

ಬಂಟ್ವಾಳ: ನೆತ್ತರಕೆರೆ ಒಕ್ಕೂಟದ ವಾರ್ಷಿಕೋತ್ಸವ ಹಾಗೂ ವಾರ್ಷಿಕ ಮಹಾಸಭೆ ನಡೆಯಿತು. ಸಮೃಧ್ಧಿ ದೀನ ಬಂಧು ಒಕ್ಕೂಟದ ಅಧ್ಯಕ್ಷ ರಾದ ದಾಮೋದರ ನೆತ್ತರಕೆರೆ ಇವರ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಪುತ್ತೂರು ಜಿಲ್ಲಾ ಗ್ರಾಮ ವಿಕಾಸ ಪ್ರಮುಖ್ ರಾದ ಶ್ರೀ ಯುತ ಜಿ.ಕೆ.ಭಟ್ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಸದಸ್ಯರ ಸಾಮಾಜಿಕ ಮತ್ತು ಆರ್ಥಿಕ ಸಬಲೀಕರಣಕ್ಕೆ ಪಾರದರ್ಶಕವಾಗಿರುವ ನಮ್ಮ ಈ ಸ್ವ ಸಹಾಯ ಸಂಘಗಳನ್ನು ಬೆಳೆಸಬೇಕು ಎಂದು ಅಭಿಪ್ರಾಯ ಪಟ್ಟರು. ಇಂದಿನ ಕಾರ್ಯಕ್ರಮ ದಲ್ಲಿ ಪಿ. ಸುಬ್ರಹ್ಮಣ್ಯ ರಾವ್, ಸುರೇಶ್ ಭಂಡಾರಿ ಅರ್ಭಿ, ಸಂತೋಷ ಕುಮಾರ್ ನೆತ್ತರಕೆರೆ, ಗಣ್ಯರಾಗಿ ಸಭೆಯಲ್ಲಿದ್ದರು.
ಎಲ್ಲಾ ಗಣ್ಯರು ಹಾಗೂ ಸದಸ್ಯರಿಂದ ಭಾರತ ಮಾತಾ ಪೂಜನಾ ಕಾರ್ಯಕ್ರಮ ನೆರವೇರಿಸಲಾಯಿತು.ನಂತರ ಡಾಕ್ಟರ್ ಜಿ ಹಾಗೂ ಗುರೂಜಿ ಯವರ ಭಾವಚಿತ್ರ ಪರಿಚಯವನ್ನು ಸುಧಾಕರ್ ಅವರು ನಡೆಸಿಕೊಟ್ಟರು., ಚಂದ್ರಶೇಖರ ರವರು ಸ್ವಾಗತಿಸಿದರು, ಯಶವಂತ ರವರು ಅಮೃತ ವಚನ, ವಿಶ್ವನಾಥ ರವರು ಶ್ಲೋಕ, ಲೋಕೇಶ್ ರವರು ಹಾಡು, ಸಂತೋಷ ಕುಮಾರ್ ವರದಿ ವಾಚಿಸಿದರು.
ನಂತರ ತಂಡಗಳಿಗೆ ಹಾಡು, ರಸಪ್ರಶ್ನೆ , ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು ಹಾಗೂ ವಿಜೇತ ತಂಡಗಳಿಗೆ ಅಭಿನಂದಿಸಲಾಯಿತು.
ಹೊಸ ಕಾರ್ಯಕಾರಿಣಿ ಸಮಿತಿ ರಚಿಸಲಾಯಿತು ಹಾಗೂ ಪ್ರತಿ ತಂಡದಿಂದ ಎರಡು ಸದಸ್ಯರನ್ನು ಆಯ್ಕೆ ಮಾಡಲಾಯಿತು. ಮುಂದಿನ ಪ್ರತಿ 2 ತಿಂಗಳಿನಿಂದ ಮೊದಲ ಆದಿತ್ಯವಾರ ಬೆಳಿಗ್ಗೆ 8-00 ರಿಂದ 9-00 ಗಂಟೆಯವರೆಗೆ ಕಾರ್ಯಕಾರಿಣಿ ಸಭೆ ನಡೆಸುವುದೆಂದು ನಿರ್ಣಯಿಸಲಾಯಿತು.
ಸಮಾರೋಪ ಭಾಷಣ ಮಾಡಿದ ಒಕ್ಕೂಟದ ಅಧ್ಯಕ್ಷರು ಸ್ವ ಸಹಾಯ ಸಂಘಗಳ ಮೂಲ ಉದ್ದೇಶ ಸ್ವಾವಲಂಬನೆ, ಪ್ರತಿಯೊಬ್ಬ ಸದಸ್ಯನೂ ಇದನ್ನು ಸಾಧಿಸಲು ಪ್ರಯತ್ನಿಸಬೇಕು ಎಂದರು. ಹಣದ ವ್ಯವಹಾರವಾದ ಕಾರಣ ತಂಡಗಳು ಕಟ್ಟುನಿಟ್ಟಾಗಿ ನಿಯಮಗಳನ್ನು ಪಾಲಿಸಬೇಕೆಂದು ಕರೆಕೊಟ್ಟರು.
ಒಬ್ಬ ವ್ಯಕ್ತಿಯಿಂದ ಸಂಘ ಕ್ಕೆ ಕೆಟ್ಟ ಹೆಸರು ಬರಬಾರದು, ಅದಕ್ಕಾಗಿ ತಪ್ಪು ಮಾಡಿದಾಗ ದಂಡ ವಿಧಿಸುವುದು ಅನಿವಾರ್ಯ, ಸಂಘ ಬೆಳೆದು ಸಂಸ್ಥೆಯಾಗಿ, ಊರಿನ ಅಭಿವೃದ್ಧಿಗೆ ಸಹಕಾರಿ ಯಾಗಲಿ ಎಂದು ಅಭಿಪ್ರಾಯ ಪಟ್ಟರು.
ಜೊತೆ ಕಾರ್ಯದರ್ಶಿ ಸುಧಾಕರ್ ರವರ ಧನ್ಯವಾದಗಳೊಂದಿಗೆ ಸಭೆ ಯನ್ನು ಮುಕ್ತಾಯಗೊಳಿಸಲಾಯಿತು.







