ಉಜಿರೆ: ವಿಜ್ಞಾನ ಮತ್ತುತಂತ್ರಜ್ಞಾನ ಪರಸ್ಪರ ಪೂರಕವಾಗಿದ್ದುಇದರ ಬಳಕೆಯಿಂದ ದೇಶದಉತ್ತಮ ಪ್ರಗತಿ ಸಾಧ್ಯವಾಗುತ್ತದೆಎಂದು ಬೆಂಗಳೂರಿನ ಇಸ್ರೋ ಪ್ರಾಧ್ಯಾಪಕಡಾ. ಬಿ.ಎನ್. ಸುರೇಶ್ ಹೇಳಿದರು.


ಅವರು ಸೋಮವಾರಉಜಿರೆಯಲ್ಲಿಎಸ್.ಡಿ.ಎಂ.ಕಾಲೇಜಿನಲ್ಲಿ ವಿಶೇಷ ಉಪನ್ಯಾಸ ನೀಡಿದರು.
ವಿಜ್ಞಾನವುಜ್ಞಾನವನ್ನು ನೀಡಿದರೆ, ಆ ಜ್ಞಾನವನ್ನು ನಮ್ಮದೈನಂದಿನ ಜೀವನದಲ್ಲಿ ಸುತ್ತಮುತ್ತ ನಡೆಯುವ ಘಟನೆಗಳನ್ನು ಕುತೂಹಲದಿಂದ ವೀಕ್ಷಿಸಿ, ಸಮಸ್ಯೆಗಳಿಗೆ ಪರಿಹಾರಕಂಡುಹಿಡಿಯಲು ಪ್ರಯತ್ನಿಸಬೇಕು. ಯುವಜನತೆದೇಶದಅಮೂಲ್ಯ ಮಾನವ ಸಂಪನ್ಮೂಲವಾಗಿದ್ದು ವಿಜ್ಞಾನ, ತಂತ್ರಜ್ಞಾನ, ಸಂಶೋಧನೆ ಹಾಗೂ ಹೊಸ ಆವಿಷ್ಕಾರದಲ್ಲಿ ಹೆಚ್ಚಿನ ಆಸಕ್ತಿ ವಹಿಸಬೇಕು.ಜನಸಾಮಾನ್ಯರ ಸಮಸ್ಯೆಗಳ ಪರಿಹಾರಕ್ಕೆ ವಿಜ್ಞಾನ ಮತ್ತುತಂತ್ರಜ್ಞಾನ ವರದಾನವಾಗಬೇಕು. ನಿತ್ಯವೂ ವಿಜ್ಞಾನಕ್ಷೇತ್ರದಲ್ಲಿಕ್ಷಿಪ್ರ ಬದಲಾವಣೆಗಳಾಗುತ್ತವೆ. ಕೃಷಿ ಹಾಗೂ ನೀರಿನ ಬಳಕೆಯಲ್ಲಿ ವಿಜ್ಞಾನ ಮತ್ತುತಂತ್ರಜ್ಞಾನತುಂಬಾಉಪಯುಕ್ತವಾಗಿದೆಎಂದುಅವರುಅಭಿಪ್ರಾಯಪಟ್ಟರು.
ಚಂದ್ರಯಾನದ ಬಗ್ಯೆ ವಿದ್ಯಾರ್ಥಿಗಳ ಕುತೂಹಲಕಾರಿ ಪ್ರಶ್ನೆಗಳಿಗೆ ಅವರು ಸಮರ್ಪಕಉತ್ತರ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ.ಎಸ್. ಸತೀಶ್ಚಂದ್ರ ಸ್ವಾಗತಿಸಿದರು.ಪ್ರೊ.ಕುಮಾರ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here