ಬಂಟ್ವಾಳ: ಅಕ್ರಮ ಮರಳು ಸಾಗಾಟದ ಲಾರಿಗಳ ವಿರುದ್ದ ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್ ಅವರ ನೇತ್ರತ್ವದಲ್ಲಿ ಕಾರ್ಯಚರಣೆ.
ಮಧ್ಯರಾತ್ರಿ ಯಿಂದ ಕಾರ್ಯಚರಣೆ ನಡೆಸಿದ ತಹಶೀಲ್ದಾರ್ ನೇತ್ರತ್ವದ ತಂಡ ಐದು ಲಾರಿಗಳನ್ನು ವಶಕ್ಕೆ ಪಡೆದುಕೊಂಡು ಪೋಲೀಸರ ಕೈಗೆ ಹಸ್ತಾಂತರ ಮಾಡಿದ್ದಾರೆ.
ಅಕ್ರಮವಾಗಿ ದಾಸ್ತಾನು ಇರಿಸಲಾಗಿದ್ದ ಮರಳುಗಳನ್ನು ರಾತ್ರಿ ವೇಳೆ ಹೊರ ಜಿಲ್ಲೆಗಳಿಗೆ ದುಪ್ಪಟ್ಟು ಹಣಕ್ಕೆ ಮಾರಾಟ ಮಾಡಲು ಲಾರಿಗಳಲ್ಲಿ ತುಂಬಿಸಿ ಪರವಾನಿಗೆ ರಹಿತ ಸಾಗಿಸುತ್ತಿದ್ದ ಲಾರಿಗಳನ್ನು ತಡೆದು ಠಾಣೆಗೆ ಒಪ್ಪಿಸಿದ ತಹಶೀಲ್ದಾರ್.
ಮದ್ಯರಾತ್ರಿ ರಾತ್ರಿ ಸುಮಾರು 1.30 ರಿಂದ ಕಾರ್ಯಚರಣೆ ಆರಂಭ ಮಾಡಿದ ಇವರ ತಂಡ ಮುಂಜಾನೆ ವೇಳೆ ವಿವಿಧ ಕಡೆಗಳಲ್ಲಿ ಐದು ಲಾರಿಗಳನ್ನು ವಶಕ್ಕೆ ಪಡೆದುಕೊಂಡಿದೆ.
ಪಾಣೆಮಂಗಳೂರು ನರಹರಿ ಬಳಿಯಲ್ಲಿ ಎರಡು ಲಾರಿಗಳನ್ನು , ಮಾರ್ನಬೈಲು ಎಂಬಲ್ಲಿ ಒಂದು ಲಾರಿ , ಚೇಲೂರು ಎಂಬಲಿ ಒಂದು ಹಾಗೂ ವಿಟ್ಲದ ಪಡಿಬಾಗಿಲು ಎಂಬಲ್ಲಿ ಒಂದು ಲಾರಿಯನ್ನು ವಶಕ್ಕೆ ಪಡೆದುಕೊಂಡ ತಹಶೀಲ್ದಾರ್ ರಶ್ಮಿ ಅವರು ಅಕ್ರಮ ಮರಳು ಸಾಗಾಟದ ಲಾರಿ ಚಾಲಕರಿಗೆ ಮುಂಜಾನೆಯ ವೇಳೆ ಬಿಸಿಮುಟ್ಟಿಸಿದ್ದಾರೆ.


ವಶಕ್ಕೆ ಪಡೆದುಕೊಂಡ ಲಾರಿಗಳನ್ನು ಬಂಟ್ವಾಳ ನಗರ ಮತ್ತು ವಿಟ್ಲ ಪೋಲೀಸ್ ಠಾಣೆಗೆ ಹಸ್ತಾಂತರ ಮಾಡಿದ್ದಾರೆ.
ಕಂದಾಯ ನಿರೀಕ್ಷಕ ನವೀನ್ ಹಾಗೂ ಇಲಾಖೆಯ ಸಿಬ್ಬಂದಿ ಗಳು ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here