(ಚಿತ್ರ / ವರದಿ : ರೊನಿಡಾ ಮುಂಬಯಿ)

ಮುಂಬಯಿ: ರಂಗಭೂಮಿ ಒಂದು ಸಮುದ್ರದ ತರಹ. ಕಲಿತಷ್ಟೂ ಕಡಿಮೆಯೇ. ಪ್ರತಿಯೊಂದು ಕಲಾವಿದರಿಗೆ ಕಲಿಕೆಯ ಹಂಬಲ ಇರಬೇಕು. ಶಿಸ್ತು ಮತ್ತು ಸಮಯಪ್ರಜ್ನೆ ಅತ್ಯಂತ ಅಗತ್ಯ. ರಂಗಭೂಮಿ ತಾಯಿಯ ಹಾಗೆ. ಅದರ ಕುರಿತು ಆಧರ, ಪ್ರೀತಿ, ಮಮತೆ ಬೇಕು. ರಂಗ ತರಬೇತಿ ಶಿಬಿರದಲ್ಲಿ ಇವೆಲ್ಲವನ್ನು ಕಲಿಯಲು ಅವಕಾಶ ಇರುತ್ತದೆ. ಮುಂಬಯಿ ನಗರದಲ್ಲಿ ಅದೆಷ್ಟೋ ಸಂಘಟನೆಗಳಿವೆ. ಆದರೆ ಈ ರೀತಿಯ ಅರ್ಥಪೂರ್ಣ ಕಾರ್ಯವನ್ನು ಹಮ್ಮಿಕೊಂಡ ಚಾರ್ಕೋಪ್ ಕನ್ನಡ ಬಳಗಕೆ ಅಭಿನಂದನೀಯ ಎಂದು ಮಹಾನಗರದ ಪ್ರತಿಷ್ಠಿತ, ಪ್ರಶಸ್ತಿ ಪುರಸ್ಕೃತ ನಾಟಕಕಾರ ನಾರಾಯಣ ಶೆಟ್ಟಿ ನಂದಳಿಕೆ ಹೇಳಿದರು.

ಮುಂಬಯಿ ಉಪನಗರದ ಚಾರ್ಕೋಪ್ ಕನ್ನಡಿಗರ ಬಳಗ ಹಮ್ಮಿಕೊಂಡಿದ್ದ ೪ದಿನದ ರಂಗ ತರಬೇತಿ ಶಿಬಿರದ ಸಮಾರೋಪ ಸಮಾರಂಭವು ಕಳೆದ ಭಾನುವಾರ ಕಾಂದಿವಿಲಿ ಪಶ್ಚಿಮದ ಪೊಯಿಸರ್ ಜಿಮ್ಖಾನದ ಸಭಾಗೃದಲ್ಲಿ ಕನ್ನಡಿಗರ ಬಳಗದ ಅಧ್ಯಕ್ಷ ಮುದ್ದು ಕೃಷ್ಣ ಎನ್.ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಸಲಾಗಿದ್ದು ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದು ಶಿಬಿರಾಥಿಗಳಿಗೆ ಪ್ರಮಾಣ ಪತ್ರಗಳನ್ನು ಪ್ರದಾನಿಸಿ ಗೌರವಿಸಿ ನಂದಳಿಕೆ ಮಾತನಾಡಿದರು.

ಅತಿಥಿಯಾಗಿ ಸಂಗೀತ ಶಿಕ್ಷಕಿ, ಹಾಡುಗಾರ್ತಿ ಅಪರ್ಣಾ ವಿನಯ ಭಟ್, ಶಿಬಿರದ ರೂವಾರಿ ಕವಿ, ಕಥೆಗಾರ, ನಾಟಕಕಾರ ಗೋಪಾಲ ತ್ರಾಸಿ, ಬಳಗದ ಉಪ ಸಮಿತಿಯ ಸಂಚಾಲಕರಾದ ಭಾಸ್ಕರ ಸರಪಾಡಿ ವೇದಿಕೆಯಲ್ಲಿದ್ದು ಅಥಿತಿ ಗಣ್ಯರನ್ನೊಳಗೊಂಡು ಶಿಬಿರಾಥಿ ಶಿಷ್ಯರು ಶಿಬಿರದ ಗುರುಗಳಾದ ಸಾ.ದಯ ಇವರಿಗೆ ಗುರುಕಾಣಿಕೆ ನೀಡಿ ಸನ್ಮಾನಿಸಿದರು. ಶಿಬಿರಾಥಿಗಳಾದ ಆಶ್ಲೇಷ ಚೇವರ, ವಂದನಾ ಸಾಲ್ಯಾನ್, ವೀಣಾ ದೀಪಕ್ ಸುವರ್ಣ, ಮನೋಜ್ ಸಾಲಿಯಾನ್, ಎಸ್.ಗೌರಿ, ಜಯಲಕ್ಷಿ ಶೆಟ್ಟಿ, ಬಳಗದ ವಿಶ್ವಸ್ಥ ಸದಸ್ಯ ಎಂ.ಎಸ್ ರಾವ್ ತಮ್ಮ ಅನುಭವಗಳನ್ನು ಹಂಚಿಕೊಂಡರು.

ರಂಗಭೂಮಿಯ ಸೂಕ್ಷ್ಮತನ್ಗ ತಿಳಿದುಕೊಳ್ಳಲು ರಂಗತರಬೇತಿಯ ಅವಶ್ಯಕತೆ ಅಗತ್ಯವಿದೆ. ಬರೇ ರಂಗ ತರಬೇತಿಯಿಂದ ನಟರನ್ನು ತಯಾರಿಸಲು ಸಾಧ್ಯವಿಲ್ಲ. ಆದರೆ ರಂಗಭೂಮಿಯಿಂದ ಓರ್ವ ವ್ಯಕ್ತಿಯ ವಿಕಾಸ, ವ್ಯಕ್ತಿತ್ವ ಬೆಳವಣಿಗೆಗೆ, ಮನಶಾಸ್ತ್ರದ ಹಿನ್ನಲೆಯಲ್ಲಿ , ನಟರಾದವರಿಗೆ ಪಾತ್ರಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ. ಮುಂದೆ ರಂಗಭೂಮಿಯಲ್ಲಿ ಸರಿಯಾದವರ ಮಾರ್ಗದರ್ಶನದ ಜೊತೆ ನಿರ್ಬಂಧನವಿಲ್ಲದ ಕಡೆ ತೊಡಗಿಸಿಕೊಳ್ಳಿ ಎಂದು ಶಿಬಿರದ ಸಂಪನ್ಮೂಲ ವ್ಯಕ್ತಿ, ಕವಿ, ರಂಗತಜ್ಞ ಸಾ.ದಯ ಸಲಹಿದರು.

ಯಾವ ವಿದ್ಯೆಯನ್ನು ಕಲಿಯಬೇಕಾದರೂ ನುರಿತ ಗುರುವಿನ ಅಗತ್ಯವಿದೆ. ಈ ಶಿಬಿರದಲ್ಲಿ ಕಲಿತದ್ದರಲ್ಲಿ ಹತ್ತು ಪ್ರತಿಶತ:ವನ್ನು ಬದುಕಿನಲ್ಲಿ ಅಳವಡಿಸಿಕೊಂಡರೂ ಸಾಕು, ಜೀವನದಲ್ಲಿ ಯಶಸ್ಸು ಖಂಡಿತ. ನಿಮ್ಮ ಸಹಕಾರದಿಂದ
ಸಂಘ ಮುಂದಿನ ದಿನಗಳಲ್ಲಿ ಇಂತಹ ಅನೇಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಿದೆ. ನಮ್ಮ ಬಳಗದ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಭಾಗದ ಭಾಸ್ಕರ ಸರಪಾಡಿ, ಗೋಪಾಲ ತ್ರಾಸಿ ಇದಕೆ ಅಭಿನಂದನಾರ್ಹರು ಎಂದ ಮುದ್ದು ಕೃಷ್ಣ ಅಧ್ಯಕ್ಷೀಯ ಭಾಷಣದಲ್ಲಿ ತಿಳಿಸಿದರು.

ಅಪರ್ಣಾ ಭಟ್ ಮಾತನಾಡಿ ಸಂಗೀತದ ಮಹತ್ವ ಎಲ್ಲಾ ಕಡೆ ಇರುತ್ತದೆ. ನಾಟಕದಲ್ಲಿ ಭಾವನೆಗಳ ಅಭಿವ್ಯಕ್ತಿಗೆ ರಂಗಗೀತೆ ಪೂರಕವಾಗಿರುತ್ತದೆ. ರಂಗ ಶಿಬಿರ ಹೊಸ ರೀತಿಯದಾಗಿದ್ದು ನನಗೆ ಕುತೂಹಲ ಹುಟ್ಟಿಸಿದೆ ಎಂದರು.

ರಂಗ ಶಿಬಿರದ ಮೂಲಕ ನಾಟಕದ ಅರಿವಿನ ಜೊತೆ ಜೊತೆಗೆ ನಮ್ಮನ್ನು ನಾವು ತಿದ್ದಿಕೊಳ್ಳಲು ಸಾಧ್ಯ. ನಮ್ಮ ವ್ಯಕ್ತಿತ್ವದಲ್ಲಿ ಮಾಡಿಕೊಳ್ಳುವ ಸಣ್ಣ ಸಣ್ಣ ಬದಲಾವಣೆಗಳೆ ವ್ಯಕ್ತಿತ್ವ ವಿಕಾಸನದ ಮೊದಲ ಪಾಠ. ಇದು ರಂಗಭೂಮಿಯಿಂದ ಸಾಧ್ಯವಿದೆ ಎಂದೇಳಿ ಗೋಪಾಲ ತ್ರಾಸಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಭಾಸ್ಕರ ಸರಪಾಡಿ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡುತ್ತ, ಇಂಥ ಶಿಭಿರಗಳನು ಮಾಡುದರಿಂದ ಯುವಕರಿಗೆ ಸಂಘದ ಮೇಲೆ ಗೌರವ ಹೆಚ್ಚುತದೆ.ಮುಂದೆ ಈ ಸಮುಸ್ಥೆ ಸಾಹಿತ್ಯ, ಸಂಸ್ಕೃತಿಕ ಕಾರ್ಯಕ್ರಮ ಮಾಡಲು ಒಳೆಯ ಬೆಳವಣಿಗೆ ಮುಂದೆ ಇಂತಹ ಬೇರೆ ಬೇರೆ ಶಿಬಿರಗಳ್ನು ಮಾಡುವಲ್ಲಿ ನಿಮ್ಮ ಸಹಕಾರ ಬೇಕು ಶಿಬಿರದ ಯಶಸ್ಸಿಗೆ ಕಾರಣಕರ್ತರಾದವರನ್ನೆಲ್ಲಾ ಸ್ಮರಿಸಿ ಧನ್ಯವಾದ ಹೇಳಿದರು.

ವಿಶ್ವಸ್ಥ ಸದಸ್ಯರಾದ ಜಯ ಸಿ.ಶೆಟ್ಟಿ, ನಾಟಕಕಾರ ತೋನ್ಸೆ ವಿಜಯಕುಮಾರ ಶೆಟ್ಟಿ, ಕವಿ ಅಶೋಕ ವಳದೂರ, ಜಯಕರ ಡಿ.ಪೂಜಾರಿ, ಹರೀಶ್ ಚೇವಾರ್, ಮನೋಜ್ ಸಾಲಿಯಾನ್, ಮಹೇಂದ್ರ ಕಾಂಚನ್, ಮಹಿಳಾ ವಿಭಾಗದ ಸಂಚಾಲಕಿಯರಾದ ಪದ್ಮಾವತಿ ಬಿ.ಶೆಟ್ಟಿ, ವಸಂತಿ ವಿ.ಸಾಲಿಯಾನ್ ಮತ್ತು ಕಾರ್ಯಕಾರಿ ಸಮಿತಿಯ ಎಲ್ಲ ಸದಸ್ಯರು ಹಾಜರಿದ್ದು ಶಿಭಿರಾಥಿ ಎಸ್.ಗೌರಿ, ಭೂಮಿ, ಅಂಶಿಕಾ ಪ್ರಾರ್ಥನೆಗೈದರು. ರೂಪ ಭಟ್, ತನುಜಾ ಭಟ್ ಅತಿಥಿಗಳನ್ನು ಪರಿಚಯಿಸಿದರು. ಜೊತೆ ಕಾರ್ಯದರ್ಶಿ ವಿಜಯ ಡೊಂಬಯ್ಯ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾ ಉಪ ಸಮಿತಿಯ ಸಂಚಾಲಕ ಪ್ರವೀಣ ಶೆಟ್ಟಿ. ಶಿಮಂತೂರು ವಂದಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here