ಬಂಟ್ವಾಳ: ತಾಲೂಕು ಇಂಜಿನಿಯರ್‍ಸ್ ಎಸೋಸಿಯೇಶನ್ ಇದರ ಆಶ್ರಯದಲ್ಲಿ ಭಾರತರತ್ನ ಸರ್‍. ಎಂ. ವಿಶ್ವೇಶ್ವರಯ್ಯರವರ ೧೫೯ನೇ ಜನ್ಮ ದಿನಾಚರಣೆ ಇಂಜಿನಿಯರ್‍ ದಿನಾಚರಣೆ ಬಿಸಿ ರೋಡಿನ ಹೋಟೆಲ್ ಶ್ರೀನಿವಾಸ್ ರೆಸಿಡೆನ್ಸಿಯಲ್ಲಿ ಇತ್ತೀಚೆಗೆ ಆಯೋಜಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಬಂಟ್ವಾಳ ಯೋಜನಾ ಪಾಧಿಕಾರ ಸದಸ್ಯ ಕಾರ್‍ಯದರ್ಶಿ ಇಂಜಿನಿಯರ್‍ ಅಭಿಲಾಶ್ ಎಂ.ಪಿ.ಯವರು ಸರ್‍.ಎಂ.ವಿಶ್ವೇಶ್ವರಯ್ಯ ರವರು ದೇಶ ಕಂಡ ಅಪ್ರತಿಮ ಮೇಧಾವಿ, ಅವರು ಕೇವಲ ಇಂಜಿನಿಯರ್‍ ಆಗಿರದೆ ದಕ್ಷ ಆಡಳಿತಗಾರ ಹಾಗೂ ಆರ್ಥಿಕ ತಜ್ಞರಾಗಿದ್ದರು. ಅವರ ಕಾರ್ಯ ದಕ್ಷತೆ, ಪ್ರಾಮಾಣಿಕತೆಯನ್ನು ಇಂಜಿನಿಯರವರು ಅಳವಡಿಸಿಕೊಂಡಾಗ ಪ್ರತಿಯೊಬ್ಬರು ಯಶಸ್ಸನ್ನು ಕಂಡುಕೊಳ್ಳಲು ಸಾಧ್ಯ , ಸುಂದರ ನಗರ ನಿರ್ಮಾಣದಲ್ಲಿ ಇಂಜಿನಿಯರ್‍ ರವರ ಪಾತ್ರ ಮಹತ್ವದ್ದು ಎಂಬ ಆಶಯ ವ್ಯಕ್ತಪಡಿಸಿದರು.


ಎಸೋಸಿಯೇಶನ್ ಅಧ್ಯಕ್ಷ ಇಂಜಿನಿಯರ್‍ ಅಜಯ್ ಪ್ರದೀಪ್ ಅಧ್ಯಕ್ಷತೆ ವಹಿಸಿದರು, ಇಂಜಿನಿಯರ್‍ ಸತೀಶ್ ಕುಲಾಲ್ ಸ್ವಾಗತಿಸಿ ತಾರಾನಾಥ ಕೊಟ್ಟಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ನಿಕಟಪೂರ್ವ ಅಧ್ಯಕ್ಷ ಇಂಜಿನಿಯರ್‍ ಸುಧೀರ್‍ ಶೆಟ್ಟಿ ಕೋಶಾಧಿಕಾರಿ ಇಂಜಿನಿಯರ್‍ ಪ್ರಾನ್ಸೀಸ್ ಡಿ.ಕುನ್ಹ ಜೊತೆಕಾರ್ಯದರ್ಶಿ ಇಂಜಿನಿಯರ್‍ ರಾಜೇಶ ಬಿ.ಉಪಸ್ಥಿತರಿದ್ದರು. ಬಂಟ್ವಾಳ ತಾಲೂಕಿನ ಎಲ್ಲಾ ಸಿವಿಲ್ ಎಂಜಿನಿಯರ್‍ ಸಭೆಯಲ್ಲಿ ಭಾಗವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಇಂಜಿನಿಯರ್‍ ಪ್ರಕಾಶ್ ಬಿ. ಧನ್ಯವಾದ ನೀಡಿದರು. ಇಂಜಿನಿಯರ್‍ ಶ್ರೀನಿಧಿ ಭಟ್ ಪ್ರಾಥಿಸಿ , ಕಾರ್ಯಕ್ರಮ ನಿರೂಪಿಸಿದರು

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here