

ಬಂಟ್ವಾಳ: ಬಾಂಬಿಲ ಮುಬಾರಕ್ ಜುಮ್ಮಾ ಮಸೀದಿ, ದಾರುಸ್ಸಲಾಂ ಮದ್ರಸ ಮಧ್ವ, ಇಝತುಲ್ ಇಸ್ಲಾಂ ಮದ್ರಸ ಕೈಲಾರ್ ವತಿಯಿಂದ ಬಾಂಬಿಲ ಜುಮ್ಮಾ ಜಮಾಅತ್ ವ್ಯಾಪ್ತಿಯ ಆರ್ಥಿಕ ಹಿಂದುಳಿದ ಹೆಣ್ಮಕ್ಕಳ ಸಾಮೂಹಿಕ ವಿವಾಹ ಜ.12ರಂದು ನಡೆಯಲಿದೆ. ಸಾಮೂಹಿಕ ವಿವಾಹದಲ್ಲಿ ಮದುವೆಯಾಗಲು ಇಚ್ಚಿಸುವ ಜಮಾಅತ್ ವ್ಯಾಪ್ತಿಯ ಅರ್ಹ ಹೆಣ್ಮಕ್ಕಳ ಪೋಷಕರು ಮಸೀದಿ ಆಡಳಿತ ಸಮಿತಿಗೆ ಅರ್ಜಿ ನೀಡಿ ಹೆಸರು ನೋಂದಾಯಿಸಬೇಕಾಗಿ ಮಸೀದಿ ಪ್ರಕಟಣೆ ತಿಳಿಸಿದೆ.







