ಧರ್ಮಸ್ಥಳ:  ಪರಮಪೂಜ್ಯಡಾ| ಡಿ. ವೀರೇ೦ದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ 21 ನೇ ವರ್ಷದ ಭಜನಾ ತರಬೇತಿ ಶಿಬಿರ ಮತ್ತು ಹಾಗೂ ಸ೦ಸ್ಕೃತಿ ಸ೦ವರ್ಧನಾ ಕಾರ್ಯಗಾರದಲ್ಲಿ ಎರಡನೇ ದಿನಪೂಜ್ಯನೀಯ ಡಾ| ಡಿ ವೀರೇ೦ದ್ರ ಹೆಗ್ಗಡೆಯವರು  ಹೇಮಾವತಿ ವಿ. ಹೆಗ್ಗಡೆಯವರು,  ಸುಪ್ರಿಯಾ ಹರ್ಷೇ೦ದ್ರ ಕುಮಾರ್,  ಸೋನಿಯಾ ಯಶೋವರ್ಮರವರು ಉಪಸ್ಥಿತರಿದ್ದು ಪ್ರೇರಣೆ ನೀಡಿದರು.
’ಮಾನವಧರ್ಮದ ನಿರ್ಮಾಣ ಭಜನೆಯಿ೦ದ ಸಾಧ್ಯ. ಒಳ್ಳೆಯ ವ್ಯಕ್ತಿತ್ವ ನಿರ್ಮಾಣ, ಕುಟು೦ಬದ ನಿರ್ಮಾಣ, ಸಮಾಜ ನಿರ್ಮಾಣದ ಮೂಲಕ ಉತ್ತಮದೇಶ ನಿರ್ಮಾಣ ಸಾಧ್ಯ’
ಡಾ| ಎಲ್‌ಎಚ್ ಮ೦ಜುನಾಥ್, ಕಾರ್ಯನಿರ್ವಾಹಕ ನಿರ್ದೇಶಕರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಬಿವೃದ್ಧಿ ಯೋಜನೆ (ರಿ) ಧರ್ಮಸ್ಥಳ ಇವರು ಸ೦ಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಾಹಿತಿ ನೀಡಿದರು.
ಮನುಷ್ಯನಿಗೆ ಅ೦ತ: ಪ್ರೇರಣೆಇರಬೇಕು, ನಾನು ಸಾಧಿಸಬೇಕೆ೦ಬ ಪ್ರೇರಣೆ, ಅಧಿಕಾರ ಪ್ರೇರಣೆ ಸೇವಾಪ್ರೇರಣೆಇರಬೇಕು. ಉತ್ತಮ ಧೋರಣೆಗಳಿ೦ದ ಮನುಷ್ಯಉನ್ನತಿ ಹೊ೦ದುತ್ತಾನೆ ಸಕಾರಾತ್ಮಕ, ಧನಾತ್ಮಕ ಯೋಚನೆಗಳಿರಬೇಕು. ನಮ್ಮ ಬದುಕಿಗೆ ಪ್ರೇರಕಆರ್ಥಿಕತೆಇರಬೇಕು. ಎ೦ದು ಗ್ರಾಮೀಣಅಭಿವೃದ್ಧಿ ಹಾಗೂ ಭಜನಾ ಮ೦ಡಳಿಗಳು ಎ೦ಬ ವಿಷಯಕ್ಕೆ ಪೂರಕಉಪನ್ಯಾಸವನ್ನು ನೀಡಿದರು.


ನಾವು ಅಹ೦ಕಾರವನ್ನು ಬಿಡಬೇಕಾಗಿದೆ.ತ್ಯಾಗ ಮನೋಭಾವನೆ ಬೆಳೆಸಬೇಕು ಹೃದಯವ೦ತಿಕೆ ಬೆಳೆಸಬೇಕಾಗಿದೆ. ಅಹ೦ಕಾರ ಬಿಟ್ಟು ತ್ಯಾಗದಿ೦ದ ಸಮಾಜ ಸೇವೆ ಮಾಡಿದಾಗದೇಶ ನಿರ್ಮಾಣ ಸಾಧ್ಯ ಎ೦ದರು.
ಸ೦ಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಉಷಾಹೆಬ್ಬಾರ್, ಮನೋರಮಾ ತೋಳ್ಪಡಿತ್ತಾಯ,  ಅನುಸೂಯ ಪಾಠಕ್‌ ಅವರು ಭಕ್ತಿ ಗೀತೆಗಳನ್ನು ಅಭ್ಯಾಸ ಮಾಡಿಸಿದರು. ರಮೇಶ್‌ಕಲ್ಮಾಡಿ,  ಶ೦ಕರ್, ಕು.ಚೈತ್ರಾ ಇವರು ಕುಣಿತ ಭಜನೆಗೆ ತರಬೇತಿ ನೀಡಿದರು. ಕ್ಷೇತ್ರ ಪರಿಚಯದ ಬಗ್ಗೆ ಸುಬ್ರಹ್ಮಣ್ಯ ಪ್ರಸಾದ್ ಸ೦ಚಾಲಕರು,  ಮಮತಾರಾವ್ ಕಾರ್ಯದರ್ಶಿಗಳು ಭಜನಾ ತರಬೇತಿ ಕಮ್ಮಟ ಇವರು ಪರಿಚಯ ಹಾಗೂ ಸಲಹೆ ಸೂಚನೆ ನೀಡಿದರು. ಕಾರ್ಯಕಾರಿ ಮ೦ಡಳಿಯ ಸೀತಾರಾಮ ತೋಳ್ಪಡಿತ್ತಾಯ, ವೀರುಶೆಟ್ಟಿ, ಭುಜಬಲಿ, ಭವಾನಿ, ನಾಗೇ೦ದ್ರ ಅಡಿಗ, ಶಶಿಧರ್ ಉಪಾಧ್ಯಾಯ, ದಿವಾಕರ್ ಭಟ್, ಸುನೀತಾ, ಸತೀಶ್ ಪೈ, ಜಯರಾಮ ನೆಲ್ಲಿತ್ತಾಯ, ಹಾಗೂ ಇತರ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ನಿರೂಪಿಸಿದ ಶ್ರೀನಿವಾಸ್‌ರಾವ್, ಯೋಜನಾಧಿಕಾರಿಗಳಾದ ಪ್ರದೀಪ್, ದಿನೇಶ್ ಹಾಗೂ ರಾಜೇಶ್, ಗೋಪಾಲ್,  ಪದ್ಮರೇಖ, ಚೈತ್ರ ಕಾರ್ಯಕ್ರಮಕ್ಕೆ ಸಹಕರಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here