ರೈ, ಬೃಜೇಶ್ ಚೌಟ, ಎಜೆ ಆಸ್ಪತ್ರೆಯ ಡಾ. ಅರವಿಂದ್ ಹಾಜರಿದ್ದರು.
ಕ್ಷೇತ್ರ ಪ್ರಧಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ ಸ್ವಾಗತಿಸಿದರು. ಕ್ಷೇತ್ರದ ಉಪಾಧ್ಯಕ್ಷ ದೇವಪ್ಪ ಪೂಜಾರಿ ವಂದಿಸಿದರು.
ಮೋನಪ್ಪ ದೇವಸ್ಯ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here