Thursday, October 26, 2023

ಸಂಚಾರಕ್ಕೆ ಅಡ್ಡಿ:ಎರಡು ಕಾರು ವಶ, ಇಬ್ಬರ ಮೇಲೆ ಪ್ರಕರಣ ದಾಖಲು ಮಾಡಿದ ವಿಟ್ಲ ಎಸ್.ಐ.ಯಲ್ಲಪ್ಪ

Must read

ಬಂಟ್ವಾಳ: ರಸ್ತೆ ಯಲ್ಲಿ ನಿಲ್ಲಿಸಿದ ಎರಡು ಕಾರುಗಳನ್ನು ವಶಪಡಿಸಿದ ಪೋಲೀಸರು ಅದರ ಮಾಲಕರ ಮೇಲೆ ಪ್ರಕರಣ ದಾಖಲಿಸಿದ ಘಟನೆ ವಿಟ್ಲ ಪೋಲಿಸ್ ಠಾಣೆಯಲ್ಲಿ ನಡೆದಿದೆ.

ಇಂದು ಸಂಜೆ 4-30ರ ಸುಮಾರಿಗೆ ವಿಟ್ಲ ಪೇಟೆಯ ಮೇಗಿನ ಪೇಟೆಯಲ್ಲಿ ಸಾರ್ವಜನಿಕರಿಗೆ ತೊಂದರೆ ಉಂಟಾಗುವ ರೀತಿಯಲ್ಲಿ 2 ಕಾರುಗಳನ್ನು ಅದರ ಚಾಲಕರು ರಸ್ತೆಯಲ್ಲಿ ನಿಲ್ಲಿಸಿ ಹೋಗಿದ್ದು ಅ ಸ್ಥಳದಲ್ಲಿ ಸುಮಾರು ಅರ್ದ ಗಂಟೆಗೂ ಅಧಿಕ ಸಮಯ ಸಂಚಾರ ಅಸ್ಥವ್ಯಸ್ಥ ಮಾಡಿದ ಎರಡು ಕಾರುಗಳನ್ನು ವಶಕ್ಕೆ ಪಡೆದುಕೊಂಡ ಪೋಲೀಸರು ಕಾರು ಬಿಡಿಸಲು ಠಾಣೆಗೆ ಬಂದ ಅದರ ಚಾಲಕರನ್ನೂ ಸಹ ವಶಕ್ಕೆ ಪಡೆದು ಪ್ರಕರಣ ದಾಖಲು ಮಾಡಿದ ಘಟನೆ ಇಂದು ವಿಟ್ಲದಲ್ಲಿ ನಡೆದಿದೆ.

ಸಂಚಾರಕ್ಕೆ ಅಡ್ಡಿಪಡಿಸಿದ ಹಿನ್ನಲೆಯಲ್ಲಿ ವಿಟ್ಲ ಎಸ್.ಐ.ಯಲ್ಲಪ್ಪ ಇವರ ಪ್ರಕರಣ ದಾಖಲು ಪಡಿಸಿದ್ದಾರೆ

More articles

Latest article